ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Nov 13, 2024 - 17:41
Nov 14, 2024 - 09:40
ಈ ದಿನದ ರಾಶಿ ಭವಿಷ್ಯ
ಭವಿಷ್ಯ

ದಿನ ಭವಿಷ್ಯ

                 ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ  5

1. ಮೇಷ:

.ಕೆಲವು ಅನಿರೀಕ್ಷಿತ ಪ್ರಸಂಗಗಳಿಂದ ಮನಸ್ಸಿಗೆ ಆನಂದ. ಉದ್ಯೋಗಸ್ಥರಿಗೆ ಸಹವರ್ತಿಗಳಿಂದ ಸಕಾಲಿಕ ನೆರವು.   ವ್ಯವಹಾರಸ್ಥರಿಗೆ ದೇವತೋಪಾಸನೆಯಿಂದ ಕ್ಷಿಪ್ರಾನುಗ್ರಹ.ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಹರ್ಷದ ಸನ್ನಿವೇಶ.. ಹೊಸ ಪಾಲುದಾರಿಕೆ  ವ್ಯವಹಾರಕ್ಕೆ ನಿರ್ಧಾರ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

2. ವೃಷಭ:

ಕಾರ್ಯಕ್ಕೆ ಬೇಕಾದ ಅನುಕೂಲತೆಗಳ ವಿಸ್ತರಣೆ..  ಹೂಡಿಕೆಗಳಿಗೆ ಹೊಸ ಕ್ಷೇತ್ರಗಳ ಅರಸುವಿಕೆ.. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ.ಉಳಿತಾಯ ಯೋಜನೆಗಳ  ಏಜೆಂಟರಿಗೆ ಒಳ್ಳೆಯ ದಿನ.ಕಲೋಪಾಸಕರಿಗೆ ಹೊಸ ಅವಕಾಶ.
ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಕವಚ ಓದಿ.

3.ಮಿಥುನ:

 ಮನೋಬಲ ಕುಗ್ಗಿಸುವವರ ಸಹವಾಸ ಬಿಡಿ...  ಉದ್ಯೋಗ ರಂಗದಲ್ಲಿ ಹೆಚ್ಚಿನ ಜವಾಬ್ದಾರಿ . ಕರಕುಶಲ ಸಾಮಗ್ರಿಗಳ ನಿರ್ಮಾಪಕರಿಗೆ ಏಳಿಗೆಯ ಕಾಲ..ಗೃಹಿಣಿಯರ ಸ್ವಂತ ಆದಾಯ ಗಳಿಕೆ ಯತ್ನ ಸಪಲ.. ವಿದ್ಯಾರ್ಥಿಗಳಿಗೆ ಪಾಠೇತರ ಚಟುವಟಿಕೆಗಳಲ್ಲಿ ಆಸಕ್ತಿ..ಗಣೇಶ ಅಷ್ಟಕ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

4. ಕರ್ಕಾಟಕ:

ಉದ್ಯೋಗ ಸ್ಥಾನದಲ್ಲಿ  ಕಿರಿಕಿರಿ.  ಶಾಸ್ತ್ರಜ್ಞಾನ ವೃದ್ಧಿಗೆ ವಿಶೇಷ ಪ್ರಯತ್ನ..  ಕಟ್ಟಡ ನಿರ್ಮಾಣ, ಆಸ್ತಿ ಖರೀದಿ- ಮಾರಾಟ ವ್ಯವಹಾರ ನಿಧಾನ ಪ್ರಗತಿ..ಉದ್ಯೋಗ ಅರಸುತ್ತಿರುವವರಿಗೆ  ಸದವಕಾಶ.  ಆಪ್ತವರ್ಗದಿಂದ ಶುಭಸಮಾಚಾರ..ಗೃಹಿಣಿಯರಿಗೆ ಮನೋಲ್ಲಾಸ.
 ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಆದಿತ್ಯ ಹೃದಯ ಓದಿ.

5.ಸಿಂಹ:

ಉದ್ಯೋಗ, ವ್ಯವಹಾರಗಳಲ್ಲಿ ಮುನ್ನಡೆ.  ಪಾರದರ್ಶಕ ನಡೆಯಿಂದ ವಿಶ್ವಾಸ ವೃದ್ಧಿ. .ದೂರದ ಬಂಧುಗಳ ಆಗಮನದಿಂದ ಸಂತಸ.ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಪ್ರಯತ್ನ. ಮಕ್ಕಳಿಗೆ ವ್ಯಾಸಂಗ, ಮನೋರಂಜನೆ ಎರಡರಲ್ಲೂ  ಆಸಕ್ತಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ನರಸಿಂಹ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

6. ಕನ್ಯಾ:

ಕಲೆ,ಮನೋರಂಜನೆ ಕ್ಷೇತ್ರಗಳಲ್ಲಿ  ಪ್ರಗತಿ.ಕ್ರೀಡಾ ಸಾಮಗ್ರಿ ಉತ್ಪಾದಕರಿಗೆ  ಲಾಭ. ಪ್ರಾಪ್ತವಯಸ್ಕ ಪುತ್ರನ ವಿವಾಹ ಸಮಸ್ಯೆಗೆ ಪರಿಹಾರ.. ಗೃಹೋಪಕರಣಗಳ‌ ಖರೀದಿಗೆ ಧನವ್ಯಯ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ.ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

7. ತುಲಾ:


ಅಧ್ಯಾಪಕ ವರ್ಗದವರಿಗೆ ಬಹುವಿಧ ಹೊಣೆಗಾರಿಕೆಗಳು. . ಲೇವಾದೇವಿ ವ್ಯವಹಾರಸ್ಥರಿಗೆ ಹಿನ್ನಡೆ. ವೈದ್ಯರೊಂದಿಗೆ ಸಮಾಲೋಚನೆಯಿಂದ ಸಂಶಯ ನಿವಾರಣೆ. ಪುತ್ರಿಗೆ ನೆಂಟಸ್ತಿಕೆ ಕುದುರುವ ಸೂಚನೆ.ಗಣೇಶ ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

8.ವೃಶ್ಚಿಕ:

ಯುವಕರಿಗೆ ರಕ್ತದಾನ ಮಾಡುವ ಅವಕಾಶ.ಮಕ್ಕಳ ಹೊಸ ಉದ್ಯಮ ಪ್ರಗತಿಪಥದಲ್ಲಿ...ವಸ್ರ್ರ, ಆಭರಣ, ಶೋಕಿ ಸಾಮಗ್ರಿ ವ್ಯಾಪಾರಿಗಳ ಆದಾಯ ವೃದ್ಧಿ. ಕರಕುಶಲ ಸಾಮಗ್ರಿ ತಯಾರಕರಿಗೆ ಶುಭಕಾಲ.  ಬಂಧುಗಳ ಕಡೆಯಿಂದ ಶುಭ ಸಮಾಚಾರ.ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಕವಚ ಓದಿ.

9.ಧನು :

ಇಂದು ನಿಮಗೆ ತಾಳ್ಮೆಯ ಕೊರತೆ ಇರುತ್ತದೆ, ಸ್ವಯಂ ನಿಯಂತ್ರಣದಿಂದಿರಿ, ಶೈಕ್ಷಣಿಕ ಕೆಲಸದಲ್ಲಿ ಅಡಚಣೆ ಉಂಟಾಗಬಹುದು. ಮಿತ್ರರ ಸಹಕಾರದಿಂದ ವ್ಯಾಪಾರ-ವ್ಯವಹಾರ ವಿಸ್ತರಣೆಯಾಗಲಿದ್ದು, ಲಾಭದ ಅವಕಾಶ ದೊರೆಯಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. 


10.ಮಕರ:


 ಅವಧಿಗೆ ಮೊದಲೇ ಕೆಲಸ ಮುಗಿಸಿದ ಸಮಾಧಾನ. ಮಕ್ಕಳ ಅಧ್ಯಯನಾಸಕ್ತಿ ಕುರಿತು‌ ಆತಂಕ.ಸಿವಿಲ್ ಎಂಜಿನಿಯರರು, ಕಂಟ್ರಾಕ್ಟರುಗಳಿಗೆ ಹೊಸ ಕೆಲಸಕ್ಕೆ ಆಹ್ವಾನ.ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಕೇಟರಿಂಗ್ ವ್ಯವಹಾರಸ್ಥರಿಗೆ ಆದಾಯ ವೃದ್ಧಿ . ಗಣೇಶ ಅಷ್ಟಕ, ಶಿವಕವಚ, ಶನಿಸ್ತೋತ್ರ ಓದಿ.


11. ಕುಂಭ:

ನಿತ್ಯದ ವ್ಯವಹಾರಗಳಲ್ಲಿ  ಸುಧಾರಣೆ. ಹಿತಶತ್ರುಗಳ ಬಾಧೆ  ನಿವಾರಣೆ..ಸಾಮಾಜಿಕ ಕ್ಷೇತ್ರದಲ್ಲಿ ಶುಭಸೂಚನೆಯ ವಿದ್ಯಮಾನಗಳು. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಬೇಡಿಕೆ ಹೆಚ್ಚಳ.ಕುಟುಂಬದಲ್ಲಿ ಆನಂದದ ಘಟನೆ...ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.


12. ಮೀನ:

ದಿನನಿತ್ಯದ ವ್ಯವಹಾರಗಳಲ್ಲಿ ಯಶಸ್ಸು.ಸರಕಾರಿ ಕಾರ್ಯಾಲಯಗಳಲ್ಲಿ ಸಹಕಾರ.ಹಣಕಾಸು ವ್ಯವಹಾರ ನಡೆಸುವವರಿಗೆ ಕೊಂಚ ಹಿನ್ನಡೆ. ಕೃಷ್ಯುತ್ಪನ್ನ ಮಾರಾಟದಿಂದ ಮಧ್ಯಮ ಲಾಭ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿಯಿಂದ ನೆಮ್ಮದಿ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.