ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ
ದಿನ ಭವಿಷ್ಯ:
ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 8
1.ಮೇಷ:
ದಿನಗಳುರುಳುತ್ತಿದ್ದಂತೆ ಮಹತ್ವದ ಜವಾಬ್ದಾರಿಗಳು. ಅನೇಕ ಕಾರ್ಯಗಳ ನಿರ್ವಹಣೆ. ವ್ಯವಹಾರ ಕ್ಷೇತ್ರದಲ್ಲಿ ಲಾಭ, ಕೀರ್ತಿಗಾಗಿ ಮೇಲಾಟ. ಹಳೆಯ ಸಮಸ್ಯೆಗೆ ಸರಳ ವಿಧಾನದ ಪರಿಹಾರ.ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
2.ವೃಷಭ:
ಜಾಗರೂಕತೆಯಿಂದ ಹೆಜ್ಜೆಯಿಡಿರಿ. ಉದ್ಯೋಗಸ್ಥರಿಗೆ ಪ್ರಗತಿ ಸ್ಥಿರ. ಆಪ್ತರಿಂದ ನೆರವಿನ ನಿರೀಕ್ಷೆ ಸಾರ್ಥಕ.ಮನೆಯಲ್ಲಿ ದೇವತಾರಾಧನೆಯ ಸಂಭ್ರಮ.ವಾಹನ ಚಾಲನೆಯಲ್ಲಿ ಎಚ್ಚರ. ಗೃಹಿಣಿಯರಿಗೆ ಪುಟ್ಟ ಉದ್ಯಮ ಆರಂಭಿಸುವ ಉತ್ಸಾಹ. ಗಣೇಶ ಕವಚ, ವಿಷ್ಷು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.
3.ಮಿಥುನ:
ಚಿತ್ತ ಸ್ಥೈರ್ಯ, ಭಗವತ್ಕೃಪೆ ಇವೆರಡಿದ್ದರೆ ಜಯ ಖಚಿತ..ಪ್ರಾಮಾಣಿಕ ಅಧಿಕಾರಿಗಳ ಸತ್ವಪರೀಕ್ಷೆ. ಪೂರ್ವ ದಿಕ್ಕಿನಿಂದ ಶತ್ರುಬಾಧೆ. ವೃತ್ತಿಪರರಿಗೆ ಹೆಚ್ಚು ಜವಾಬ್ದಾರಿ.ಹತ್ತಿರದ ದೇವಾಲಯಕ್ಕೆ ಭೇಟಿ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
4.ಕರ್ಕಾಟಕ:
ಮುಂದೇನಾಗುವುದೆಂದು ಅತಿಯಾದ ಚಿಂತೆ ಬೇಡ.ಉದ್ಯೋಗಸ್ಥರಿಗೆ ಉತ್ತೇಜನದ ವಾತಾವರಣ. ಉದ್ಯಮಿಗಳಿಗೆ ಅನುಕೂಲದ ಸನ್ನಿವೇಶ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.ಸರ್ವರ ಕ್ಷೇಮಕ್ಕಾಗಿ ಪ್ರಾರ್ಥನೆಯಿಂದ ಶಾಂತಿ.ಗಣೇಶ ಪಂಚರತ್ನ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
5.ಸಿಂಹ:
ಗಣೇಶನ ಕೃಪೆಗಾಗಿ ಪ್ರಾರ್ಥನೆಯಿಂದ ಶುಭ... ಉದ್ಯೋಗ ಕ್ಷೇತ್ರದಲ್ಲಿ ಸರ್ವರಿಂದ ಪ್ರಶಂಸೆ. ವ್ಯವಹಾರದಲ್ಲಿ ಅಭೂತಪೂರ್ವ ಯಶಸ್ಸು. ಆಪ್ತಮಿತ್ರರಿಗೆ ಸಹಾಯ ಮಾಡುವ ಅವಕಾಶ. ಜಿಹ್ವಾಚಾಪಲ್ಯವನ್ನು ದೂರವಿಡಿ.ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
6.ಕನ್ಯಾ:
ಅಡೆತಡೆಗಳ ಕಾಟ ಕಡಿಮೆಯಿರುವ ದಿನ. ಉದ್ಯೋಗ ರಂಗದಲ್ಲಿ ನಿರಾತಂಕದ ಮುನ್ನಡೆ.ಸ್ವಂತ ವ್ಯವಹಾರಸ್ಥರಿಗೆ ಸಕಾಲಿಕ ನೆರವು.ಲೆಕ್ಕ ಪರಿಶೋಧಕರಿಗೆ ಸಮಯದ ಒತ್ತಡ.ಗೃಹಿಣಿಯರ ಉದ್ಯಮಗಳಿಗೆ ಶುಭದಿನ. ಗಣಪತಿ ಅಥರ್ವಶೀರ್ಷ, ಆದಿತ್ಯ ಹೃದಯ, ದೇವೀಸ್ತೋತ್ರ ಓದಿ.
7.ತುಲಾ:
ಪಂಚಮ ಶನಿಯ ಬಾಧೆಯಿದ್ದರೂ ಗುರುವಿನ ಅನುಗ್ರಹ ಚೆನ್ನಾಗಿದೆ... ದೇವತಾರ್ಚನೆ ,ಧಾರ್ಮಿಕ ಗ್ರಂಥಗಳ ಅಧ್ಯಯನದಲ್ಲಿ ಆಸಕ್ತಿ. ಹತ್ತಿರದ ದೇವತಾ ಸಾನ್ನಿಧ್ಯ ಸಂದರ್ಶನ. ಬಂಧುವರ್ಗದಲ್ಲಿ ವಿವಾಹದ ಸಂಭ್ರಮ. . ಉದ್ಯೋಗ, ವ್ಯವಹಾರಗಳಲ್ಲಿ ಸುಧಾರಣೆ.ಗಣೇಶ ಕವಚ, ಶಿವಕವಚ, ಗುರುಸ್ತೋತ್ರ ಓದಿ.
8.ವೃಶ್ಚಿಕ:
ನಿಮ್ಮ ಆಯ್ಕೆಯಲ್ಲಿ ವಿವೇಕದ ಮೇಲುಗೈ ಆಗಲಿ.. ಉದ್ಯೋಗ ರಂಗದಲ್ಲಿ ಪ್ರತಿಭೆ ತೋರಿಸಲು ಅವಕಾಶ. ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿ. ಉತ್ತರ ದಿಕ್ಕಿನಿಂದ ಶುಭವಾರ್ತೆ.ವಸ್ತ್ರ, ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಲಾಭ ತರುವ ದಿನ.ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
9.ಧನು:
ಕಾರ್ಯ ನಿರ್ವಿಘ್ನವಾಗಿ ಮುಕ್ತಾಯ.ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.ಹಿರಿಯರ ಮತ್ತು ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ ಯಶಸ್ಸು. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯಸಾಮರ್ಥ್ಯ ವೃದ್ಧಿಗೆ ಪ್ರಯತ್ನ. ಗುರುಸಮಾನರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮ.ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
10.ಮಕರ:
ಪರಿಸರದಲ್ಲಿ ಅನಿರೀಕ್ಷಿತ ಘಟನೆಗಳು. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.ಖಾಸಗಿ ರಂಗದ ಉದ್ಯೋಗಸ್ಥರಿಗೆ ಕೆಲಸದ ಒತ್ತಡ. ಲೆಕ್ಕಪರಿಶೋಧಕರು, ಮೊದಲಾದ ವೃತ್ತಿಪರರಿಗೆ ಸಮಯ ಮಿತಿಯ ಆತಂಕ. ಕಿರಿಯರ ವಿವಾಹ ನಿಶ್ಚಯ.ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
11.ಕುಂಭ:
ಉದ್ಯೋಗ ರಂಗದಲ್ಲಿ ಗಣನಾರ್ಹ ಮುನ್ನಡೆ. ವ್ಯವಹಾರ ಕ್ಷೇತ್ರಕ್ಕೆ ಹೊಸಬರ ಪ್ರವೇಶ. ಸಮಾಜದಲ್ಲಿ ವಿಶೇಷ ಗೌರವ ಪ್ರಾಪ್ತಿ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರ ಸಹಕಾರ.ಬಂಧುವರ್ಗದಲ್ಲಿ ಶುಭಕಾರ್ಯ.ಗಣೇಶ ಅಷ್ಟಕ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
12.ಮೀನ:
ಏಳೂವರೆ ಶನಿಯ ಪ್ರಭಾವವಿದ್ದರೂ ಶುಭಫಲಗಳೇ ಅಧಿಕ. ವಾಹನ ಸಂಬಂಧಿ ವ್ಯವಹಾರಸ್ಥರಿಗೆ ಸ್ಥಿರವಾದ ಆದಾಯ. ಇಲಾಖೆಗಳಿಂದ ಅನುಕೂಲಕರ ಸ್ಪಂದನ. ತಾಯಿಯ, ಮಾತೃಸಮಾನರ ಆರೋಗ್ಯ ಉತ್ತಮ. ಹತ್ತಿರದ ದೇವೀಕ್ಷೇತ್ರ ದರ್ಶನ ಸಂಭವ.ಗಣಪತಿ ಅಥರ್ವಶೀರ್ಷ, ಮುಕುಂದಮಾಲಾ, ಶನಿಸ್ತೋತ್ರ ಓದಿ.