ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Jan 23, 2025 - 08:46
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ


         ‌‌‌              - ಜ್ಯೋತಿರ್ಮಯ.
   ಅದೃಷ್ಟ ಸಂಖ್ಯೆ 5            

1.ಮೇಷ:

ಸದುದ್ದೇಶದಿಂದ ಮಾಡಿದ ಪ್ರಯತ್ನಕ್ಕೆ ಸೋಲು ಎದುರಾಗದು. ಉದ್ಯೋಗ ಸ್ಥಾನದಲ್ಲಿಗೌರವ ಪ್ರಾಪ್ತಿ. ಆರ್ಥಿಕ ರಂಗಕ್ಕೆ ಅಮೂಲ್ಯ ಕೊಡುಗೆಯಿತ್ತವರಿಗೆ ಪುರಸ್ಕಾರ. ಗೃಹೋದ್ಯಮ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ. ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣೇಶ  ಕವಚ, ಆದಿತ್ಯ ಹೃದಯ, ,ದೇವೀ ಸ್ತೋತ್ರ ಪಾರಾಯಣ ಮಾಡಿ.

2.ವೃಷಭ:
ಜೀವನದ ಎಲ್ಲ ಕ್ಷೇತ್ರಗಳಲ್ಲಿ  ಸಾಧನೆಯ ಹಿರಿಮೆ. ಸರಕಾರಿ ನೌಕರರಿಗೆ ಸದ್ಯದ ಮಟ್ಟಿಗೆ ನಿಶ್ಚಿಂತೆ. ವಸ್ತ್ರ , ಯಂತ್ರೋಪಕರಣ ಹಾಗೂ ಗೃಹಸಾಮಗ್ರಿ ಉದ್ಯಮಿಗಳಿಗೆ  ಆದಾಯ ವೃದ್ಧಿ. ಹೊಸ   ಕೃಷಿಭೂಮಿ ಖರೀದಿಗೆ ನಿರ್ಧಾರ. ವ್ಯವಹಾರ ಸಂಬಂಧ  ಪ್ರಯಾಣ ಸಂಭವ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂತೃಪ್ತಿಯ ದಿನ. ಗಣೇಶ ಸ್ತುತಿ, ವೆಂಕಟೇಶ ಸ್ತೋತ್ರ,ನವಗ್ರಹ ಸ್ತೋತ್ರ ಓದಿ.

3.ಮಿಥುನ:
ದೇಹ, ಮನಸ್ಸುಗಳ  ಸಂತುಲಿತ ಯತ್ನದಿಂದ ಸಮಾಧಾನ. ಯಾವುದೇ  ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಸಜ್ಜು .ಉದ್ಯೋಗಸ್ಥರಿಗೆ ಕೆಲಸಕ್ಕೆ ಹೆಚ್ಚು ಉತ್ತೇಜನ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ‌. ಆಧ್ಯಾತ್ಮಿಕ ಸಾಧನೆಯಲ್ಲಿ ಮನಸ್ಸು ಲೀನ. ಮಹಿಳೆಯರ ಸ್ವೋದ್ಯೋಗ ಘಟಕಕ್ಕೆ ಯಶಸ್ಸು. ಮಕ್ಕಳ ವ್ಯಾಸಂಗಾಸಕ್ತಿ ವೃದ್ಧಿ ಗಣಪತಿ ಅಥರ್ವ ಶೀರ್ಷ, ಶಿವ ಕವಚ,ಅನ್ನಪೂರ್ಣಾ ಸ್ತೋತ್ರ ಪಾರಾಯಣ ಮಾಡಿ.

4.ಕರ್ಕಾಟಕ:
ಕಾಡುತ್ತಿದ್ದ  ಅನಾರೋಗ್ಯದಿಂದ ಪೂರ್ಣ ಚೇತರಿಕೆ. ಉದ್ಯೋಗ  ಸ್ಥಾನದಲ್ಲಿ   ಸೌಹಾರ್ದದ  ವಾತಾವರಣ. ಸ್ವಂತ ಉದ್ಯಮಕ್ಕೆ ಎದುರಾದ  ಪೈಪೋಟಿಗಳ ವಿರುದ್ಧ ಹೋರಾಟ ಯಶಸ್ವಿ. ಉತ್ಪನ್ನಗಳ ಮತ್ತು  ಸೇವೆಗಳ ಗುಣಮಟ್ಟ  ಏರಿಕೆ. ಪಶುಪಾಲನೆ, ಹೈನುಗಾರಿಕೆ ಉದ್ಯಮಕ್ಕೆ ಪ್ರೋತ್ಸಾಹ. ಕೃಷಿ ಕ್ಷೇತ್ರದಲ್ಲಿ ಉತ್ತಮ ಬೆಳೆ. ಹಿರಿಯರ ,ಮಕ್ಕಳ ಆರೋಗ್ಯ ಉತ್ತಮ. ವಿಷ್ಣು ಸಹಸ್ರನಾಮ, ಸುಬ್ರಹ್ಮಣ್ಯ ಸ್ತೋತ್ರ  ಓದಿ.

5. ಸಿಂಹ:
ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಶಾರೀರಿಕ, ಮಾನಸಿಕ ಸಿದ್ಧತೆ. ಉದ್ಯೋಗದಲ್ಲಿ ಸ್ಥಿರವಾದ ಕಾರ್ಯವೈಖರಿ. ಉದ್ಯಮದ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಆರಂಭ. ಖಾದಿ, ಸ್ವದೇಶಿ ಉದ್ಯಮಗಳಿಗೆ ಉತ್ಕರ್ಷದ ಕಾಲ. ಲೇವಾದೇವಿ ವ್ಯವಹಾರದಲ್ಲಿ ಅಲ್ಪ ಲಾಭ. ಅವಿವಾಹಿತರಿಗೆ ವಿವಾಹ ಯೋಗ. ಸಂಸಾರದಲ್ಲಿ ಎಲ್ಲರ ಆರೋಗ್ಯವೂ  ಉತ್ತಮ. ಗಣೇಶ ಕವಚ, ವಿಷ್ಣು ಅಷ್ಟೋತ್ತರ, ದತ್ತ ಕವಚ ಓದಿ.


6.ಕನ್ಯಾ:
ಕಾರ್ಯವನ್ನು  ಪೂರ್ಣಗೊಳಿಸಲು ಅವಸರ ಬೇಡ. ಉದ್ಯೋಗದಲ್ಲಿ  ಹೊಣೆಗಾರಿಕೆಗಳ ಮರು ಹಂಚಿಕೆ. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸುವಲ್ಲಿ ಯಶಸ್ಸು. ಉದ್ಯಮದ ತ್ವರಿತ ಬೆಳವಣಿಗೆಗೆ ಸಾಮೂಹಿಕ ಪ್ರಯತ್ನ. ಹಳೆಯ ಸಹಪಾಠಿಗಳ ಭೇಟಿ ಹೊಸ ಆಸ್ತಿಯಲ್ಲಿ ಹಣದ ಬೆಳೆಗಳಿಗೆ  ಒಳ್ಳೆಯ ಅವಕಾಶ. ಮನೋಬಲದಿಂದ  ಅರೋಗ್ಯಸುಧಾರಣೆ. ಸಂಗಾತಿ ಮತ್ತು ಮಕ್ಕಳಿಗೆ ನೆಮ್ಮದಿಯ ದಿನ. ಗಣೇಶ, ಶಿವ, ವಿಷ್ಣು, ದೇವಿ ಸ್ತೋತ್ರಗಳನ್ನು ಓದಿ.

7. ತುಲಾ:
ಪರಿಸ್ಥಿತಿಯನ್ನು ಬೇಕಾದಂತೆ ಬಳಸಲು ಪ್ರಯತ್ನ. ಸಮಾಧಾನದಲ್ಲಿ ಕಾರ್ಯಾರಂಭ. ಉದ್ಯೋಗ ನಿರ್ವಹಣೆಗೆ ಪೂರಕವಾದ ಮನಸ್ಥಿತಿ. ಮಕ್ಕಳ ಪ್ರತಿಭಾ ವಿಕಾಸಕ್ಕೆ ಅಧ್ಯಾಪಕರ ಉತ್ತೇಜನ. ಪರಿಸರ ಸ್ವಚ್ಛತೆ ಕಾರ್ಯಕ್ರಮದಲ್ಲಿ ಆಸಕ್ತಿ. ಮನೆಯಲ್ಲಿ ದೇವತಾಕಾರ್ಯದಿಂದ  ಸಾತ್ವಿಕ ಸ್ಪಂದನ. ಸತ್ಸಂಗ, ಭಜನೆಗಳಲ್ಲಿ   ಪಾಲುಗೊಳ್ಳುವ ಹುಮ್ಮಸ್ಸು. ಗಣೇಶ ಕವಚ, ಆಂಜನೇಯ ಸ್ತೋತ್ರ,ನವಗ್ರಹ ಮಂಗಲಾಷ್ಟಕ  ಪಾರಾಯಣ ಮಾಡಿ.

8. ವೃಶ್ಚಿಕ:
ಹಲವು ಬಗೆಯ ಶುಭಫಲಗಳನ್ನು ಕಂಡು ಮನಸ್ಸಿಗೆ ನೆಮ್ಮದಿ. ಮೇಲಧಿಕಾರಿಗಳಿಂದ ಶ್ಲಾಘನೆ ಹಾಗೂ ಸಹೋದ್ಯೋಗಿಗಳ ಮೆಚ್ಚುಗೆ. ಸರಕಾರಿ ಅಧಿಕಾರಿಗಳಿಗೆ  ಪುರಸ್ಕಾರ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದಷ್ಟು ವ್ಯಾಪಾರ. ಬಂಧುವರ್ಗದಲ್ಲಿ ಶುಭಕಾರ್ಯ. ನೂತನ ನಿವೇಶನ ಖರೀದಿ. ಉದ್ಯೋಗ ನಿಮಿತ್ತ ಪ್ರಯಾಣ. ಎಲ್ಲರ ಆರೋಗ್ಯ ಉತ್ತಮ.ಗಣೇಶ ಅಷ್ಟೋತ್ತರ, ವಿಷ್ಣು ಸಹಸ್ರನಾಮ, ಆಂಜನೇಯ ಸ್ತೋತ್ರ ಓದಿ. 


9. ಧನು:
ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸಾಮರ್ಥ್ಯ ಸಾಬೀತು. ಪೂರ್ಣ ಪ್ರಮಾಣದ  ದೈಹಿಕ ಶ್ರಮಕ್ಕೆ ಮಾನಸಿಕ ಸಿದ್ಧತೆ. ತ್ವರಿತ ಗತಿಯಲ್ಲಿ ಉದ್ಯಮ ಅಭಿವೃದ್ಧಿ .ವಸ್ತ್ರ, ಸಿದ್ಧವಸ್ತ್ರ,  ಪಾದರಕ್ಷೆ, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ಹೇರಳ ಲಾಭ. ಮುದ್ರಣ ಸಾಮಗ್ರಿಗಳಿಗೆ ಅಧಿಕ ಬೇಡಿಕೆ. ಸಮಾಜ ಸೇವಾ ಕಾರ್ಯಗಳ  ವಿಸ್ತರಣೆ. ಸಂಸಾರದಲ್ಲಿ ಆರೋಗ್ಯ, ಪ್ರೀತಿ, ನೆಮ್ಮದಿ ವೃದ್ಧಿ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


10.ಮಕರ:
ಸಾಧನೆಯಿಂದ ಮನೋಬಲ ವೃದ್ಧಿಸಿಕೊಂಡು ಸುಲಭವಾಗಿ ಕಾರ್ಯನಿರ್ವಹಣೆ. ಉದ್ಯೋಗ ಸ್ಥಾನದಲ್ಲಿ  ಕ್ಲಪ್ತ ಸಮಯದಲ್ಲಿ ಕಾರ್ಯ ಮುಗಿಸಿದ  ತೃಪ್ತಿ. ಮರದ ಕೆಲಸಗಾರರಿಗೆ ಬೇಡಿಕೆ. ಅರೆ ವೈದ್ಯಕೀಯ ಶಿಕ್ಷಣ ಪಡೆದವರಿಗೆ ಉದ್ಯೋಗ. ಅಪರೂಪದ ಅತಿಥಿಗಳ ಆಗಮನ. ಗೃಹಾಲಂಕಾರಕ್ಕೆ ಧನವ್ಯಯ. ಎಲ್ಲರ ಆರೋಗ್ಯ ಉತ್ತಮ.ಗಣೇಶ ಕವಚ, ವಿಷ್ಣು ಸಹಸ್ರನಾಮ, ದೇವೀಸ್ತೋತ್ರ ಓದಿ.

11.ಕುಂಭ:
ನಿಮ್ಮ ಕಾರ್ಯಸಾಮರ್ಥ್ಯಕ್ಕೆ ಸರಿಯಾದ ಕೆಲಸ ಹಾಗೂ ಜವಾಬ್ದಾರಿಗಳು. ಉದ್ಯಮದ ನಿರಂತರ ಅಭಿವೃದ್ಧಿ. ಹೊಸಬರಿಗೆ ತರಬೇತಿಯ ಹೊಣೆಗಾರಿಕೆ. ಕಟ್ಟಡ ನಿರ್ಮಾಣ ಕಾರ್ಯಗಳ ವೇಗವೃದ್ಧಿ. ನಿವೇಶನ ಖರೀದಿ, ಮಾರಾಟ ವ್ಯವಹಾರದಲ್ಲಿ ಸ್ಥಿರವಾದ ಲಾಭ.‌ ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಉತ್ತಮ ಲಾಭ‌. ಸಂಸಾರದಲ್ಲಿ ಪ್ರೀತಿಯ ವಾತಾವರಣ. ಗಣೇಶ ಅಷ್ಟಕ, ನರಸಿಂಹ ಸ್ತೋತ್ರ, ಶನಿಸ್ತೋತ್ರ ಪಾರಾಯಣ ಮಾಡಿ. 

12. ಮೀನ:
ಹೊಸದಾಗಿ ಸಂಪರ್ಕಕ್ಕೆ ಬಂದ ಅಧಿಕಾರಿಗಳಿಂದ ಸಹಾಯ. ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆಯಲ್ಲಿ ಹರ್ಷ.  ಸೇವಾತತ್ಪರತೆಯಿಂದ ಸಾರ್ವಜನಿಕರಿಗೆ ತೃಪ್ತಿ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಹೊಸ ಉದ್ಯಮ ರಂಗಕ್ಕೆ ಪ್ರವೇಶಿಸಲು ಯೋಚನೆ. ವಿಷ್ಣು , ದೇವಿ  ಕ್ಷೇತ್ರಗಳಿಗೆ ಭೇಟಿ . ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ ಹಾಗೂ ಲವಲವಿಕೆ. ಗಣೇಶ ಸಹಸ್ರನಾಮ, ದತ್ತಾತ್ರೇಯ ಸ್ತೋತ್ರ , ಶನಿಸ್ತೋತ್ರ ಪಾರಾಯಣ ಮಾಡಿ.