ದಿನ ಭವಿಷ್ಯ

11-07-2025

Jul 11, 2025 - 03:00
ದಿನ ಭವಿಷ್ಯ

            ಜ್ಯೋತಿರ್ಮಯ


ಅದೃಷ್ಟ ಸಂಖ್ಯೆ 2

೧.,ಮೇಷ:

 ಇಲ್ಲಿ ಗೆಲುವಾದರೆ ಅಲ್ಲಿ ಸೋಲು- ಹೀಗೆ ಮಿಶ್ರ ಫಲಗಳು. ಉದ್ಯೋಗದಲ್ಲಿ  ಸ್ವಲ್ಪ ಸುಧಾರಣೆ. ಉದ್ಯಮಿಗಳಿಗೆ ಕೆಲವು ವಿಭಾಗಗಳಲ್ಲಿ ಉತ್ತಮ ಲಾಭ‌ ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟದ ಸಾಧ್ಯತೆ  ಅಂತರ್ಮುಖತೆ ಸಾಧಿಸುವ ಪ್ರಯತ್ನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

     


೨. ವೃಷಭ:


  ಕೆಲವು ವೃತ್ತಿಯವರಿಗೆ ಸಮಯದೊಂದಿಗೆ ಸೆಣಸಾಟ. ವಸ್ತ್ರ,  ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ  ನಿರೀಕ್ಷಿತ  ಲಾಭ. ಎಲ್ಲ ಕ್ಷೇತ್ರಗಳಲ್ಲೂ ತಡೆಯಿಲ್ಲದ ಪ್ರಗತಿ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ , ಸಾಮರಸ್ಯವೃದ್ಧಿ. ಹತ್ತಿರದ ದೇವಮಂದಿರಕ್ಕೆ ಭೇಟಿ.
ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ

೩. ಮಿಥುನ:

  ಆಲಸ್ಯವನ್ನು ತೊಲಗಿಸಿದರೆ ಕ್ಷೇಮ. ತೋಟಗಾರಿಕೆ,ಜೇನು ವ್ಯವಸಾಯ ಆಸಕ್ತರಿಗೆ ಅನುಕೂಲ. ನೌಕರರ ವೇತನಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರ. ಧಾರ್ಮಿಕ‌ ಸಾಹಿತ್ಯ ಅಧ್ಯಯನ. ಮನೆಯವರ ಆರೋಗ್ಯ ಸುಧಾರಣೆ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.

೪. ಕರ್ಕಾಟಕ:


  ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು.  ಉದ್ಯಮಗಳಿಗೆ ಅನುಕೂಲ ವಾತಾವರಣ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ  ಪ್ರಮಾಣದಲ್ಲಿ ಲಾಭ. ಗೃಹೋತ್ಪನ್ನಗಳಿಂದ  ಅಧಿಕ ಆದಾಯ. ವಧೂ- ವರ ಅನ್ವೇಷಕರಿಗೆ ಶುಭ ಸೂಚನೆ. ಗಣೇಶ ದ್ವಾದಶನಾಮ ಸ್ತೋತ್ರ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


೫. ಸಿಂಹ:
  ಪಾಲುದಾರಿಕೆ  ಉದ್ಯಮದಲ್ಲಿ ನಿರೀಕ್ಷಿತ ಯಶಸ್ಸು. ಸರಕಾರಿ ನೌಕರರಿಗೆ  ಆತಂಕದ ಭಾವ.  ಸ್ವೋದ್ಯೋಗಿ ಮಹಿಳೆಯರಿಗೆ  ಸರ್ವತ್ರ ಯಶಸ್ಸು. ಕುಟುಂಬದ ಆಸ್ತಿ ವಿವಾದ ಸೌಹಾರ್ದಯುತವಾಗಿ ಪರಿಹಾರ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೬. ಕನ್ಯಾ:

 ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಬಂಧುಗಳ ಮನೆಯಲ್ಲಿ ವಿಶೇಷ ದೇವತಾ ಕಾರ್ಯ. ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ. ಮಕ್ಕಳ ಶಿಕ್ಷಣ ಮುಂದುವರಿಸಲು ಯೋಗ್ಯ ವ್ಯವಸ್ಥೆ. ವ್ಯವಹಾರ ಸಂಬಂಧ ಉತ್ತರಕ್ಕೆ ಪ್ರಯಾಣ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೭. ತುಲಾ:

 ಉದ್ಯೋಗ  ನಿರ್ವಹಣೆಯಲ್ಲಿ ಸಮಾಧಾನ. ಸಣ್ಣ ಉದ್ಯಮಿಗಳಿಗೆ ಉತ್ತಮ ಲಾಭ. ವಿವಾಹಾಸಕ್ತರಿಗೆ ಸಮರ್ಪಕ‌ ಜೋಡಿ ಲಭಿಸುವ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ. ಹಿರಿಯರ ಆರೋಗ್ಯ ಸಾಕಷ್ಟು ಸುಧಾರಣೆ.
ಗಣೇಶ ತ್ರಿಶತಿ ಸ್ತೋತ್ರ, ವೆಂಕಟೇಶ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೮. ವೃಶ್ಚಿಕ:
  ಉದ್ಯೋಗ, ವ್ಯವಹಾರ, ಎರಡರಲ್ಲೂ ಸಂತೃಪ್ತಿ. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ  ಲಾಭ. ಹಿರಿಯರ,  ಗೃಹಿಣಿಯರ, ಮಕ್ಕಳ‌ ಆರೋಗ್ಯ ಉತ್ತಮ.‌ಕುಟುಂಬದ ಸದಸ್ಯರಲ್ಲಿ ಸಾಮರಸ್ಯ ವೃದ್ಧಿ. ಹಳೆಯ ಗೆಳೆಯರ ಸೇರುವಿಕೆಯಲ್ಲಿ ಹೊಸ ವ್ಯವಹಾರ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕವಚ, ದೇವೀಸ್ತೋತ್ರ ಓದಿ.


೯. ಧನು:
  ಉದ್ಯೋಗ ಸ್ಥಾನದಲ್ಲಿ ಕ್ಲಪ್ತ ಸಮಯದಲ್ಲಿ ಕಾರ್ಯ‌. ಕೃಷಿ ಕ್ಷೇತ್ರದಲ್ಲಿ  ಪ್ರಯೋಗಗಳು ಯಶಸ್ವಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ ಆದಾಯ ಹತ್ತಿರದ ಬಂಧುಗಳಿಂದ  ಶುಭ ಸಮಾಚಾರ‌. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅವಕಾಶ. ಗಣೇಶ ಪಂಚರತ್ನ, ಶಿವಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.


೧೦. ಮಕರ:

  ಸಹೋದ್ಯೋಗಿಗಳಿಂದ ವಿಶೇಷ ಸಹಕಾರ. ಕಟ್ಟಡ ನಿರ್ಮಾಪಕರ ಸಮಸ್ಯೆ ನಿವಾರಣೆ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಅಧಿಕ ಲಾಭ. ಹಳೆಯ ಗೆಳೆಯರಿಂದ ಪಾಲುದಾರಿಕೆ ವ್ಯವಹಾರ ಪ್ರಸ್ತಾವ‌. ಬಂಧುಗಳ ಮನೆಗೆ ಭೇಟಿ. ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಹನುಮಾನ್  ಚಾಲೀಸಾ ಓದಿ.


೧೧. ಕುಂಭ:

   ಹೊಸ ಕಾರ್ಯ ಕೈಗೊಳ್ಳಲು ಪೂರಕವಾದ ವಾತಾವರಣ. ಉದ್ಯಮದ ಉತ್ಪನ್ನಗಳಿಗೆ ಸರ್ವತ್ರ  ಬೇಡಿಕೆ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಗೃಹೋತ್ಪನ್ನಗಳ  ಜನಪ್ರಿಯತೆ ವೃದ್ಧಿ. ಸಮಾಜ ಸೇವಾ ಕಾರ್ಯಗಳು ಮುಂದುವರಿಕೆ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.

೧೨. ಮೀನ:
 ನಿಯೋಜಿತ ಕಾರ್ಯಗಳು  ತೀವ್ರಗತಿಯಲ್ಲಿ ಮುಂದುವರಿಕೆ. ಹೊಸ ಕ್ಷೇತ್ರಕ್ಕೆ ಎಚ್ಚರಿಕೆಯಿಂದ ಪ್ರವೇಶ.  ಸರಕಾರಿ ಕಾರ್ಯಾಲಯಗಳಲ್ಲಿ  ಹಿತಾನುಭವ. ಗುರುಸಮಾನ ವ್ಯಕ್ತಿಯಿಂದ ಮಾರ್ಗದರ್ಶನ. ಹೊಸ ಕಾರ್ಯಯೋಜನೆಗೆ ಸಿದ್ಧತೆ. ಗಷೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.