ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ
ದಿನ ಭವಿಷ್ಯ
ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 4
1.ಮೇಷ:
ಉದ್ಯೋಗ ಸ್ಥಾನದಲ್ಲಿ ಎಳೆಯರಿಗೆ ಮಾರ್ಗದರ್ಶನ..ಹೆಚ್ಚುವರಿ ಆದಾಯಕ್ಕೆ ಯಶಸ್ವೀ ಪ್ರಯತ್ನ... ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ಪತ್ನಿಯ ಕಡೆಯ ಬಂಧುಗಳ ಮನೆಗೆ ಭೇಟಿ.ಕೌಟುಂಬಿಕ ವಿವಾದ ಸಂವಾದದ ಮೂಲಕ ಪರಿಹಾರ.ಗಣಪತಿ ಅಥರ್ವಶೀರ್ಷ, ಶಿವಮಹಿಮ್ನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
2.ವೃಷಭ:
ಉದ್ಯೋಗ ಸ್ಥಾನದಲ್ಲಿ ಆಹ್ಲಾದದ ವಾತಾವರಣ. ಬಂಧುಗಳ ಕಡೆಯಿಂದ ಶುಭ ವಾರ್ತೆ. ಸಾಮಾಜಿಕ ಕಾರ್ಯಗಳಿಗೆ ಉದ್ಯಮಿಗಳ ಪ್ರೋತ್ಸಾಹ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಕೇಟರಿಂಗ್ ವ್ಯವಹಾರಸ್ಥರಿಗೆ ಉತ್ತಮ ಲಾಭ.. ಗಷೇಶ ಕವಚ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
3.ಮಿಥುನ:
ಸಾಹಿತ್ಯಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿಕೆ. . ಉದ್ಯೋಗಸ್ಥರಿಗೆ ಸಂತೃಪ್ತಿ, ಸಮಾಧಾನದ ಅನುಭವ. .ಸ್ವಂತ ಉದ್ಯಮಕ್ಕೆ ಮೂಲ ಸೌಲಭ್ಯಗಳ ಸಮಸ್ಯೆ. . ರಾಜಿ ಪಂಚಾತಿಕೆಯಿಂದ ದಾಯಾದಿ ಕಲಹ ಪರಿಹಾರ.ಕುಟುಂಬದ ಹಿರಿಯ ಮನೆಯಲ್ಲಿ ದೇವತಾರಾಧನೆ.ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ
4.ಕರ್ಕಾಟಕ:
ಉದ್ಯೋಗ ಸ್ಥಾನದಲ್ಲಿ ಗಣನಾರ್ಹ ಪ್ರಗತಿ. ಉದ್ಯಮಗಳು ಕ್ಷಿಪ್ರ ಗತಿಯಲ್ಲಿ ಮುನ್ನಡೆ.. ವ್ಯಾಪಾರಿಗಳಿಗೆ ಹಿತಶತ್ರುಗಳ ಬಾಧೆ.. ಸ್ವಪ್ರಯತ್ನದಿಂದ ಆರೋಗ್ಯವೃದ್ಧಿ.ಪಾಲುದಾರಿಕೆ ವ್ಯವಹಾರದಲ್ಲಿ ಲಾಭ.. ಮನೆಯಲ್ಲಿ ದೇವತಾ ಕಾರ್ಯ.ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
5.ಸಿಂಹ:
ಉದ್ಯೋಗ ವಲಯದಲ್ಲಿ ವಿಶೇಷ ಮನ್ನಣೆ.. ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ.ವಿವಾಹ ಸಮಸ್ಯೆ ನಿವಾರಣೆಗೆ ಸಮಗ್ರ ಯೋಜನೆ.. ನ್ಯಾಯಾಲಯ ವ್ಯವಹಾರದಲ್ಲಿ ಜಯ.ಗಣೇಶ ಪಂಚರತ್ನ, ನರಸಿಂಹ ಸ್ತೋತ್ರ, ಆದಿತ್ಯ ಹೃದಯ ಓದಿ.
6.ಕನ್ಯಾ:
ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ.ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಿಂದ ದೂರವಿರುವುದರಿಂದ ಹಿತ..ದುಷ್ಟರೊಂದಿಗೆ ವಾಗ್ವಾದ ಬೇಡ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ , ಗುರುಸ್ತೋತ್ರ ಓದಿ.
7.ತುಲಾ:
ಉದ್ಯೋಗದಲ್ಲಿ ಜ್ಞಾನ ಮತ್ತು ಪ್ರತಿಭೆಗೆ ಮನ್ನಣೆ. .ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ಮಕ್ಕಳಿಗೆ ಸಂಗೀತ, ನೃತ್ಯದಲ್ಲಿ ಆಸಕ್ತಿ. ಬಂಗಾರದ ಅಂಗಡಿಗೆ ಭೇಟಿ.ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ಉತ್ಕರ್ಷದ ಕಾಲ.ದಂಪತಿಗಳ ನಡುವೆ ಅನುರಾಗ ವೃದ್ಧಿ.ಗಣಪತಿ ಅಥರ್ವಶೀರ್ಷ, ಮಹಾಲಕ್ಷ್ಮಿ ಅಷ್ಟಕ, ಶನಿಸ್ತೋತ್ರ ಓದಿ.
8.ವೃಶ್ಚಿಕ:
ಉದ್ಯೋಗ ಸ್ಥಾನದಲ್ಲಿ ನಿರುತ್ಸಾಹದ ವಾತಾವರಣ. ಸರಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಆತಂಕ.. ವಾಹನ ಬಿಡಿಭಾಗ ವ್ಯಾಪಾರಿಗಳಿಗೆ ಸುಯೋಗ. . ಅವಿವಾಹಿತರಿಗೆ ವಿವಾಹ ಯೋಗ. ಮಕ್ಕಳ ಕಲಿಕೆ ಆಸಕ್ತಿ ಹೆಚ್ಚಿಸಲು ಪ್ರಯತ್ನ. ಸಂಕಷ್ಟನಾಶನ ಗಣೇಶ ಸ್ತೋತ್ರ, ಆಂಜನೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
9.ಧನು:
ದಿನದ ಆರಂಭದಲ್ಲಿ ನಿರುತ್ಸಾಹ. ಮೇಲಿನವರ ಪ್ರೋತ್ಸಾಹದ ನುಡಿಗಳು. ನಾಸ್ತಿಕನ ಭೇಟಿಯಿಂದ ಕದಡಿದ ಮನಸ್ಸು. ವೈದ್ಯರೊಂದಿಗೆ ಭೇಟಿಯ ಸಾಧ್ಯತೆ. ಹೊಸ ವ್ಯವಹಾರ ಆರಂಭಿಸಲು ಪೂರ್ವಸಿದ್ಧತೆ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ದೇವೀಸ್ತೋತ್ರ ಓದಿ.
10.ಮಕರ:
ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ ನಿಯೋಜನೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಹೇರಳ ಲಾಭ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ. ಆಪ್ತರ ಸಲಹೆ ಪಾಲನೆಯಿಂದ ಸಂತೋಷ.ಮನಶ್ಶಾಂತಿ ಕೆಡಿಸಲು ಹಿತಶತ್ರುಗಳ ಪ್ರಯತ್ನ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.
11.ಕುಂಭ:
ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳು.. .. . ಗ್ರಾಹಕರ ಬೇಡಿಕೆಗೆ ಶೀಘ್ರ ಸ್ಪಂದನ.. ಸಮಾಜ ಸೇವಾಕಾರ್ಯಗಳಿಗೆ ಹೊಸ ಅವಕಾಶಗಳು.. ಕುಶಲಕರ್ಮಿಗಳ ಕೀರ್ತಿ ವರ್ಧನೆ.ಸಂಸಾರದಲ್ಲಿ ಸಂತೃಪ್ತಿಯ ವಾತಾವರಣ.ಗಣೇಶ ಅಷ್ಟಕ, ಶಿವಕವಚ, ಶನಿಸ್ತೋತ್ರ ಓದಿ.
12.ಮೀನ:
ಉದ್ಯೋಗದಲ್ಲಿ ಸಂತೃಪ್ತಿ. ಪರಿಚಿತ ವ್ಯಕ್ತಿಗಳಿಂದ . ಸಕಾಲದಲ್ಲಿ ಸಹಾಯ.ಸರಕಾರಿ ಕಾರ್ಯಾಲಯಗಳಲ್ಲಿ ಸಕಾರಾತ್ಮಕ ಸ್ಪಂದನ. ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆ.. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ.ಗಣೇಶ ಕವಚ, ದೇವೀಸ್ತೋತ್ರ, ಹನುಮಾನ್ ಚಾಲೀಸಾ ಓದಿ.