ದಿನ ಭವಿಷ್ಯ

21-06-2025

Jun 21, 2025 - 03:00
ದಿನ ಭವಿಷ್ಯ

           ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 3


೧. ಮೇಷ:

ಕ್ರಮೇಣ ಸರಿ ಹೊಂದುತ್ತಿರುವ ಪರಿಸ್ಥಿತಿ. ಉದ್ಯೋಗದಲ್ಲಿ ಗೌರವದ ಸ್ಥಾನ. ಸರಕಾರಿ ನೌಕರರಿಗೆ  ವರ್ಗಾವಣೆಯೊಂದೇ ಚಿಂತೆ. ಉದ್ಯಮದ ನೌಕರರಿಗೆ ಕುಗ್ಗದ ಉತ್ಸಾಹ. ಬಂಧುವರ್ಗದಲ್ಲಿ ವಿವಾಹದ ಸಂಭ್ರಮ. ಗಣೇಶ ಕವಚ,  ಶನಿಮಹಾತ್ಮೆ ಓದಿ.
 

೨.ವೃಷಭ:

ಅಚ್ಚುಕಟ್ಟಾದ ಯೋಜನೆಯ ಪ್ರಕಾರ ವರ್ತಿಸುವುದು ವಿಹಿತ. ಸರಕಾರಿ ಅಧಿಕಾರಿಗಳಿಗೆ ಬಯಸಿದ ಸ್ಥಾನಕ್ಕೆ.ವರ್ಗಾವಣೆ.  ಕೃಷಿಕ್ಷೇತ್ರದಲ್ಲಿ ಬೆಳೆ ಪರಿಸ್ಥಿತಿ ಮಧ್ಯಮ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಗಣಪತಿ ಅಥರ್ವಶೀರ್ಷ,ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ಆದಿತ್ಯ ಹೃದಯ ಓದಿ.

 
೩. ಮಿಥುನ:

ಎಲ್ಲರಿಗೂ ಆರೋಗ್ಯ ಉತ್ತಮ. ಉದ್ಯಮಿಗಳಿಗೆ ಸಮಾಧಾನದ  ಸಮಾಚಾರ.ಸರಕಾರಿ ನೌಕರರಿಗೆ ನಿರೀಕ್ಷಿತ ವರ್ಗಾವಣೆ.  ನೂತನ ವಾಹನ ಖರೀದಿಗೆ ಚಿಂತನೆ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ ಪ್ರಾಪ್ತಿ. ಗಣೇಶ ದ್ವಾದಶನಾಮ ಸ್ತೋತ್ರ, ವಿಶ್ವನಾಥಾಷ್ಟಕ, ಗುರುಸ್ತೋತ್ರ ಓದಿ


೪. ಕರ್ಕಾಟಕ:

ವಿಶಾಲ ವ್ಯಾಪ್ತಿಯ ಯೋಜನೆಯಲ್ಲಿ ಹೂಡಿಕೆ.  ಬಂಧುವರ್ಗದ ಕ್ಷೇಮಾಭಿವೃದ್ಧಿಗೆ ಸಹಾಯ. ಉದ್ಯೋಗದಲ್ಲಿ ವೇತನ ಏರಿಕೆ.ಉದ್ಯಮದ ವ್ಯಾಪ್ತಿ ವಿಸ್ತರಣೆಗೆ. ಮನೆಯಲ್ಲಿ ದೇವತಾ ಕಾರ್ಯದ ಸಂಭ್ರಮ. ಎಲ್ಲರಿಗೂ ಆರೋಗ್ಯ ಉತ್ತಮ. ಗೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.


೫. ಸಿಂಹ: 

ಸ್ಥಗಿತವಾಗಿದ್ದ ಅಭಿವೃದ್ಧಿ ಕಾರ್ಯಗಳ ಪುನರಾರಂಭ. ಉದ್ಯಮದ ಉತ್ಪನ್ನಗಳ ಮಾರಾಟ ಜಾಲ ವಿಸ್ತರಣೆ. ಯಂತ್ರಗಳ ಬಿಡಿಭಾಗ ವ್ಯಾಪಾರಿಗಳಿಗೆ ಯಾಪಾರ ವೃದ್ಧಿ. ಸಿವಿಲ್ ಎಂಜಿನಿಯರರಿಗೆ  ಕೆಲಸ ಮುಗಿಸುವ ಒತ್ತಡ. ಆಪದ್ಬಾಂಧವನಂತಿರುವ ಮಿತ್ರನ ಆಗಮನ. ಗಣೇಶ ಕವಚ,ಲಕ್ಷ್ಮೀನೃಸಿಂಹ ಕರಾವಲಂಬನ  ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೬. ಕನ್ಯಾ:

  ಕ್ರಿಯಾಶೀಲರನ್ನು ಆತಂಕಗಳು  ತಡೆಯಲಾರವು.  ನಿತ್ಯದ ಕೆಲಸಗಳೊಂದಿಗೆ ಹೆಚ್ಚುವರಿ ಜವಾಬ್ದಾರಿಗಳು. ಸ್ವಂತ ವ್ಯವಹಾರದ ಪ್ರಗತಿ ಅಬಾಧಿತ.  ವ್ಯವಹಾರದ ಸಂಬಂಧ ಸಣ್ಣ ಪ್ರವಾಸದ ಸಾಧ್ಯತೆ. ಹಿರಿಯರ ಯೋಗಕ್ಷೇಮದ ಹೊಣೆಗಾರಿಕೆಗೆ ಹಿಂಜರಿಯದಿರಿ. ಗಣಪತಿ ಅಥರ್ವಶೀರ್ಷ, ವೆಂಕಟೇಶ್ವರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೭. ತುಲಾ:

ದೈವಾನುಗ್ರಹ, ಮನೋಬಲ ಇರುವಾಗ   ಯಾವುದೂ ಅಸಾಧ್ಯವಲ್ಲ. ಉದ್ಯೋಗ ಸ್ಥಾನದಲ್ಲಿ ಕೊಂಚ ಏರುಪೇರು ಸಂಭವ‌. ಹಿರಿಯರ ಭವಿಷ್ಯದ ಕುರಿತು ಚಿಂತೆ ಬೇಡ. ಬಾಲ್ಯದ ಒಡನಾಡಿಯ ಅನಿರೀಕ್ಷಿತ ಭೇಟಿ.  ಸಂಸಾರದಲ್ಲಿ, ಅನುರಾಗ, ಆರೋಗ್ಯ ವೃದ್ಧಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ,ಹನುಮಾನ್ ಚಾಲೀಸ ಓದಿ.


೮. ವೃಶ್ಚಿಕ:

ಕೆಲವೊಮ್ಮೆ ಅನಿರೀಕ್ಷಿತವಾಗಿ ಒಳ್ಳೆಯದೇ ಆಗುತ್ತದೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಹಠಾತ್ ಪ್ರಶಂಸೆ. ಮಕ್ಕಳ  ಉದ್ಯಮಕ್ಕೆ ಅಭೂತಪೂರ್ವ ಯಶಸ್ಸು. ಕೃಷಿಕ್ಷೇತ್ರಕ್ಕೆ ಕಾಲಿಡಲು ಕಿರಿಯರಿಗೆ ಸಹಾಯ. ಆರೋಗ್ಯ ಉತ್ತಮ, ಪ್ರೀತಿಯ ವಾತಾವರಣ. ಗಣೇಶ ಪಂಚರತ್ನ, ಶಿವಸಹಸ್ರನಾಮ, ಮಹಿಷಮರ್ದಿನಿ ಸ್ತೋತ್ರ ಓ್ಇ.


೯ಧನು:

 ಕ್ರಿಯಾಶೀಲತೆ ಚಾಲನೆಯಲ್ಲಿ ಇರುವ ಕಾರಣ  ಹಿನ್ನಡೆಗಳು ಕಂಗೆಡಿಸವು. ಉದ್ಯೋಗದಲ್ಲಿ ಸವಾಲುಗಳ ನಿರ್ವಹಣೆ ಸುಲಭ. ಸಮಾಜದ ಏಳಿಗೆ, ಪರಿಸರ ಸ್ವಚ್ಛತೆಯ  ಕಾರ್ಯಗಳಲ್ಲಿ ಆಸಕ್ತಿ. ದೇವತಾನುಗ್ರಹ ಉತ್ತಮ. ಉದ್ಯಮಿಗಳಿಗೆ ಆದಾಯ- ವೆಚ್ಚದ ಲೆಕ್ಕವನ್ನು ಸರಿದೂಗಿಸುವ ಸಮಸ್ಯೆ. ಕೃಷಿ ಸಂಬಂಧಿ ಉದ್ಯಮ ಪ್ರಗತಿ. ಕರಕುಶಲ ವಸ್ತುಗಳಿಗೆ ಬೇಡಿಕೆ ಹೆಚ್ಚಳ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ. ನವಗ್ರಹ ಪೀಡಾಪರಿಹಾರ ಸ್ತೋತ್ರ ಸ್ತೋತ್ರ  ಓದಿ

೧೦.ಮಕರ:

ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳ ಬಾಧೆ. ಮಕ್ಕಳಿಗೆ ಪಾಠೇತರ ಚಟುವಟಿಕೆಗಳಲ್ಲಿ ಒಳ್ಳೆಯ ಹೆಸರು‌. ಬಂಧುಗಳ ಗೃಹೋದ್ಯಮ ಅಭಿವೃದ್ಧಿಗೆ ಸಹಾಯ. ಆಪ್ತ ಸಲಹೆಯಿಂದ ವ್ಯಕ್ತಿತ್ವ ಬೆಳವಣಿಗೆಗೆ ಪ್ರಯತ್ನ. ಆಧ್ಯಾತ್ಮಿಕ ಸಾಧನೆಗೆ ಹಿರಿಯ ವ್ಯಕ್ತಿಯ ಮಾರ್ಗದರ್ಶನ. ಗಣೇಶ ಕವಚ, ಶಿವಪಂಚಾಕ್ಷರ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧. ಕುಂಭ:
 ದಿನಕ್ಕೊಂದರಂತೆ ಹೊಸ ಹೊಣೆಗಾರಿಕೆಗಳು. ಹತ್ತಿರಸದ ಬಂಧುಗಳ ಮನೆಯಲ್ಲಿ ಶುಭ ಸಮಾರಂಭ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಲು ಕ್ರಮ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳು ಯಶಸ್ವಿ. ಮನೆಯಲ್ಲಿ ಎಲ್ಲರಿಗೂ ಆರೋಗ್ಯ ಉತ್ತಮ. ಗಣೇಶ ಕವಚ, ಸುಬ್ರಹ್ಮಣ್ಯ ಕವಚ, ಶನಿಮಹಾತ್ಮೆ ಓದಿ.

೧೨.ಮೀನ:

 ಪ್ರಗತಿಯ  ವೇಗ ವರ್ಧನೆಯ ಪ್ರಕ್ರಿಯೆ ಆರಂಭ. ವೃತ್ತಿಬಾಂಧವರ ಸಕ್ರಿಯ ಸಹಕಾರ. ಸರಕಾರಿ ನೌಕರರ ಸಕಾಲಿಕ ಸ್ಪಂದನ. ಸಾಮಾಜಿಕ ಕಾರ್ಯಗಳಿಂದ ಕೀರ್ತಿ ವರ್ಧನೆ. ದಾಂಪತ್ಯ ಜೀವನ ಸುಖಮಯ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿ ಮಹಾತ್ಮೆ ಓದಿ.