ಭಯಪಡುವ ಈ ಜಾಗಕ್ಕೆ ಹೊರಟಿದ್ದ ಧೈರ್ಯವಂತ: ಪೊಲೀಸರಿಂದ ಬಂಧನ!

ಮಾರ್ಚ್​ 31 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಮೆರಿಕಾದ 24 ವರ್ಷದ ಯುವಕ ಮಿಖೈಲೊ ವಿಕ್ಟೋರೊವಿಚ್ ಪಾಲಿಯಕೋವ್​​ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

Apr 3, 2025 - 13:06
ಭಯಪಡುವ ಈ ಜಾಗಕ್ಕೆ ಹೊರಟಿದ್ದ ಧೈರ್ಯವಂತ: ಪೊಲೀಸರಿಂದ ಬಂಧನ!

ಉತ್ತರ ಸೆಂಟಿನೆಲ್ ದ್ವೀಪ, ಇದು ಭಾರತದ ಅತ್ಯಂತ ಭಯಾನಯಕ ದ್ವೀಪ. ಆ ಜಾಗಕ್ಕೆ ಕಾಲಿಟ್ಟ ಆಚೆ ಜಗತ್ತಿನವರಾರು ವಾಪಸ್ ಜೀವಂತವಾಗಿ ಬಂದ ಉದಾಹರಣೆಯೇ ಇಲ್ಲ. ಅಂತ ಜಾಗಕ್ಕೆ ಹೊರಟಿದ್ದ ಅಮೆರಿಕಾದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್​ 31 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಮೆರಿಕಾದ 24 ವರ್ಷದ ಯುವಕ ಮಿಖೈಲೊ ವಿಕ್ಟೋರೊವಿಚ್ ಪಾಲಿಯಕೋವ್​​ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಈತ ನಿರ್ಬಂಧಿತ ಪ್ರದೇಶದವಾದ ಉತ್ತರ ಸೆಂಟಿನೆಲ್ ದ್ವೀಪಕ್ಕೆ ಹೊರಟಿದ್ದ ಎಂದು ಸಿಐಡಿ ಆರೋಪಿಸಿದೆ. 2018ರಲ್ಲಿ ಇದೇ ರೀತಿ ಉತ್ತರ ಸೆಂಟಿಲೆನ್ ದ್ವೀಪಕ್ಕೆ ಅಲ್ಲಿಯ ಆದಿವಾಸಿ ಜನರನ್ನು ಮತಾಂತರ ಮಾಡಲು ಹೋಗಿದ್ದ ಜಾನ್ಹ್​ ಅಲ್ಲೆನ್ ಚೌ ಎಂಬ ಅಮೆರಿಕಾದ ವ್ಯಕ್ತಿಯನ್ನು ಸೆಂಟಿನೆಲ್​ ದ್ವೀಪದ ಜನರು ಬಾಣ ಹೊಡೆದು ಕೊಂದು ಹಾಕಿದ್ದರು. ಈಗ ಅಂತದೇ ಪ್ರಯತ್ನವನ್ನು 24 ವರ್ಷದ ಅಮೆರಿಕಾದ ವ್ಯಕ್ತಿ ಮಾಡಿದ್ದಾನೆ. ಹಣೆಬರಹ ಗಟ್ಟಿ ಇದ್ದಿದ್ದರಿಂದ ಬದುಕಿ ಬಂದಿದ್ದಾನೆ. ಒಂದು ವೇಳೆ ಆತ ಅಲ್ಲಿಯ ಜನರ ಕಣ್ಣಿಗೆ ಬಿದ್ದಿದ್ದೇ ಆದಲ್ಲಿ ಇವನ ಎದೆಯನ್ನು ಕೂಡ ಅವರ ಬಾಣಗಳು ಸೀಳುತ್ತಿದ್ದಿದ್ದು ಸ್ಪಷ್ಟ. ಈತನೂ ಕೂಡ ಮತಾಂತರ ಉದ್ದೇಶದಿಂದಲೇ ಈ ದ್ವೀಪಕ್ಕೆ ಕಾಲಿಟ್ಟಿದ್ದನಾ ಅಥವಾ ಬೇರೆ ಕಾರಣಗಳಿದ್ದವಾ ಎನ್ನುವುದು ಸಂಪೂರ್ಣ ತನಿಖೆಯ ನಂತರವೇ ತಿಳಿದು ಬರಲಿದೆ.