ಜಮೀರ್ ಅಹಮದ್ ಖಾನ್ ಮನವೊಲಿಕೆ ಯಶಸ್ವಿ ಕಣದಿಂದ ಹಿಂದೆ ಸರಿಯಲು ಖಾದ್ರಿ ಒಪ್ಪಿಗೆ

ಶಿಗ್ಗಾವ್ ಉಪ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದ ಅಜ್ಜಂ ಪೀರ್ ಖಾದ್ರಿ ಮನವೊಲಿಸುವಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಯಶಸ್ವಿಯಾಗಿದ್ದು, ಕಣ ದಿಂದ ಹಿಂದೆ ಸರಿಯಲು ಒಪ್ಪಿದಾರೆ.

Oct 26, 2024 - 17:20
Oct 27, 2024 - 13:14
ಜಮೀರ್ ಅಹಮದ್ ಖಾನ್ ಮನವೊಲಿಕೆ ಯಶಸ್ವಿ ಕಣದಿಂದ ಹಿಂದೆ ಸರಿಯಲು ಖಾದ್ರಿ ಒಪ್ಪಿಗೆ
Zameer Ahmed Khan successfully persuaded Qadri to withdraw from the fray

ಬೆಂಗಳೂರು : ಶಿಗ್ಗಾವ್ ಉಪ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದ ಅಜ್ಜಂ ಪೀರ್ ಖಾದ್ರಿ ಮನವೊಲಿಸುವಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಯಶಸ್ವಿಯಾಗಿದ್ದು, ಕಣ ದಿಂದ ಹಿಂದೆ ಸರಿಯಲು ಒಪ್ಪಿದಾರೆ.
ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ವಖ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅನ್ವರ್ ಬಾಷಾ, ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟ್ ಗಾರ್ ಜತೆಗೂಡಿ ಖಾದ್ರಿ ಅವರನ್ನು ಶುಕ್ರವಾರ ಮಧ್ಯರಾತ್ರಿ ಶಿಗ್ಗಾವ್ ನಿಂದ ಬೆಂಗಳೂರಿಗೆ ಕರೆತಂದಿದ್ದ ಜಮೀರ್ ಅಹಮದ್ ಖಾನ್ ಅವರು, ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ಮಾಡಿಸಿದರು.
ಮಾತುಕತೆ ವೇಳೆ, ಖಾದ್ರಿ ಅವರಿಗೆ ರಾಜಕೀಯ ವಾಗಿ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನದ ಭರವಸೆ ನೀಡಲಾಗಿದ್ದು, ಅ . 30 ರಂದು ನಾಮಪತ್ರ ವಾಪಸ್ ಪಡೆಯುವುದು ಬಹುತೇಕ ಖಚಿತ ವಾಗಿದೆ.
ಆದರೆ, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜತೆ ಮಾತನಾಡಿ ಅವರನ್ನು ಒಪ್ಪಿಸಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಲಾಗುವುದು. ನನಗೆ ಪಕ್ಷ ಮುಖ್ಯ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಮೀರ್ ಅಹಮದ್ ಖಾನ್, ನಸೀರ್ ಅಹಮದ್ ಅವರ ಮಾತಿಗೆ ಒಪ್ಪಿದ್ದೇನೆ ಎಂದು ಅಜ್ಜಂ ಪೀರ್ ಖಾದ್ರಿ ಪತ್ರಿಕಾಗೋಷ್ಠಿ ಯಲ್ಲಿ ಹೇಳಿದರು.ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಹ್ಯಾರಿಸ್, ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟ್ ಗಾರ್ ಉಪಸ್ಥಿತರಿದ್ದರು.