ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Nov 24, 2024 - 05:15
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ:

                    -ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 6

1.ಮೇಷ:
ಉದ್ಯೋಗದಲ್ಲಿ ವಿರಾಮದ ಆನಂದ. ಹಳೆಯ ಕಹಿನೆಪುಗಳನ್ನು ಕೆದಕಬೇಡಿ. ಸಹೋದ್ಯೋಗಿಗಳಿಂದ  ಸೌಹಾರ್ದ ಭೇಟಿ. ಖಾದ್ಯ ಉತ್ಪನ್ನಗಳ ಜನಪ್ರಿಯತೆ ಹೆಚ್ಚಳ. ವಾಸಸ್ಥಾನ
ನವೀಕರಣಕ್ಕೆ ಧನವ್ಯಯ. ಸಂಸಾರದಲ್ಲಿ ಎಲ್ಲರಿಗೂ ಆರೋಗ್ಯಭಾಗ್ಯ. ಗಣಪತಿ ಅಥರ್ವ ಶೀರ್ಷ, ಆದಿತ್ಯ ಹೃದಯ , ರಾಮರಕ್ಷಾ ಸ್ತೋತ್ರ ಪಾರಾಯಣ ಮಾಡಿ.

2.ವೃಷಭ:
ಧಾರ್ಮಿಕ ಚಿಂತನೆಗೆ ಸಮಯ ನೀಡಿಕೆ. ಮನೆಯಲ್ಲಿ ದೇವತಾರ್ಚನೆ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಚಿಂತನೆ. ಖಾಸಗಿ ಲೇವಾದೇವಿ ವ್ಯವಹಾರಸ್ಥರಿಗೆ ಕಿಂಚಿತ್ ಲಾಭ.ನೂತನ ವಾಹನ ಖರೀದಿ.ಕುಟುಂಬದಲ್ಲಿ ವಿವಾಹ  ನಿಶ್ಚಯ. ಮನೆಮಂದಿಯೊಂದಿಗೆ ಸಣ್ಣ ಪ್ರವಾಸ.ದಾಂಪತ್ಯ ಜೀವನದಲ್ಲಿ ಸೌಖ್ಯ.ಗಣೇಶ ಕವಚ, ಆದಿತ್ಯ ಹೃದಯ, ಶಿವ ಸಹಸ್ರನಾಮ ಓದಿ.

3.ಮಿಥುನ:
ಪ್ರಾಚೀನ ವಿದ್ಯೆಗಳಲ್ಲಿ ಆಸಕ್ತಿ. ಧಾರ್ಮಿಕ ಸಂಸ್ಥೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳುವಿರಿ. ಸ್ವಂತ ಉದ್ಯಮಕ್ಕೆ ತಾತ್ಕಾಲಿಕ ವಿರಾಮ. 
ಧ್ಯಾನ, ಯೋಗ ಸಾಧನೆಯಲ್ಲಿ ಮುನ್ನಡೆ. ರಕ್ಷಣಾ ರಂಗದಲ್ಲಿ ಸೇವೆ ಸಲ್ಲಿಸುವವರಿಗೆ ವಿಶಿಷ್ಟ ಗೌರವ ಪ್ರಾಪ್ತಿ. ಸಾಂಸಾರಿಕ ಕ್ಷೇತ್ರದಲ್ಲಿ ಸಾಮರಸ್ಯ ವೃದ್ಧಿ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

4.ಕರ್ಕಾಟಕ:
ಕುಟುಂಬದೊಳಗೆ ಸಾಮರಸ್ಯ ಸ್ಥಾಪನೆ..ಉದ್ಯಮದಲ್ಲಿ   ತೃಪ್ತಿಕರ ಲಾಭ. ಕೃಷ್ಯುತ್ಪಾದನೆ ಮಾರಾಟದಿಂದ  ಉತ್ತಮ ಲಾಭ. ಪರಿಸರ ರಕ್ಷಣೆಯ ಚಟುವಟಿಕೆಗಳಲ್ಲಿ ಆಸಕ್ತಿ. ಸಾಮಾಜಿಕರಿಂದ ಗೌರವ. ಹಳೆಯ ಗೆಳೆಯರೊಂದಿಗೆ ಮತ್ತೆ ಸಂಪರ್ಕ. ಆರೋಗ್ಯ ಉತ್ತಮ. ಗಣೇಶ ಅಷ್ಟೋತ್ತರ, ನವಗ್ರಹ ಸ್ತೋತ್ರ, ದಕ್ಷಿಣಾಮೂರ್ತಿ ಸ್ತೋತ್ರ ಓದಿ.

5.ಸಿಂಹ:
ವೇಗದ ನಡೆಗೆ ಕಡಿವಾಣ. ಉದ್ಯೋಗದಲ್ಲಿ ಉನ್ನತ ಸ್ಥಾನ ಪ್ರಾಪ್ತಿ. ಸ್ವಂತ  ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ನೌಕರರಿಂದ ಹೆಚ್ವು ಪ್ರತಿಫಲ ಅಪೇಕ್ಷೆ. ಹತ್ತಿರದ ದೇವಾಲಯಕ್ಕೆಭೇಟಿ. ಕುಟುಂಬದ ಕೂಡುವಿಕೆಯಲ್ಲಿ  ದೇವತಾ ಕಾರ್ಯಕ್ಕೆ  ಸಿದ್ಧತೆ. ಉತ್ತರ  ದಿಕ್ಕಿನಿಂದ ಶುಭ ಸಮಾಚಾರ. ಎಲ್ಲರ ಆರೋಗ್ಯ ಉತ್ತಮ. ಗಣೇಶ ಕವಚ, ನರಸಿಂಹ ‌ಸ್ತೋತ್ರ, ಶಿವಸ್ತೋತ್ರ ಓದಿ.

6.ಕನ್ಯಾ:
ನಿರೀಕ್ಷೆಗೆ ಮೀರಿದ ಯಶಸ್ಸು. ಅಕಸ್ಮಾತ್ ಧನಪ್ರಾಪ್ತಿ ಸಂಭವ. ಕುಟುಂಬದ ವಲಯದಲ್ಲಿ ವಿಶೇಷ ಮನ್ನಣೆ. ಸರಕಾರಿ ಉದ್ಯೋಗಿಗಳಿಗೆ ಭವಿಷ್ಯದ ಕುರಿತು ಆತಂಕ.ಸ್ವಂತ ವ್ಯವಹಾರದ ಕಟ್ಟಡ ವಿಸ್ತರಣೆ ಆರಂಭ. ದೂರದೃಷ್ಟಿಯ ಯೋಜನೆಯಲ್ಲಿ ಹೂಡಿಕೆಯಿಂದ ಲಾಭ.ಗಣೇಶ ಅಷ್ಟಕ,ಆದಿತ್ಯ ಹೃದಯ, ‌ದುರ್ಗಾಸ್ತೋತ್ರ ಓದಿ.

7.ತುಲಾ: 
ದೇವತಾ ಪ್ರಾರ್ಥನೆಯಿಂದ  ವಿಘ್ನಗಳು ದೂರ. .ಸಾಂಸಾರಿಕ ವಲಯದಲ್ಲಿ ನೆಮ್ಮದಿ. ಆಪ್ತರಿಂದ ಸಕಾಲಿಕ ಸಲಹೆ ಹಾಗೂ ಸಹಕಾರ. ವ್ಯವಹಾರದ ಕ್ಷೇತ್ರ ವಿಸ್ತರಣೆಗೆ ವಿಘ್ನ ನಿವಾರಣೆ. ವಸ್ತ್ರ, ಆಭರಣ ಖರೀದಿಯಲ್ಲಿ ಆಸಕ್ತಿ. ಶಕ್ತಿ ದೇವತೆಯ ಕ್ಷೇತ್ರದರ್ಶನದಿಂದ  ಧೈರ್ಯ ವೃದ್ಧಿ. ಗಣೇಶ ಕವಚ, ಆದಿತ್ಯ ಹೃದಯ, ಶಾರದಾ‌ಸ್ತೋತ್ರ ಓದಿ.

8.ವೃಶ್ಚಿಕ:
ನೊಂದ ಸಂಸಾರಕ್ಕೆ ನೆರವಾಗುವ ಅವಕಾಶ. ಗುರು, ದೇವತಾನುಗ್ರಹದಿಂದ  ಯಶಸ್ಸು. ಉದ್ಯೋಗಕ್ಕೆ ವಿರಾಮದ ಸೌಖ್ಯ. ಸರಕಾರಿ ನೌಕರರಿಗೆ ಶುಭ 
ಸಮಾಚಾರ. ಸ್ವಂತ ಉದ್ಯಮ ವಿಸ್ತರಣೆಗೆ ಕಾರ್ಯ ಯೋಜನೆ. ಉದ್ಯೋಗಾಸಕ್ತರಿಗೆ ಶುಭ ಸಮಾಚಾರ‌. ಅವಿವಾಹಿತರಿಗೆ ವಿವಾಹ ಯೋಗ. ಹಳೆಯ ನೆಂಟರ ಭೇಟಿ ಸಂಭವ. ಗಣೇಶ ಸ್ತೋತ್ರ, ನವಗ್ರಹ ಸ್ತೋತ್ರ,  ವಿಷ್ಣು ಸಹಸ್ರನಾಮ ಓದಿ.

9. ಧನು:
ಆರೋಗ್ಯ ತ್ವರಿತ ಸುಧಾರಣೆ. ಹಳೆಯ ಒಡನಾಡಿಗಳ ಭೇಟಿಯಿಂದ  ನವೋತ್ಸಾಹ. ಆದಾಯ ಹೆಚ್ಚಳದ ಯೋಜನೆಗಳು ಮುನ್ನಡೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಸಾಮಾಜಿಕ ಕಾರ್ಯದಲ್ಲಿ ಪ್ರಗತಿ. ಕೃಷಿಯಲ್ಲಿ ತೊಡಗಿಸಿಕೊಳ್ಳುವ ಹಂಬಲಕ್ಕೆ ಅನುಕೂಲ ವಾತಾವರಣ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಪಾರಾಯಣ ಮಾಡಿ.

10.ಮಕರ:
ಆತ್ಮಬಲ ವೃದ್ಧಿಗೆ ವಿಶೇಷ ಪ್ರಯತ್ನ. ಹಿರಿಯರಿಂದ ಸಕ್ರಿಯ  ಸಹಕಾರ. ದೇವತಾರಾಧನೆ ಮತ್ತು ಜಪ, ಧ್ಯಾನಗಳಿಂದ ಸಂಕಷ್ಟಗಳು ದೂರ. ಸ್ತ್ರೀಯರಿಗೆ ಪತಿಗೃಹದವರಿಂದ ಸಹಾಯ. ಉದ್ಯೋಗ ಪರಿವರ್ತನೆ ಯೋಗ ಸನ್ನಿಹಿತ. ಮಕ್ಕಳ ಕ್ಷೇಮದ ಕುರಿತು ಚಿಂತೆ. ಆಪ್ತರಿಂದ ಸಕಾಲಕ್ಕೆ ಸಹಾಯ.ಗಣೇಶ ಕವಚ, ವಿಷ್ಣು ಸಹಸ್ರನಾಮ, ದೇವೀ ಕವಚ ಪಾರಾಯಣ ಮಾಡಿ.

11.ಕುಂಭ:
ಸಂಸಾರದ  ಜವಾಬ್ದಾರಿಯೊಂದಿಗೆ ಸಮಾಜದ ಕ್ಷೇಮ ಚಿಂತನೆ. ಸ್ವಂತ  ಉದ್ಯಮದ ಹಿತ ಅಬಾಧಿತ. ಮುದ್ರಣ ಸಾಮಗ್ರಿ,  ಸ್ಟೇಶನರಿ ವ್ಯಾಪಾರಿಗಳಿಗೆ  ಉತ್ತಮ‌ ಆದಾಯ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸೇವಾ ಚಟುವಟಿಕೆಗಳಲ್ಲಿ ಪಾಲುಗೊಳ್ಳಲು ಮನೆಮಂದಿಯ ಸಂಪೂರ್ಣ ಸಹಕಾರ.ಹಿರಿಯರು, ಮಕ್ಕಳು ಕ್ಷೇಮ.ಗಣೇಶ ಕವಚ, ನವಗ್ರಹ ಸ್ತೋತ್ರ, ವಿಷ್ಣುಸಹಸ್ರನಾಮ ಓದಿ.

12.ಮೀನ:
ಶನಿ ಮಹಾತ್ಮನ ಕರುಣೆಯಿಂದ ಜೀವನ ಸುಗಮ. ಸೇವಾರೂಪದ ಕಾರ್ಯಗಳನ್ನು ನಿರ್ವಹಿಸುವವರಿಗೆ  ಅನುಕೂಲದ ವಾತಾವರಣ.ಸಮಾಜದ ಉಪೇಕ್ಷಿತರ  ಕ್ಷೇಮಕ್ಕಾಗಿ ಸಾಮೂಹಿಕ ಪ್ರಯತ್ನದ ನೇತೃತ್ವ. ಸಂಸಾರದಲ್ಲಿ ಸಂಗಾತಿಯ ಪೂರ್ಣ ಸಹಕಾರ, ಹಿರಿಯರ ಶುಭ ಹಾರೈಕೆ ಶ್ರೀರಕ್ಷೆಗಳು. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಪಾರಾಯಣ ಮಾಡಿ.