ಈ ದಿನದ ರಾಶಿ ಭವಿಷ್ಯ
ರಾಶಿ ಫಲ
ಅದೃಷ್ಟ ಸಂಖ್ಯೆ 11
- ಜ್ಯೋತಿರ್ಮಯ
1.ಮೇಷ:
ಆನಂದದ ಕ್ಷಣಗಳನ್ನು ಮುಕ್ತವಾಗಿ ಅನುಭವಿಸಿ..ನೌಕರವರ್ಗಕ್ಕೆ ವಿರಾಮದ ಆನಂದ.ಬಂಧುಗಳ ಆಗಮನ. ಕೃಷಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಕುಟುಂಬದಲ್ಲಿ ಸಂತೋಷದ ಘಟನೆ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ,ಸಮಾಧಾನಗಳ ವಾತಾವರಣ. ಆರೋಗ್ಯ ಉತ್ತಮ.ಗಣೇಶ ಸ್ತೋತ್ರ, ಆದಿತ್ಯ ಹೃದಯ, ಲಕ್ಷ್ಮೀ ಸ್ತೋತ್ರ ಓದಿ.
2.ವೃಷಭ:
ಆರು ದಿನಗಳ ಜಂಜಾಟ ಕಳೆದು ಮೈಮನಗಳಿಗೆ ವಿಶ್ರಾಂತಿ. ದೂರ ದೇಶದಲ್ಲಿರುವ ಮಕ್ಕಳೊಡನೆ ಸಂಭಾಷಣೆ. ಬಂಧುಗಳ ಮನೆಯಲ್ಲಿ ದೇವತಾಕಾರ್ಯ.ಆಪ್ತಮಿತ್ರನ ಹಠಾತ್ ಭೇಟಿ. ಇಷ್ಟದೇವರ ಆಲಯ ಸಂದರ್ಶನ.ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.
3. ಮಿಥುನ:
ಭಗವಂತನ ಅನುಗ್ರಹದಿಂದ ಕ್ಷೇಮದ ಅನುಭವ. ಉದ್ಯೋಗ ಸ್ಥಾನದ ಮಿತ್ರರ ಆಗಮನ. .ಬಾಲ್ಯದ ಒಡನಾಡಿಯ ಅನಿರೀಕ್ಷಿತ ದರ್ಶನ.ಪಿತ್ರಾರ್ಜಿತ ಆಸ್ತಿ ಅಭಿವೃದ್ಧಿ ಕಾರ್ಯ ಮುಂದುವರಿಕೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಆರೋಗ್ಯ ಉತ್ತಮ. ಗಣೇಶ ಕವಚ, ನವಗ್ರಹ ಸ್ತೋತ್ರ ಪಾರಾಯಣ ಮಾಡಿ.
4.ಕರ್ಕಾಟಕ:
ಕೆಲವೊಮ್ಮೆ ಕಳೆದ ಕ್ಷಣಗಳನ್ನು ನೆನಪು ಮಾಡಿಕೊಳ್ಳುವುದೇ ಆನಂದ. ವಸ್ತ್ರ, ಸಿದ್ಧ ಉಡುಪು,ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಕೈತುಂಬಾ ಲಾಭ. ಕೃಷಿಯಲ್ಲಿ ಹೊಸ ಪ್ರಯೋಗ ಮುಂದುವರಿಕೆ. ಲೇವಾದೇವಿ ವ್ಯವಹಾರ ಸಾಮಾನ್ಯ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯ.ಎಲ್ಲರ ಆರೋಗ್ಯ ಉತ್ತಮ. ಗಣೇಶ ಕವಚ,ಶಿವಕವಚ, ವಿಷ್ಣು ಸಹಸ್ರನಾಮ ಓದಿ.
5.ಸಿಂಹ:
ನಡೆದುಬಂದ ದಾರಿಯ ಸಿಂಹಾವಲೋಕನ. ಕಿರಿಯ ಸಹೋದ್ಯೋಗಿಗಳಿಂದ ಗೌರವಾರ್ಪಣೆ. ಉದ್ಯೋಗಾಸಕ್ತ ಹುಡುಗರಿಗೆ ಮಾರ್ಗದರ್ಶನ. ಐಟಿ ಉದ್ಯೋಗಿಗಳಿಗೆ ಆಪ್ತಸಲಹಾ ಕಾರ್ಯಕ್ರಮ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಆನಂದದ ದಿನ.ಗಣೇಶ ಕವಚ ,ನವಗ್ರಹ ಸ್ತೋತ್ರ ಓದಿ.
6. ಕನ್ಯಾ:
ಒಳ್ಳೆಯ ಕೆಲಸಕ್ಕೆ ಆಗಾಗ ವಿಘ್ನ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ನೆಮ್ಮದಿ.ಹಳೆಯ ಒಡನಾಡಿಯ ಪುರ್ಮಿಲನ. ಕುಟುಂಬದ ಹಿರಿಯರ ಭೇಟಿ. ದೂರದಲ್ಲಿರುವ ಕುಲದೇವರ ದೇವಾಲಯ , ನಾಗಸನ್ನಿಧಿ ಸಂದರ್ಶನ.ಗಣೇಶ ಅಷ್ಟೋತ್ತರ. ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
7.ತುಲಾ:
ಎಲ್ಲ ನಿಯೋಜಿತ ಕಾರ್ಯಗಳು ಮುಗಿದ ತೃಪ್ತಿ. ಸಹೋದ್ಯೋಗಿಯ ಮನೆಯಲ್ಲಿ ಪಿತೃಸ್ಮರಣೆ ಕಾರ್ಯಕ್ರಮ ಅವಿವಾಹಿತ ಹುಡುಗ- ಹುಡುಗಿಯರಿಗೆ ಶುಭಕಾಲ ಬರುವ ಸೂಚನೆ.ಮಕ್ಕಳ ಪ್ರತಿಭೆ ಅನಾವರಣದಿಂದ ಪೋಷಕರಿಗೆ ಹರ್ಷ.ಮಹಿಳೆಯರ ಸ್ವಾವಲಂಬನೆ ಯೋಜನೆಗೆ ನಿರೀಕ್ಷೆ ಮೀರಿದ ಯಶಸ್ಸು. ಗಣೇಶ ಅಷ್ಟಕ,ವಿಷ್ಣು ಸ್ತೋತ್ರ, ದುರ್ಗಾ ಸ್ತೋತ್ರ ಓದಿ.
8. ವೃಶ್ಚಿಕ:
ನಾಳೆಯ ಕಾರ್ಯಗಳ ನಿರ್ವಹಣೆಗೆ ಸಿದ್ಧತೆ. ಮಗನಿಗೆ ವಿದೇಶದಲ್ಲಿ ಉದ್ಯೋಗ.ಲೇವಾದೇವಿ ವ್ಯವಹಾರದಲ್ಲಿ ಮಧ್ಯಮ ಲಾಭ. ಯಂತ್ರೋಪಕರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಮೆಕಾನಿಕ್ ವೃತ್ತಿಯವರಿಗೆ ಉದ್ಯೋಗಾವಕಾಶ. ಸಂಸಾರದಲ್ಲಿ ಆನಂದದ ವಾತಾವರಣ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಲಕ್ಷ್ಮೀ ಸ್ತೋತ್ರ ಓದಿ.
9. ಧನು:
ಆತ್ಮೋದ್ಧಾರದ ಸಾಧನೆಯಲ್ಲಿ ಪ್ರಗತಿ. ಸಾಹಿತ್ಯ ಸಂಗೀತಾದಿ ಕಲಾಸಂಬಂಧಿ ಚಟುವಟಿಕೆಗಳಲ್ಲಿ ಆಸಕ್ತಿ. ಹಳೆಯ ಗೆಳೆಯರ ಸಂಪರ್ಕದಿಂದ ಹರ್ಷ.ಕೃಷಿ ಚಟುವಟಿಕೆಗಳು ಪ್ರಗತಿಯಲ್ಲಿ. ನಿರ್ಮಾಣ ವ್ಯವಹಾರ ವೃದ್ಧಿಗೆ ಗಣ್ಯರ ಸಹಾಯ. ಯಂತ್ರೋಪಕರಣ ಬಿಡಿಭಾಗಗಳಿಗೆ ಅಧಿಕ ಬೇಡಿಕೆ. ಗಣೇಶಕವಚ, ಮಹಾಲಕ್ಷ್ಮಿ ಅಷ್ಟಕ ಓದಿ.
10. ಮಕರ:
ಒತ್ತಡಗಳ ಬದುಕಿಗೆ ಒಂದು ದಿನದ ಬಿಡುವು. ಮನೆಮಂದಿಯೊಂದಿಗೆ ದೇವತಾರಾಧನೆ...ಬಂಧುಗಳ ಮನೆಯಲ್ಲಿ ಪೂರ್ವಜರ ಸ್ಮರಣೆ. ಟೈಲರಿಂಗ್ ವೃತ್ತಿಯವರಿಗೆ ಅನುಕೂಲ. ಬಂಧುಗಳ ಜೊತೆಯಲ್ಲಿ ದೇವಾಲಯಕ್ಕೆ ಭೇಟಿ. ಹಿರಿಯರ, ಮಕ್ಕಳ ಆರೋಗ್ಯ ಪರಿಸ್ಥಿತಿ ಉತ್ತಮ ಗಣೇಶ ಸ್ರೋತ್ರ,. ಶನಿಸ್ತೋತ್ರ, ಆಂಜನೇಯ ಸ್ತೋತ್ರ ಓದಿ.
11. ಕುಂಭ:
ಅವಿಶ್ರಾಂತ ದುಡಿದರೂ ದೇಹಕ್ಕೆ ವಿಶ್ರಾಂತಿ ದೂರ. ಉತ್ಪನ್ನಗಳಿಗಾಗಿ ಬಂದ ಬೇಡಿಕೆಗಳ ಕಡೆಗೆ ಗಮನ ಹರಿಸುವ ಅನಿವಾರ್ಯತೆ. ಬಂಧುಗಳ ಭೇಟಿ.ಸಮಾಜ ಸೇವಾ ಕಾರ್ಯಗಳತ್ತ ಗಮನ. ಕುಲದೇವರ ಆಲಯ ಸಂದರ್ಶನ. ಮನೆಯಲ್ಲಿ ಹಿರಿಯರು, ಸಂಗಾತಿ, ಮಕ್ಕಳಿಗೆ ಸಂಭ್ರಮ.ಗಣೇಶ, ಸುಬ್ರಹ್ಮಣ್ಯ ಸ್ತೋತ್ರಗಳನ್ನು ಪಾರಾಯಣ ಮಾಡಿ.
12.ಮೀನ:
ಸಂಸಾರ,ಉದ್ಯೋಗ, ವ್ಯವಹಾರಗಳಲ್ಲಿ ಮುಳುಗಿದ ಬಳಿಕ ಒಂದು ದಿನದ ವಿರಾಮ. ವೃತ್ತಿಬಾಂಧವರಿಂದ ಕೃತಜ್ಞತೆ ಸಲ್ಲಿಕೆ. ತಾಯಿಯ ಯೋಗಕ್ಷೇಮ ವಿಚಾರಣೆ. ಗುರುಹಿರಿಯರ ಭೇಟಿಗಾಗಿ ಸಣ್ಣ ಪ್ರಯಾಣ ಸಂಭವ. ಗಣೇಶ, ವಿಷ್ಣು, ದೇವಿ ಸ್ತೋತ್ರಗಳ ಪಾರಾಯಣ ಮಾಡಿ.
ಜ್ಯೋತಿಷ್ಯದ ಬಗ್ಗೆ ಹಾಗೂ ನಿಮ್ಮ ಜಾತಕದ ವಿಚಾರಗಳ ಬಗ್ಗೆ ಜ್ಯೋತಿರ್ಮಯ ಅವರನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಬಹುದು: ಮೊಬೈಲ್: 9482297041