ದಿನ ಭವಿಷ್ಯ

06-08-2025

Aug 6, 2025 - 10:45
ದಿನ ಭವಿಷ್ಯ


ಅದೃಷ್ಟ ಸಂಖ್ಯೆ  6

೧.ಮೇಷ:

ಹಿತಕರ ಅನುಭವಗಳನ್ನು ನೀಡುವ ಬುಧವಾರ. ಪರಿಶ್ರಮಕ್ಕೆ ತಕ್ಕ ಪ್ರತಿಫಲದ ಭರವಸೆ. ಉದ್ಯೋಗ, ಉದ್ಯಮಗಳಲ್ಲಿ ಯಶಸ್ಸು. ಆಪ್ತರಿಂದ ಅಯಾಚಿತ ನೆರವು ಲಭ್ಯ. ಸಾರ್ವಜನಿಕ ವ್ಯಕ್ತಿಗಳ ನಡೆನುಡಿಯಲ್ಲಿ ಸಂಯಮ ಇರಲಿ. ಗಣೇಶ ಕವಚ, ವೆಂಕಟೇಶ್ವರ ಸ್ತೋತ್ರ, ಶನಿಮಹಾತ್ಮೆ ಓದಿ.

೨.ವೃಷಭ:

ಸುಮಾರಾಗಿ ಲಾಭದಾಯಕ ದಿನ. ಉದ್ಯೋಗದಲ್ಲಿ ಹೆಚ್ಚು ಸಂತೃಪ್ತಿ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕೆಲಸದ ಒತ್ತಡ. ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ಮಕ್ಕಳು ಸಾಕುಪ್ರಾಣಿಗಳಿಂದ ದೂರವಿರಲಿ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಆದಿತ್ಯ ಹೃದಯ ಓದಿ.


೩. ಮಿಥುನ:

 ಆಮಿಷಗಳಿಂದ ದೂರವಿರಲು ಯತ್ನಿಸಿ.  ಉದ್ಯೋಗ ಸ್ಥಾನದಲ್ಲಿ ಎಲ್ಲರ ಸಹಕಾರ. ಉದ್ಯಮದಲ್ಲಿ  ಪ್ರಗತಿ ತೃಪ್ತಿಕರ. ದೂರಪ್ರಯಾಣಕ್ಕೆ ಪ್ರತಿಕೂಲ ಪರಿಸ್ಥಿತಿ. ನಕಾರಾತ್ಮಕ ಚಿಂತನೆ, ಮಾತುಗಳಿಗೆ ಎಡೆಗೊಡಬೇಡಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೪.ಕರ್ಕಾಟಕ:
 ಸಣ್ಣ ಪ್ರಮಾಣದ ಯೋಜನೆಗಳುಗೆ ಸುದಿನ. ಉತ್ಪಾದನೆಗಳ ಗುಣಮಟ್ಟದಿಂದ ಉದ್ಯಮಕ್ಕೆ ಕೀರ್ತಿ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ಅಲ್ಪಾವಧಿ ಹೂಡಿಕೆ ಬೇಡ. ಕುಟುಂಬದಲ್ಲಿ ಆರೋಗ್ಯ, ಸಾಮರಸ್ಯ ವೃದ್ಧಿ. ಗಣೇಶ ಕವಚ, ನರಸಿಂಹ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೫_ಸಿಂಹ:

  ಕೆಲವು ದಿಟ್ಟ ಹೆಜ್ಜೆಗಳನ್ನಿಡುವ ದಿನ. ಸ್ಪಷ್ಟ ಮಾತಿನಿಂದ ಗೌರವ ಪ್ರಾಪ್ತಿ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ನಿರ್ಣಾಯಕ ದಿನ. ನೂತನ ನಿವೇಶನ  ಖರೀದಿಗೆ ಚಿಂತನೆ. ಪ್ರಮುಖ ವ್ಯಕ್ತಿಯೊಬ್ಬರಿಗೆ ಅಪವಾದದಿಂದ ಮುಕ್ತಿ. ಗಣೇಶ ಪಂಚರತ್ನ, ದಾರಿದ್ರ್ಯದಹನ ಶಿವಸ್ತೋತ್ರ, ಗುರುಸ್ತೋತ್ರ ಓದಿ.


೬.ಕನ್ಯಾ:

ಕೌಟುಂಬಿಕ ಕ್ಷೇತ್ರದಲ್ಲಿ ಶಾಂತಿ, ನೆಮ್ಮದಿ. ಆತ್ಮೀಯರ ಭೇಟಿಯಿಂದ ಹರ್ಷ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಉದ್ಯೋಗಾಸಕ್ತರಿಗೆ  ಆಶಾದಾಯಕ ಅವಕಾಶಗಳು. ಸಣ್ಣ ಹೂಡಿಕೆಗಳಿಂದ ಲಾಭ. ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೭ತುಲಾ:

ಎಲ್ಲ ಸಮಸ್ಯೆಗಳಿಗೂ ಸೂಕ್ತ ಪರಿಹಾರ. ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಸ್ಥಾನಮಾನ.  ಅಕಸ್ಮಾತ್ ಧನಾಗಮ. ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ. ಸಂಗೀತ, ಕೀರ್ತನೆ, ಭಜನೆ ಶ್ರವಣದಿಂದ ಸಮಾಧಾನ‌. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.


೮.ವೃಶ್ಚಿಕ:

 ನ್ಯಾಯಾಲಯದಲ್ಲಿ ಜಯ. ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ. ಉದ್ಯಮದ ವ್ಯಾಪ್ತಿ ಇನ್ನಷ್ಟು ವಿಸ್ತರಣೆ. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ. ಗೃಹಿಣಿಯರ ಸ್ವಾವಲಂಬನೆ ಯೋಜನೆ  ಉನ್ನತ ಸ್ಥಿತಿಯಲ್ಲಿ. ಗಣಪತಿ ಅಥರ್ವಶೀರ್ಷ, ದೇವೀಕವಚ, ಗುರುಸ್ತೋತ್ರ ಓದಿ.

೯. ಧನು:

  ಆವಶ್ಯಕತೆಗೆ ತಕ್ಕಂತೆ ಒದಗಿ ಬರುವ ಸಹಾಯ. ಉದ್ಯೋಗ ಸ್ಥಾನದಲ್ಲಿ ಸಣ್ಣ ಪದೋನ್ನತಿ.  ಸಣ್ಣ ಪ್ರಮಾಣದ  ಉದ್ಯಮಗಳ ಅಭಿವೃದ್ಧಿ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ. ಬಾಳ ಸಂಗಾತಿಯ ಆರೋಗ್ಯ ಸುಧಾರಣೆ‌. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.


೧೦. ಮಕರ:
  ಉದ್ಯೋಗ ಸ್ಥಾನದಲ್ಲಿ ಗೌರವ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನಿವೇಶನ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಲಾಭ. ಕೃಷ್ಯುತ್ಪನ್ನಗಳಿಗೆ ಒಳ್ಳೆಯ ಬೇಡಿಕೆ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ಗಣೇಶ ಪಂಚರತ್ನ, ರಾಮ ಭುಜಂಗಪ್ರಯಾತ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧.ಕುಂಭ:

 ಲಾಭದಾಯಕ ಯೋಜನೆಗಳಲ್ಲಿ ಹೂಡಿಕೆ. ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ದೂರದಲ್ಲಿರುವ ಬಂಧುಗಳ  ಭೇಟಿ.  ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ಸಜ್ಜನರಿಗೆ ಸಹಾಯ ಮಾಡುವ ಅವಕಾಶ. ಗಣೇಶ ಸ್ತೋತ್ರ, ಶಿವಾಪರಾಧ ಕ್ಷಮಾಪಣ ಸ್ತೋತ್ರ, ಶನಿಮಹಾತ್ಮೆ ಓದಿ.

೧೨.ಮೀನ:

ಹಲವು ಶುಭಫಲಗಳ ದಿನ. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ.   ಅಪರಿಚಿತ  ವ್ಯಕ್ತಿಗಳಿಂದ  ಅನಿರೀಕ್ಷಿತ ಸಹಾಯ. ವ್ಯವಹಾರ ಸಂಬಂಧ ಮಾತುಕತೆ ಯಶಸ್ವಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.