ಚೀನಾದಲ್ಲೀಗ 10G ಇಂಟರ್ನೆಟ್!
ಚೀನಾದ 10G ಇಂಟರ್ನೆಟ್ ಸ್ಪೀಡ್ ಎಷ್ಟು ಅಂತ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಸಾಮಾನ್ಯವಾಗಿ 2 ಗಂಟೆಯ ಒಂದು ಹಾಲಿವುಡ್ ಸಿನಿಮಾವನ್ನ ಡೌನ್‌ಲೋಡ್ ಮಾಡಲು ಭಾರತದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಬೇಕು. ಆದ್ರೆ ಚೀನಾದ 10G ಅಲ್ಲಿ ಜಸ್ಟ್ 1 ಸೆಕೆಂಡ್ ಮಾತ್ರ ಸಾಕು.

4G, 5G ಯುಗದಲ್ಲಿ ಚೀನಾ ಸದ್ದಿಲ್ಲದೇ ಹೊಸ ಕ್ರಾಂತಿಯನ್ನೇ ಮಾಡಿದೆ. ತನ್ನ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ 10G ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸಿದೆ. 10G ಸೇವೆ ಈಗ ಇಡೀ ವಿಶ್ವದಲ್ಲೇ ಚೀನಾ ದೇಶದಲ್ಲೇ ಮೊದಲು.
ಚೀನಾದ 10G ಇಂಟರ್ನೆಟ್ ಸ್ಪೀಡ್ ಎಷ್ಟು ಅಂತ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಸಾಮಾನ್ಯವಾಗಿ 2 ಗಂಟೆಯ ಒಂದು ಹಾಲಿವುಡ್ ಸಿನಿಮಾವನ್ನ ಡೌನ್‌ಲೋಡ್ ಮಾಡಲು ಭಾರತದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಬೇಕು. ಆದ್ರೆ ಚೀನಾದ 10G ಅಲ್ಲಿ ಜಸ್ಟ್ 1 ಸೆಕೆಂಡ್ ಮಾತ್ರ ಸಾಕು. ಚೀನಾದ 10G ಸ್ಪೀಡ್ ವೇಗ ಈಗ ಡೌನ್‌ಲೋಡ್‌ನಲ್ಲಿ 9834 Mbps, ಅಪ್ಲೋಡ್ 1008 Mbps ಮತ್ತು ಲ್ಯಾಟೆನ್ಸಿ ಕೇವಲ 3 ಮಿಲಿ ಸೆಕೆಂಡ್‌ಗಳು. ಈ ಹೈಸ್ಪೀಡ್ ಇಂಟರ್ನೆಟ್‌ನಲ್ಲಿ 8K ಸಿನಿಮಾವನ್ನು ಕೇವಲ 72 ಸೆಕೆಂಡ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದು.
ಚೀನಾದ ಯುನಿಕಾಮ್ ಮತ್ತು ಹುವಾವೇ ಜಂಟಿಯಾಗಿ ಈ ಆಪರೇಷನ್ ಶುರು ಮಾಡಿದೆ. ಹುವಾವೇನ ಹೆಬೈ ನಗರದಲ್ಲಿ ಮೊಟ್ಟ ಮೊದಲ 10G ಬ್ರಾಡ್ ಬ್ಯಾಂಡ್ ನೆಟ್‌ವರ್ಕ್ ಸೇವೆ ಆರಂಭಿಸಲಾಗಿದೆ. ಹೆಬೈ ನಗರದ ಹಲವು ಮನೆಗಳಿಗೆ ಸದ್ಯ ಈ ಹೈಸ್ಪೀಡ್ ಸೇವೆಯನ್ನು ಒದಗಿಸಲಾಗಿದೆ.