ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Dec 5, 2024 - 05:13
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ
               ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ  5

1.ಮೇಷ:
ಆರೋಗ್ಯದ ಮೇಲೆ ಅಸ್ಥಿರ ಹವಾಮಾನದ ಪರಿಣಾಮ. ಉದ್ಯೋಗಸ್ಥರಿಗೆ ಸಹವರ್ತಿಗಳಿಂದ ಸಕಾಲಿಕ ನೆರವು. ವ್ಯವಹಾರಸ್ಥರಿಗೆ ಪ್ರಾರ್ಥನೆಯಿಂದ  ಕ್ಷಿಪ್ರಾನುಗ್ರಹ.ಪ್ರಯಾಣದ ಯೋಜನೆ ಮುಂದಕ್ಕೆ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಮುದ ನೀಡುವ ಸಂದರ್ಭ ಸೃಷ್ಟಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಆದಿತ್ಯ ಹೃದಯ ಓದಿ.

2.ವೃಷಭ:
ಅನೇಕ ರೀತಿಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ.ಉಳಿತಾಯ ಯೋಜನೆಗಳ  ಏಜೆಂಟರಿಗೆ ಒಳ್ಳೆಯ ದಿನ.ಕಲೋಪಾಸಕರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ. ಮಕ್ಕಳ ವ್ಯಾಸಂಗಾಸಕ್ತಿ  ಬೆಳೆಸಲು ವಿಶೇಷ ಪ್ರಯತ್ನ ಅಗತ್ಯ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

3.ಮಿಥುನ:
ತರಗೆಲೆಗಳಂತೆ ಹಾರಿಹೋಗುವ ಸಮಸ್ಯೆಗಳು. ಉದ್ಯೋಗ ರಂಗದಲ್ಲಿ ಹೆಚ್ಚಿನ ಜವಾಬ್ದಾರಿ. ಕರಕುಶಲ ಸಾಮಗ್ರಿನಿರ್ಮಾಪಕರಿಗೆ  ಆದಾಯ ವೃದ್ಧಿ. ಹಿರಿಯರಿಗೆ ನಿಶ್ಚಿಂತೆಯ ಬದುಕು.ಗೃಹಿಣಿಯರ  ಪ್ರಯತ್ನ ಸ್ವಂತ ಆದಾಯ ಗಳಿಕೆಯಲ್ಲಿ ಕೇಂದ್ರೀಕರಣ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

4.ಕರ್ಕಾಟಕ:
 ಉಳಿತಾಯ ಯೋಜನೆಗಳಲ್ಲಿ ಆಸಕ್ತಿ. ಕಟ್ಟಡ ನಿರ್ಮಾಣ, ಆಸ್ತಿ ಖರೀದಿ ಮಾರಾಟ ನಿಧಾನ. ಉದ್ಯೋಗ ಅರಸುತ್ತಿರುವವರಿಗೆ  ಸದವಕಾಶ. ಉತ್ತರ ದಿಕ್ಕಿನಿಂದ ಶುಭಸಮಾಚಾರ. ಗೃಹಿಣಿಯರಿಗೆ ಮನೋರಂಜನೆಯಲ್ಲಿ ಆಸಕ್ತಿ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

5.ಸಿಂಹ:
ಉದ್ಯೋಗ, ವ್ಯವಹಾರಕ್ಕೆ ಎದುರಾದ  ಅಡಚಣೆಗಳ ನಿವಾರಣೆ. ಪಾರದರ್ಶಕ ವ್ಯವಹಾರದಿಂದ ವಿಶ್ವಾಸ ವೃದ್ಧಿ. ದೂರದ ಬಂಧುಗಳ ಆಗಮನ. ಕ್ಷೇತ್ರ ವಿಸ್ತರಣೆಯ ಕುರಿತು ವಿಮರ್ಶೆ. ಮಕ್ಕಳಿಗೆ ವ್ಯಾಸಂಗ, ಮನೋರಂಜನೆ ಎರಡರಲ್ಲೂ ಆಸಕ್ತಿ. ಗಣಪತಿ ಅಥರ್ವಶೀರ್ಷ, ನರಸಿಂಹ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

6.ಕನ್ಯಾ:
ಲೌಕಿಕ ದುಃಖ ಉಪಶಮನಕ್ಕೆ ಸಣ್ಣ ಯಾತ್ರೆ. ಮನೋರಂಜನೆ ಕೇಂದ್ರಿತ   ಉದ್ಯಮ ಕ್ಷಿಪ್ರ ಪ್ರಗತಿ.ಕ್ರೀಡಾ ಸಾಮಗ್ರಿ ಉತ್ಪಾದಕರಿಗೆ ಉತ್ತಮ ಅವಕಾಶ. ಮಕ್ಕಳ ವಿವಾಹ ಮ್ಗಾತುಕತೆಯಲ್ಲಿ ಮುನ್ನಡೆ. ಗೃಹೋಪಕರಣಗಳ ಖರೀದಿಗೆ ಧನವ್ಯಯ. ಸಣ್ಣ ಪ್ರಯಾಣ ಸಂಭವ. ಗಣೇಶ ಸ್ತೋತ್ರ, ವೇದಸಾರ ಶಿವಸ್ತೋತ್ರ, ಸೂರ್ಯಮಂಡಲ ಸ್ತೋತ್ರ ಓದಿ.

7.ತುಲಾ:
ಗ್ರಹಗತಿ ಮತ್ತು ಹವಾಮಾನ ಎರಡರ ಪರಿಣಾಮವಾಗಿ ತಾತ್ಕಾಲಿಕ ಅನಾರೋಗ್ಯ.ಉದ್ಯೋಗಸ್ಥರಿಗೆ ಕೆಲಸಗಳ ಒತ್ತಡ. ತಾಯಂದಿರಿಗೆ ಮಕ್ಕಳ ಆರೋಗ್ಯದ ಚಿಂತೆ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅಧಿಕಲಾಭ. ಬಂಧುಗಳ ಮನೆಗೆ ಭೇಟಿ ಸಂಭವ.ಗಣೇಶ ಕವಚ, ದೇವೀಸ್ತೋತ್ರ, ಶನಿಸ್ತೋತ್ರ ಓದಿ.

8.ವೃಶ್ಚಿಕ:
ಸಂಸಾರ ಸುಖ ಉತ್ತಮ. ದೀರ್ಘಕಾಲದ ಹಿಂದೆ ನೀಡಿದ್ದ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ. ಕಷ್ಟದಲ್ಲಿರುವವರಿಗೆ ದಹಾಯ ಮಾಡುವ ಸಂದರ್ಭ. ಲೇವಾದೇವಿ ವ್ಯವಹಾರಸ್ಥರಿಗೆ ವಸೂಲಿಯ ಚಿಂತೆ.ಅವಿವಾಹಿತ ಪುತ್ರನಿಗೆ ಯೋಗ್ಯ ಕನ್ಯೆ ಸಿಗುವ ಸೂಚನೆ. ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

9.ಧನು:
ಕ್ಷುಲ್ಲಕ ವಿಷಯಗಳ ಕುರಿತು ಚಿಂತಿಸದಿರಿ. ದೂರದ ನೆಂಟರ ಆಗಮನದ ಸಾಧ್ಯತೆ. ಉದ್ಯೋಗಸ್ಥರಿಗೆ ಹೆಚ್ಚುವರಿ ಜವಾಬ್ದಾರಿ.ಪುತ್ರನಿಗೋಸ್ಕರ ಕನ್ಯಾನ್ವೇಷಣೆ ಫಲಿಸುವ ಸೂಚನೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ  ವ್ಯವಹಾರ ವೃದ್ಧಿ. ಗಷೇಶ ಪಂಚರತ್ನ , ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವ್ ಮಂಗಲಾಷ್ಟಕ ಓದಿ.


10.ಮಕರ:
ಉದ್ಯೋಗಸ್ಥರಿಂದ ಅನಾಯಾಸವಾಗಿ ಕಾರ್ಯನಿರ್ವಹಣೆ. ವಾಹನ ಚಾಲನೆಯಲ್ಲಿ ಎಚ್ಚರ. ಸೌಂದರ್ಯ ವರ್ಧಕಗಳ ಮಾರಾಟಗಾರ ರಿಗೆ ಸದವಕಾಶ. ಶಸ್ತ್ರ ವೈದ್ಯರಿಗೆ ವಿಶಿಷ್ಟ ಬಗೆಯ ಚಿಕಿತ್ಸೆಯಿಂದ ಕೀರ್ತಿ.ವ್ತವಹಾರ ನಿಮಿತ್ತ ಸಣ್ಣ ಪ್ರಯಾಣ.ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.


11.ಕುಂಭ:
ಏಳೂವರೆ ಶನಿಯ ಮಹಿಮೆಯಿಂದ ನೆಮ್ಮದಿ ಭಂಗ.ಬಂಧುಗಳೊಡನೆ ಮನಸ್ತಾಪವಾಗದಂತೆ ಎಚ್ಚರ. ಸಮಾಜಸೇವೆಗೆ ಇನ್ನಷ್ಟು ಅವಕಾಶಗಳ ಶೋಧನೆ.ಮುದ್ರಣ ಸಾಮಗ್ರಿ ವಿತರಕರಿಗೆ ದೂರದಿಂದ ಕರೆ.ಸಂಸಾರದಲ್ಲಿ ಪ್ರೀತಿ, ವುಶ್ವಾಸ ವೃದ್ಧಿ.ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಸ್ತೋತ್ರ ಓದಿ.


12. ಮೀನ:
ಒಂದಾದ ಮೇಲೊಂದರಂತೆ ಬರುವ ಹೊಣೆಗಾರಿಕೆಗಳು. ಸೋದರಿಯ ಸಂಸಾರಸಂಬಂಧಿ ಯೋಜನೆಗಳಿಗೆ ಸಹಾಯ. ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ. ಸೋದರ ಸಂಬಂಧಿಯ ಯೋಜನೆ ಅನುಷ್ಠಾನಕ್ಕೆ ಸಹಾಯ. ಗುರುದರ್ಶನದಿಂದ  ಆತ್ಮಸ್ಥೈರ್ಯ ವೃದ್ಧಿ.ಗಣೇಶ ಕವಚ, ದೇವೀಸ್ತೋತ್ರ, ಶನಿಸ್ತೋತ್ರ ಓದಿ.