ದಿನ ಭವಿಷ್ಯ

15-07-2025

Jul 15, 2025 - 03:00
ದಿನ ಭವಿಷ್ಯ


               ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ 6

೧.ಮೇಷ:
  ವ್ಯವಹಾರ ಕ್ಷೇತ್ರದಲ್ಲಿ  ಗಟ್ಟಿಯಾಗುವಿರಿ.ವಸ್ತ್ರ ಹಾಗೂ ಉಡುಪು ವ್ಯಾಪಾರಿಗಳಿಗೆಪ  ಹೆಚ್ಚು ಲಾಭ. ದೂರಗಾಮೀ ಲಾಭದ ಹೂಡಿಕೆಗಳಿಗೆ ಇದು ಸಕಾಲ. ಗುರುಹಿರಿಯರ ಮಾರ್ಗದರ್ಶನದ ಲಾಭ. ಶನಿಯ ಮಹಿಮೆಯಿದ್ದರೂ ಸಂಸಾರ ಸುಖ ಉತ್ತಮ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಶನಿಮಹಾತ್ಮೆ ಓದಿ.

೨. ವೃಷಭ:

  ಪ್ರಗತಿಗೆ ಅಡ್ಡಗಾಲು  ಹಾಕುತ್ತಿರುವ  ಹಿತಶತ್ರುಗಳ ಪರಾಭವ. ಉದ್ಯೋಗ, ವ್ಯವಹಾರ, ಸಂಸಾರ ಈ ಮೂರು ಕ್ಷೇತ್ರಗಳಲ್ಲೂ ನೆಮ್ಮದಿ. ಈ ದಿನ ನಿಮಗೆ ಎಲ್ಲ ದಿಕ್ಕುಗಳಿಂದಲೂ ಶುಭ ಸಮಾಚಾರಗಳು ಬರಲಿವೆ. ವ್ಯವಹಾರ ಕ್ಷೇತ್ರ ವಿಸ್ತರಣೆಯ ಯೋಚನೆ ಬೇಡ. ಹಿರಿಯರಿಗೆ ಗೌರವ ನೀಡಿ ಸಮಾಧಾನ.ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೩.ಮಿಥುನ:

  ದೇವತಾರಾಧನೆಯಿಂದ ಅಧಿಕ ಬಲ ಪ್ರಾಪ್ತಿ. ಉದ್ಯೋಗಸ್ಥರ ಮುನ್ನಡೆ. ಖನಿಜಗಳಿಗೆ ಸಂಬಂಧಪಟ್ಟ ವ್ಯವಹಾರಸ್ಥರಿಗೆ ವಿಶೇಷ ಯಶಸ್ಸು. ಗೃಹಾಲಂಕಾರ ಉದ್ಯಮಿಗಳಿಗೆ ಲಾಭ. ಹಿರಿಯ ಗೃಹಿಣಿಯರ ಆರೋಗ್ಯ ಸುಧಾರಣೆ. 
ಗಣೇಶ ಪಂಚರತ್ನ, ಶಿವಪಂಚಾಕ್ಷರ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.


೪.ಕರ್ಕಾಟಕ:

  ಪದೇ ಪದೇ ಕಾಡುತ್ತಿದ್ದ ಅನಾರೋಗ್ಯ ದೂರ.  ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಉತ್ತೇಜನ. ಬಂಧುವರ್ಗದಲ್ಲಿ ಮಂಗಲ ಕಾರ್ಯ. ಸಮಾಜ ಸೇವಾ ನಿರತರಿಗೆ ಅಪವಾದದಿಂದ ವಿಮೋಚನೆ. ವಯಸ್ಕರು, ಗೃಹಿಣಿಯರು, ಮಕ್ಕಳಿಗೆ ಸಮಾಧಾನ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೫.ಸಿಂಹ:

  ಉದ್ಯೋಗಸ್ಥರಿಗೆ ಶುಭಾನುಭವ. ಕಟ್ಟಡ ಸಾಮಗ್ರಿ, ಸಿದ್ಧ ಉಡುಪು ಹಾಗೂ ಕೃಷ್ಯುತ್ಪನ್ನ ಮಾರಾಟಗಾರರಿಗೆ ಅಧಿಕ ಲಾಭ. ಸಾಹಿತ್ಯ ಸೇವಾಸಕ್ತರಿಗೆ ಗೌರವ  ಪ್ರಾಪ್ತಿ. ಪ್ರಾಮಾಣಿಕತೆ, ಕಾರ್ಯತತ್ಪರತೆಗೆ ಮನ್ನಣೆ ಪ್ರಾಪ್ತಿ. ಹೋಟೆಲ್ ಉದ್ಯಮಿಗಳಿಗೆ ಹೊಸ ಸವಾಲುಗಳು ಎದುರು. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕವಚ, ಮಹಾಲಕ್ಷ್ಮಿ ಅಷ್ಟಕ ಓದಿ.


೬. ಕನ್ಯಾ:

 ಮೃದು ಮಾತಿನಿಂದ ಕಾರ್ಯಸಾಧನೆ. ಕಾರ್ಯಕ್ಷೇತ್ರ ವಿಸ್ತರಣೆಗೆ ಎಚ್ಚರಿಕೆಯಿಂದ ಹೆಜ್ಜೆಯಿಡುವುದು ಅವಶ್ಯ. ಪೂರ್ವ ದಿಕ್ಕಿನಿಂದ ಶುಭ ಸಮಾಚಾರ. ಬಂಧುವರ್ಗದಲ್ಲಿ ಉಪನಯನ, ವಿವಾಹಾದಿ ಮಂಗಲ ಕಾರ್ಯಗಳ ಸೂಚನೆ. ಗೆಳೆಯರಿಂದ ಅಯಾಚಿತ ಸಹಾಯ ಲಭಿಸುವ ಸಾಧ್ಯತೆ. ಗಣೇಶ ಕವಚ, ಶಿವಮಹಿಮ್ನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೭.ತುಲಾ:

  ಡೋಲಾಯಮಾನ ಸ್ಥಿತಿಯಿಂದ ಮುಕ್ತಿ.  ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ. ಉದ್ಯೋಗಾನ್ವೇಷಕರಿಗೆ ಯಶಸ್ಸು ಸನ್ನಿಹಿತ. ಹತ್ತಿರದ ದೇವತಾ ಸನ್ನಿಧಾನ ಭೇಟಿ ಸಂಭವ. ಗೃಹಿಣಿಯರಿಗೆ ಕಿರಿಕಿರಿಯಿಂದ ಮುಕ್ತಿ. ಗಣೇಶ ಕವಚ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೮.ವೃಶ್ಚಿಕ:
  ದೇವತಾರಾಧನೆಯಲ್ಲಿ ವಿಶೇಷ ಆಸಕ್ತಿ. ಗೃಹಿಣಿಯರಿಂದ ವಸ್ತ್ರಾಭರಣ ಖರೀದಿ. ಉದ್ಯೋಗಸ್ಥರಿಂದ ಸವಾಲುಗಳ ಯಶಸ್ವೀ ನಿರ್ವಹಣೆ. ವಧೂ- ವರಾನ್ವೇಷಣೆಯಲ್ಲಿ ತೊಡಗಿರುವವರಿಗೆ ಯಶಸ್ಸು. ಮಕ್ಕಳಿಗೆ ಅಧ್ಯಯನಾಸಕ್ತಿ ಮೂಡಿಸಲು ಪ್ರಯತ್ನ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.

೯. ಧನು

  ಕಾರ್ಯದಲ್ಲಿ ಪರಿಪೂರ್ಣತೆ ಸಾಧನೆ. ದೀರ್ಘಕಾಲೀನ ಹೂಡಿಕೆಗಳಿಂದ ಶುಭ. ತಾತ್ಕಾಲಿಕ ಆತಂಕಗಳು ದೂರ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಃಪ್ರಾಪ್ತಿ. ಹಿರಿಯರ ಆರೋಗ್ಯ ಸುಧಾರಣೆ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.


೧೦.ಮಕರ:

  ಮಕ್ಕಳ ಭವಿಷ್ಯದ ಕುರಿತಾದ ಚಿಂತೆಗೆ ಪರಿಹಾರ ಲಭ್ಯ. ಆಪ್ತರಿಂದ ಕಾರ್ಯಸಾಧ್ಯ ಸಲಹೆ. ಉದ್ಯೋಗ, ವ್ಯವಹಾರಗಳಲ್ಲಿ ಪೈಪೋಟಿ ಎದುರಿಸುವುದರಲ್ಲಿ ಯಶಸ್ವಿಯಾಗುವಿರಿ. ಕೃಷ್ಯಾಧಾರಿತ ಉದ್ಯಮ ಆಸಕ್ತರಿಗೆ ಶುಭ.  ದೂರದ ಬಂಧುಗಳಿಂದ ಶುಭ ವಾರ್ತೆ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಋಣಮೋಚಕ ಮಂಗಲ ಸ್ತೋತ್ರ  ಓದಿ.

೧೧. ಕುಂಭ:

  ವಿವಾದಗಳಿಂದ ದೂರವುಳಿಯುವ ಪ್ರಯತ್ನ. ಸ್ವಂತದ ಹಾಗೂ ಮನೆಯವರ ಆರೋಗ್ಯ ಗಮನಿಸಿ. ದೂರದ ಅತಿಥಿಗಳ ಆಗಮನ.ಸಂಗೀತ ಶ್ರವಣ, ನಾಮಸಂಕೀರ್ತನೆಗಳಿಂದ ಆನಂದ. ಹಿರಿಯರು, ಗೃಹಿಣಿಯರಿಗೆ ನೆಮ್ಮದಿ, ಮಕ್ಕಳಿಗೆ ಸಂಭ್ರಮದ ದಿನ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.


೧೨.ಮೀನ:

 ಉದ್ಯೋಗದಲ್ಲಿ ನೆಮ್ಮದಿ,ವ್ಯವಹಾರದಲ್ಲಿಝ ಉತ್ತಮ. ಹಿರಿಯರ ಅಪೇಕ್ಷೆ ಈಡೇರಿಸುವ ಪ್ರಯತ್ನದಲ್ಲಿ ಯಶಸ್ಸು ಲಭ್ಯ. ಕುಟುಂಬದ ಬಂಧುಗಳ  ಆಗಮನ ನಿರೀಕ್ಷೆ.  ಉದ್ಯೋಗ ಅರಸುತ್ತಿರುವವರಿಗೆ ಯಶಸ್ಸು. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.