ಬೆಂಗಳೂರಿನಲ್ಲಿ BMTC ಬಸ್ನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ
ನಗರದಲ್ಲಿ ಬಿಎಂಟಿಸಿ ಬಸ್ನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ
ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಹಾಗಾಗಿ 3 ತಿಂಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ಬರೋಬ್ಬರಿ 17 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ದಂಡ ವಸೂಲಿ ಜೊತೆಗೆ ನಿರ್ವಾಹಕರ ವಿರುದ್ಧವೂ ಬಿಎಂಟಿಸಿ ಸಂಸ್ಥೆ ಕೇಸ್ ದಾಖಲಿಸಿದೆ. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಒಟ್ಟು 8,891 ಪ್ರಕರಣಗಳು ಪತ್ತೆ ಆಗಿದ್ದು, 57,219 ಟ್ರಿಪ್ಗಳಲ್ಲಿ ತಪಾಸಣೆ ಮಾಡಿದ್ದು, ಆ ಪೈಕಿ 8,891 ಪ್ರಯಾಣಿಕರಿಂದ ದಂಡ ವಸೂಲಿ ಮಾಡಲಾಗಿದೆ. ಅಲ್ಲದೇ 5268 ಪ್ರಕರಣಗಳಲ್ಲಿ ನಿರ್ವಾಹಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನು ಬಿಎಂಟಿಸಿ ಕಂಡಕ್ಟರ್ಗಳ ವಿರುದ್ಧ ಸಾಕಷ್ಟು ದೂರು ಬಂದಿವೆ. ಪ್ರಯಾಣಿಕರಿಗೆ ಚಿಲ್ಲರೆ ನೀಡದೆ ಕಂಡಕ್ಟರ್ಗಳು ಯಾಮಾರಿತ್ತಿದ್ದಾರೆ ಎನ್ನಲಾಗುತ್ತಿದೆ. ಪ್ರಯಾಣಿಕರು ಟಿಕೆಟ್ಗಾಗಿ ಹಣ ನೀಡಿದ ನಂತರ ಟಿಕೆಟ್ ನೀಡಿ ಉಳಿದ ಹಣವನ್ನು ಬಿಎಂಟಿಸಿ ಕಂಡಕ್ಟರ್ಗಳು ವಾಪಸ್ಸು ನೀಡ್ತಿಲ್ವಂತೆ. ಪ್ರಯಾಣಿಕರು ಚಿಲ್ಲರೆ ಕೇಳಿದ್ರೆ ಕಂಡಕ್ಟರ್ಗಳು ಜೋರು ಮಾಡ್ತಾರಂತೆ. ಅದ್ರಲ್ಲೂ ಕನ್ನಡ ಬಾರದ ಪ್ರಯಾಣಿಕರಿಗೆ ಚಿಲ್ಲರೆ ನೀಡೋದೆ ಇಲ್ವಂತೆ. ಈ ಬಗ್ಗೆ ಪ್ರಯಾಣಿಕರು ಟ್ವಿಟ್ಟರ್ ಎಕ್ಸ್ ನಲ್ಲಿ ವಿಡಿಯೋ ಮಾಡಿ ಬಿಎಂಟಿಸಿಗೆ ದೂರು ನೀಡ್ತಿದ್ದಾರೆ. ಬಸ್ ನಂಬರ್ ಸಮೇತ ಪ್ರಯಾಣಿಕರು ಬಿಎಂಟಿಸಿಗೆ ದೂರು ನೀಡಿದ್ದಾರೆ.ಕಳೆದ ಒಂದು ತಿಂಗಳಲ್ಲಿ ನೂರಕ್ಕೆ ಹೆಚ್ಚು ದೂರುಗಳು ದಾಖಲಾಗಿದೆ. ಮತ್ತೊಂದು ಬೇರೆ ಬೇರೆ ರಾಜ್ಯದ ಪ್ರಯಾಣಿಕರಿಗೆ ರಾಜ್ಯದ ಮಹಿಳಾ ಫ್ರೀ ಟಿಕೆಟ್ಗಳನ್ನು ನೀಡಿರುವ ಬಗ್ಗೆ ದೂರುಗಳು ಬಂದಿದೆ. ಬಾಯಿ ತುಂಬಾ ಗುಟ್ಕ ಹಾಕಿಕೊಂಡು, ಕಿವಿಯಲ್ಲಿ ಹೆಡ್ ಫೋನ್ ಹಾಕ್ಕೊಂಡು ಡ್ಯೂಟಿ ಮಾಡ್ತಾರೆ ಪ್ರಯಾಣಿಕರ ಜೊತೆಗೆ ಸರಿಯಾಗಿ ಮಾತಾಡೋದಿಲ್ಲ ಇದರಿಂದ ಪ್ರಯಾಣಿಕರಿಗೆ ಕಿರಿಕಿರಿ ಆಗುತ್ತಿದೆಯಂತೆ. ಸರಿಯಾಗಿ ಬಸ್ ಸ್ಟಾಪ್ ನಲ್ಲಿ ಬಸ್ ನಿಲ್ಲಿಸೋದಿಲ್ವಂತೆ. ಬಸ್ ನಿಲ್ಲಿಸಿದ ಕಡೆ ಪ್ರಯಾಣಿಕರು ಇಳಿಯುವ ದುಸ್ಥಿತಿ ಎದುರಾಗಿದೆ ಎಂದು ಬಿಎಂಟಿಸಿ ಪ್ರಯಾಣಿಕರು ಶ್ರೀ ನಿವಾಸ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.