ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ
ದಿನ ಭವಿಷ್ಯ
ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 6.
1.ಮೇಷ:
ದಿನಕ್ಕೊಂದು ಹೊಸ ಜವಾಬ್ದಾರಿ ಬಂದರೂ ಧೃತಿಗೆಡದಿರಿ. ಹೆಚ್ಚುವರಿ ಆದಾಯದ ಮಾರ್ಗ ಗೋಚರ. ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ಸಮಾಜಸೇವಾ ಕಾರ್ಯಗಳಲ್ಲಿ ಆಸಕ್ತಿ. ಗೆಳೆಯನ ಕೆಲಸಕ್ಕೋಸ್ಕರ ಪ್ರಯಾಣ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
2.ವೃಷಭ:
ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಕಿರಿಕಿರಿ. ಸಾಮಾಜಿಕ ಕಾರ್ಯಗಳಿಗೆ ಉದ್ಯಮಿಗಳ ಪ್ರೋತ್ಸಾಹ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ವ್ಯವಹಾರ ಸಂಬಂಧ ಪ್ರಮುಖ ವ್ಯಕ್ತಿಯ ಭೇಟಿ. ಕೇರಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಯೋಜನೆ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
3.ಮಿಥುನ:
ಲಾಭ- ನಷ್ಟ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಉದ್ಯೋಗಸ್ಥರಿಗೆ ಸಂತೃಪ್ತಿ, ಸಮಾಧಾನದ ಅನುಭವ. ಸ್ವಂತ ಉದ್ಯಮಕ್ಕೆ ಮೂಲ ಸೌಲಭ್ಯಗಳ ಸಮಸ್ಯೆ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯ. ಪಿತ್ರಾರ್ಜಿತ ಕೃಷಿ ಭೂಮಿಯಲ್ಲಿ ಸಾಮಾನ್ಯ ಬೆಳೆ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.
4.ಕರ್ಕಾಟಕ:
ನಿಂದೆ- ಪ್ರಶಂಸೆಗಳಿಗೆ ಕಿವಿಗೊಡಬೇಡಿ. ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಹಿನ್ನಡೆ. ಉದ್ಯಮಗಳಿಗೆ ಕಾನೂನು ತೊಂದರೆ. ಪಾಲುದಾರಿಕೆ ವ್ಯವಹಾರ ವಿಸ್ತರಣೆ. ಸಣ್ಣ ಪ್ರಮಾಣದ ಕೃಷಿಕಾರ್ಯದಲ್ಲಿ ಸಂತೃಪ್ತಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.
5.ಸಿಂಹ:
ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಅರ್ಹರಿಗೆ ಸಹಾಯ ಮಾಡುವ ಅವಕಾಶ. ಸಾಮಾಜಿಕ ಪಿಡುಗುಗಳ ನಿವಾರಣೆಗೆ ಸಾಮೂಹಿಕ ಚಿಂತನೆ. ಅಪರಿಚಿತ ಕ್ಷೇತ್ರದಿಂದ ಪಾಲುದಾರಿಕೆ ಪ್ರಸ್ತಾವ. ಶಿಕ್ಷಿತರಿಗೆ ಉದ್ಯೋಗ ಅರಸಲು ಸಹಾಯ. ಗಣೇಶ ದ್ವಾದಶನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
6.ಕನ್ಯಾ:
ಅಪರಿಚಿತ ವ್ಯಕ್ತಿಗಳಿಂದ ಆಪತ್ತಿನಲ್ಲಿ ಸಹಾಯ. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಸಟ್ಟಾ ವ್ಯವಹಾರದಿಂದ ದೂರವಿರಿ. ಪಾಲುದಾರಿಕೆ ಉದ್ಯಮದಲ್ಲಿ ಪ್ರಗತಿ. ಸೋದರಿಯ ಮನೆಯಲ್ಲಿ ಧಾರ್ಮಿಕ ಸಮಾರಂಭ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.
7.ತುಲಾ:
ಉದ್ಯೋಗದಲ್ಲಿ ಅನುಭವಸ್ಥರಿಗೆ ಪುರಸ್ಕಾರ. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ವಸ್ತ್ರ, ಆಭರಣ ಖರೀದಿ. ಮಹಿಳೆಯರ ನೇತೃತ್ವದ ಉದ್ಯಮಗಳ ಏಳಿಗೆ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯದ ವಾತಾವರಣ. ಗಣೇಶ ಪಂಚರತ್ನ, ಮಹಿಷಮರ್ದಿನಿ ಸ್ತೋತ್ರ, ಶನಿಸ್ತೋತ್ರ ಓದಿ.
8.ವೃಶ್ಚಿಕ:
ಉದ್ಯೋಗ ಸ್ಥಾನದಲ್ಲಿ ಅನುಕೂಲದ ವಾತಾವರಣ. ಸರಕಾರಿ ಉದ್ಯೋಗಿಗಳಿಗೆ ಕೊಂಚ ನೆಮ್ಮದಿ. ಯಂತ್ರೋಪಕರಣ ವ್ಯಾಪಾರಿಗಳಿಗೆ ಅದೃಷ್ಟ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ಪ್ರಾಚೀನ ವಿದ್ಯೆಗಳನ್ನು ಕಲಿಯುವ ಆಸಕ್ತಿ. ಗಣೇಶ ಕವಚ, ದೇವೀಸ್ತೋತ್ರ, ಗುರುಸ್ತೋತ್ರ ಓದಿ.
9.ಧನು:
ನಿವಾಸ ಬದಲಾವಣೆಯ ಪ್ರಯತ್ನ ಮುಂದುವರಿಕೆ. ಉದ್ಯೋಗಸ್ಥರಿಗೆ ನೆಮ್ಮದಿಯ ಅನುಭವ. ಶಿಕ್ಷಿತರಿಗೆ ಒಳ್ಳೆಯ ಅವಕಾಶಗಳು ಗೋಚರ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಲಾಭ. ಅಸಹಾಯಕ ರೋಗಿಯ ಚಿಕಿತ್ಸೆಗೆ ನೆರವು. ಗಣೇಶ ಅಷ್ಟಕ, ಆಂಜನೇಯ ಸ್ತೋತ್ರ, ದೇವೀಕವಚ ಓದಿ.
10.ಮಕರ:
ಉದ್ಯೋಗ ಸ್ಥಾನದಲ್ಲಿ ಹೊಸ ವ್ಯವಸ್ಥೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಹೇರಳ ಲಾಭ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಹಿತಶತ್ರುಗಳ ಕುತಂತ್ರಕ್ಕೆ ಸೋಲು. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.
11.ಕುಂಭ:
ಉದ್ಯೋಗದಲ್ಲಿ ಹೆಚ್ಚುವರಿ ಹೊಣೆಗಾರಿಕೆಗಳು. ಗ್ರಾಹಕರ ಅಪೇಕ್ಷೆಗೆ ಸರಿಯಾಗಿ ಸ್ಪಂದನ. ಸಮಾಜ ಸೇವಾಕಾರ್ಯಗಳಿಗೆ ಮತ್ತಷ್ಟು ಅವಕಾಶಗಳು. ಕುಶಲ ಕರ್ಮಿಗಳಿಗೆ ಉದ್ಯೋಗಾವಕಾಶ. ಸಣ್ಣ ಉಳಿತಾಯ ಏಜೆಂಟರ ವ್ಯವಹಾರ ವೃದ್ಧಿ. ಗಣೇಶ ದ್ವಾದಶನಾಮ ಸ್ತೋತ್ರ, ದಕ್ಷಿಣಾಮೂರ್ತಿ ಸ್ತೋತ್ರ, ಶನಿಸ್ತೋತ್ರ ಓದಿ.
12.ಮೀನ:
ಉದ್ಯೋಗ ಸ್ಥಾನದಲ್ಲಿ ಸಹಜ ವಾತಾವರಣ. ವ್ಯವಹಾರ ಕ್ಷೇತ್ರದಲ್ಲಿ ಸ್ವಾಭಾವಿಕ ಪೈಪೋಟಿ. ಸರಕಾರಿ ಕಾರ್ಯಾಲಯಗಳಲ್ಲಿ ವಿಳಂಬಿತ ಸ್ಪಂದನ. ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ಪ್ರಯತ್ನ ಆರಂಭ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ. ಗಣೇಶ ಪಂಚರತ್ನ, ರಾಮ ಭುಜಂಗಪ್ರಯಾತ ಸ್ತೋತ್ರ, ಶನಿಸ್ತೋತ್ರ ಓದಿ.