ದಿನ ಭವಿಷ್ಯ

06-11-2025

Nov 6, 2025 - 16:56
 ದಿನ ಭವಿಷ್ಯ

               ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ  6.

೧.ಮೇಷ:

ಕೆಲಸ ಕಾರ್ಯಗಳು ನಿರಾತಂಕ. ಪರಿಶ್ರಮಕ್ಕೆ ಯೋಗ್ಯವಾದ ಪ್ರತಿಫಲ. ಉದ್ಯೋಗ, ಉದ್ಯಮಗಳಲ್ಲಿ ಯಶಸ್ಸು. ಸಮಸ್ಯೆ ನಿವಾರಣೆಗೆ ಆಪ್ತರಿಂದ ನೆರವು. ಗೃಹಿಣಿಯರ  ಪ್ರತಿಭೆ ಅರಳಲು ಅವಕಾಶ. ಗಣೇಶ ಅಷ್ಟಕ ದೇವೀಸ್ತೋತ್ರ,  ಶನಿಮಹಾತ್ಮೆ  ಓದಿ.

೨.ವೃಷಭ:

ಬಿಡುವಿಲ್ಲದ ದುಡಿಮೆಯಾದರೂ ನೆಮ್ಮದಿ. ಉದ್ಯೋಗದಲ್ಲಿ ಹೆಚ್ಚು ಸಂತೃಪ್ತಿ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕೆಲಸದ ಒತ್ತಡ. ಉತ್ಪನ್ನಗಳ ವೈವಿಧ್ಯ ಕಾಯ್ದುಕೊಳ್ಳಲು ಮೇಲಾಟ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ  ಭೇಟಿ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ಆದಿತ್ಯ ಹೃದಯ ಓದಿ.


೩. ಮಿಥುನ:

 ದಾಕ್ಷಿಣ್ಯ ಸ್ವಭಾವ ಅತಿಯಾದರೆ ಕಷ್ಟ. ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಪ್ರಾಮಾಣಿಕತೆ ಕಾಯ್ದುಕೊಳ್ಳಲು ಸವಾಲು. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣ. ಅಸ್ವಸ್ಥರಿಗೆ ಮನಸ್ಥೈರ್ಯ ತುಂಬಲು ಪ್ರಯತ್ನ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೪.ಕರ್ಕಾಟಕ:

 ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ.  ಉದ್ಯಮದ ಉತ್ಪಾದನೆಗಳ ಗುಣಮಟ್ಟಕ್ಕೆ ಗೌರವ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ಅಲ್ಪಾವಧಿ ಹೂಡಿಕೆ ಬೇಡ. ಕುಟುಂಬದಲ್ಲಿ ಹರ್ಷ, ಉತ್ಸಾಹದ ವಾತಾವರಣ. ಗಣೇಶ ಪಂಚರತ್ನ, ಶಿವಕವಚ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೫_ಸಿಂಹ:

 ಶರೀರ, ಮನಸ್ಸು ಎರಡಕ್ಕೂ ಹೆಚ್ಚು ಕೆಲಸ.  ವ್ಯಾಪಾರ ವೃದ್ಧಿಗೆ ಹೊಸ ಪರಿಚಯಸ್ಥರ ಸಹಾಯ. ಕಟ್ಟಡ ನಿರ್ಮಾಣ ವ್ಯವಹಾರ ವೇಗವೃದ್ಧಿ. ಭೂವ್ಯವಹಾರ ನಡೆಸುವವರಿಗೆ ಅನುಕೂಲ. ದಾಂಪತ್ಯ ಕಲಹ‌ ಮುಕ್ತಾಯ.  ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.


೬.ಕನ್ಯಾ:

ಮನೆಯಲ್ಲಿ ಶಾಂತಿ,ಸಮಾಧಾನದ ಕ್ಷಣಗಳು. ಆತ್ಮೀಯರ ಭೇಟಿಯಿಂದ ಹರ್ಷ.  ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫಲ. ಹಿರಿಯ ನಾಗರಿಕರ ಜೀವನಾಸಕ್ತಿ ವೃದ್ಧಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.


೭ತುಲಾ:

ಹಿರಿಯ ಅತಿಥಿಗಳಿಗೆ ಸತ್ಕಾರ. ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಸ್ಥಾನಮಾನ. ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ. ಸಂಗೀತ, ಕೀರ್ತನೆ, ಭಜನೆಯಿಂದ ಸಮಾಧಾನ‌. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ  ಓದಿ.


೮.ವೃಶ್ಚಿಕ:

 ಚಿಲ್ಲರೆ ವಿವಾದಗಳಿಂದ ದೂರವಿರಿ. ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ. ಉದ್ಯಮದ ವ್ಯಾಪ್ತಿ ಇನ್ನಷ್ಟು ವಿಸ್ತರಣೆ. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ. ಮನಸ್ಸು ಕೆಡಿಸುವ ಮಾತುಗಳನ್ನು ನಿರ್ಲಕ್ಷಿಸಿ. ಗಣೇಶ ದ್ವಾದಶನಾಮ ಸ್ತೋತ್ರ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ.

೯. ಧನು:

ವಿಶ್ವಾಸಪಾತ್ರರಿಂದ   ಸಕಾಲಿಕ ಸಹಾಯ. ಸಹೋದ್ಯೋಗಿಗಳ  ಸದಭಿಪ್ರಾಯಕ್ಕೆ ಪಾತ್ರರಾಗುವಿರಿ.  ಸಣ್ಣ ಪ್ರಮಾಣದ  ಉದ್ಯಮಗಳಿಗೆ ಅನುಕೂಲ. ಹೈನುಗಾರಿಕೆ, ಜೇನು ವ್ಯವಸಾಯ ಫಲಪ್ರದ. ಬಾಳ ಸಂಗಾತಿಯ ಆರೋಗ್ಯ ಸುಧಾರಣೆ‌. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೧೦. ಮಕರ:
 ಕಡಿಮೆಯಾಗದ ಕೆಲಸದ ಒತ್ತಡ.  ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನಿವೇಶನ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಲಾಭ. ಕೃಷ್ಯುತ್ಪನ್ನಗಳಿಗೆ ಒಳ್ಳೆಯ  ಬೇಡಿಕೆ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧.ಕುಂಭ:

  ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಬಂಧುಗಳ ಆಸ್ತಿ ವಿವಾದ ಪರಿಹರಿಸಲು ಸಲಹೆ. ಸೇವಾಕಾರ್ಯಗಳಲ್ಲಿ ಮನೆಮಂದಿಯ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ಹೊಸ ಪರಿಚಿತರಿಂದ ವ್ಯಾಪಾರ ವೃದ್ಧಿಗೆ ಸಹಾಯ. ಗಣೇಶ ಕವಚ,‌ನರಸಿಂಹ ಕವಚ, ಶನಿಮಹಾತ್ಮೆ  ಓದಿ.

೧೨.ಮೀನ:

ಗುರುವಿನ ಅನುಗ್ರಹದಿಂದ ಅನುಕೂಲವೇ ಹೆಚ್ಚು. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ.    ಅನಿರೀಕ್ಷಿತ ಧನಾಗಮದ ಸಾಧ್ಯತೆ.  ವಿಶಿಷ್ಟ ವ್ಯಕ್ತಿಯೊಬ್ಬರ ಭೇಟಿಯಿಂದ  ಅನುಕೂಲ.
ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.