ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ
ದಿನ ಭವಿಷ್ಯ
ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 1
1.ಮೇಷ:
ಕೆಲಸದ ಒತ್ತಡ ಇಲ್ಲದ ದಿನ. ಅನ್ಯ ಆದಾಯ ಮೂಲಗಳ ಶೋಧನೆ. ಆಪ್ತ ವಲಯಗಳಲ್ಲಿ ಸಕ್ರಿಯ ಪಾಲುದಾರಿಕೆ. ಹಿರಿಯ ನಾಗರಿಕರಿಂದ ನೆಮ್ಮದಿಯ ನಿಟ್ಟುಸಿರು. ದೇವತಾಕ್ಷೇತ್ರಕ್ಕೆ ಸಂದರ್ಶನ ಸಂಭವ. ಸಂಸಾರದಲ್ಲಿ ನೆಮ್ಮದಿ. ಗಣೇಶ ಕವಚ, ಆದಿತ್ಯ ಹೃದಯ, ನವಗ್ರಹ ಸ್ತೋತ್ರ ಓದಿ.
2.ವೃಷಭ:
ವಧೂ- ವರಾನ್ವೇಷಿಗಳಿಗೆ ಶುಭ ಸೂಚನೆ. ವ್ಯಾಪಾರಿಗಳು, ಎಂಜಿನಿಯರ್, ಲೆಕ್ಕ ಪರಿಶೋಧಕರು ಮೊದಲಾದ ವೃತ್ತಿಪರರಿಗೆ ನಿರಂತರ ಶ್ರಮ. ಗೃಹಿಣಿಯರ ಸ್ವಾವಲಂಬನೆ ಆದಾಯ ವೃದ್ಧಿ.ಒಟ್ಟಿನಲ್ಲಿ ಶುಭಫಲಗಳ ದಿನ.ಗಣೇಶ ಅಷ್ಟಕ, ಸುಬ್ರಹ್ಮಣ್ಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
3.ಮಿಥುನ:
ಸಂಪಾದನೆಯ ವಿವಿಧ ಮೂಲಗಳು ಗೋಚರ. ಸ್ವತಂತ್ರ ವ್ಯವಹಾರದ ಯೋಚನೆ ಬೇಡ. ಬಂಧುಗಳ ಮನೆಯಲ್ಲಿ ದೇವತಾಕಾರ್ಯ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ..ಸದ್ಗ್ರಂಥ ಅಧ್ಯಯನದಲ್ಲಿ ಆಸಕ್ತಿ. ಸಂಗೀತ ಶ್ರವಣ, ಸತ್ಸಂಗಗಳಲ್ಲಿ ಕಾಲಯಾಪನೆ. ಗಣೇಶ ಪಂಚರತ್ನ, ಶಿವಕವಚ, ನವಗ್ರಹ ಸ್ತೋತ್ರ ಓದಿ.
4.ಕರ್ಕಾಟಕ:
ಮಿಶ್ರಫಲಗಳ ದಿನ. ಹಿರಿಯರಿಗೆ ಆನಂದ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಮಕ್ಕಳ ಭವಿಷ್ಯ ಚಿಂತನೆ.ಅವಿವಾಹಿತರಿಗೆ ತಕ್ಕ ಜೋಡಿ ಸಿಗುವ ಸಾಧ್ಯತೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ವಿರಾಮದ ಸದುಪಯೋಗಕ್ಕೆ ಪ್ರಯತ್ನ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
5.ಸಿಂಹ:
ಎಣಿಸಿದ್ದು ಎಣಿಸಿದ ಹಾಗೆ ಆಗುವ ದಿನ. ಕೊಟ್ಟು ಮರೆತಿದ್ದ ಸಾಲ ಮರಳಿ ಕೈಸೇರಿದ ಆನಂದ. ಸಕಾಲಿಕ ಪ್ರಯತ್ನದಿಂದ ಕಾರ್ಯಗಳು ಶೀಘ್ರವಾಗಿ ಮುಕ್ತಾಯ..ವ್ಯವಹಾರಾರ್ಥವಾಗಿ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ. ದಾಂಪತ್ಯ ಸುಖ ಉತ್ತಮ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
6.ಕನ್ಯಾ:
ಸೇವಾಕಾರ್ಯಗಳಿಂದ ಜನಪ್ರಿಯತೆ ವೃದ್ಧಿ..ಭವಿಷ್ಯದ ಭದ್ರತೆಗಾಗಿ ದೀರ್ಘಾವಧಿ ಹೂಡಿಕೆ.ಸಂಸಾರದಲ್ಲಿ ಸದ್ಭಾವನೆ, ಸಾಮರಸ್ಯ ವೃದ್ಧಿ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುವ ಆಸಕ್ತಿ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
7.ತುಲಾ:
ಬಂಧುವರ್ಗದಲ್ಲಿ ದೇವತಾಕಾರ್ಯ. ಪರಿಸರ ಸ್ವಚ್ಛತೆ ಚಟುವಟಿಕೆಗಳಲ್ಲಿ ಭಾಗಿ. ಜೇನು ವ್ಯವಸಾಯ, ತೋಟಗಾರಿಕೆಯಲ್ಲಿ ಆಸಕ್ತರಿಗೆ ಆನಂದ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಲಾಭ ಪಂಚಮ ಶನಿಯಿಂದಾಗಿ ಆರೋಗ್ಯಕ್ಕೆ ಕೊಂಚ ಹಾನಿ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮದ ದಿನ.ಗಣೇಶ ಕವಚ, ರಾಮರಕ್ಷಾ ಸ್ತೋತ್ರ , ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
8.ವೃಶ್ಚಿಕ:
ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಭೇಟಿ. ಗೃಹಾಲಂಕಾರದಲ್ಲಿ ಆಸಕ್ತಿ.ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ಪ್ರಕೃತಿ ಚಿಕಿತ್ಸೆಯತ್ತ ಒಲವು.ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ವಾತಾವರಣ.ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.
9.ಧನು:
ಕೆಲವು ಮಂದಿಗೆ ಬಿಡುವಿನ ಆನಂದ.. ಉಳಿತಾಯ ಯೋಜನೆಗಳ ಏಜೆಂಟರಿಗೆ ಆದಾಯ ವೃದ್ಧಿ ಯೋಗ. ಗೃಹಿಣಿಯರ ಸ್ವೋದ್ಯೋಗ ಉತ್ಪನ್ನಗಳಿಗೆ ಶುಭದಿನ. ಹೆಚ್ಚುವರಿ ಆದಾಯದ ಮಾರ್ಗ ಅನ್ವೇಷಣೆ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ ಪ್ರಾಪ್ತಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಮಹಿಷಮರ್ದಿನಿ ಸ್ತೋತ್ರ ಓದಿ.
10.ಮಕರ:
ಸ್ಥಿರಾಸ್ತಿ ಹೊಂದುವ ಪ್ರಯತ್ನದಲ್ಲಿ ಮುನ್ನಡೆ. . ಮಕ್ಕಳ ಭವಿಷ್ಯ ಚಿಂತನೆ.ಹೂಡಿಕೆಯಲ್ಲಿ ಎಳೆಯರಿಗೆ ಮಾರ್ಗದರ್ಶನ. ಸಂಗೀತ ಶ್ರವಣ, ಸತ್ಸಂಗದಿಂದ ಮನಸ್ಸಿಗೆ ನೆಮ್ಮದಿ. ಶಿಕ್ಷಕ ವೃಂದಕ್ಕೆ ಹರ್ಷದ ದಿನ.. ಔಷಧ ವ್ಯಾಪಾರಿಗಳಿಗೆ ಉತ್ತಮ ಲಾಭ.ಮನೆಯಲ್ಲಿ ಹರ್ಷದ ವಾತಾವರಣ. ಗಣೇಶ ಪಂಚರತ್ನ, ಹನುಮಾನ್ ಚಾಲೀಸಾ, ಶನಿಸ್ತೋತ್ರ ಓದಿ.
11. ಕುಂಭ:
ಸೇವಾಕಾರ್ಯಗಳಿಗೆ ಇನ್ನಷ್ಟು ಅವಕಾಶ. ಬಂಧು ಬಳಗದವರ ಭೇಟಿ. ಸ್ಥಿರಾಸ್ತಿ ವಿಸ್ತರಣೆ ಪ್ರಯತ್ನ ಸಫಲ. ಆಸ್ಪತ್ರೆ, ಅನಾಥಾಲಯಗಳಿಗೆ ಭೇಟಿ.ಬಂಧುವರ್ಗದ ವಿವಾಹ ಕಾರ್ಯಕ್ರಮದಲ್ಲಿ ಪಾಲುಗೊಳ್ಳುವಿಕೆ.ದೂರದ ನೆಂಟರ ಆಗಮನ. ಮನೆಯಲ್ಲಿ ದೇವತಾ ಕಾರ್ಯ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
12. ಮೀನ:
ವಿರಾಮದ ದಿನ ಸತ್ಕಾರ್ಯ ಮಾಡಿದ ಆನಂದ. ಹಿಡಿದ ಕಾರ್ಯ ಕೈಗೂಡುವ ಭರವಸೆಯಿಂದ ಮುಂದಡಿಯಿಡಿ. ಮನೆಮಂದಿಯಿಂದ ಒಳ್ಳೆಯ ಸಹಕಾರ, ಸೌಜನ್ಯದ ವಾತಾವರಣ. ಎಲ್ಲರ ಆರೋಗ್ಯ ಉತ್ತಮ.ಪರಿಣತರೊಬ್ಬರ ಹಠಾತ್ ಭೇಟಿಯಿಂದ ಲಾಭ.ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ದೇವೀ ಕವಚ ಓದಿ.