ದಿನ ಭವಿಷ್ಯ

29-06-2025

Jun 29, 2025 - 03:00
ದಿನ ಭವಿಷ್ಯ


                 ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ  2

೧.ಮೇಷ:

 ಕೊಂಚ  ತಿರುಗಾಟದ ಸಾಧ್ಯತೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲದ ಭರವಸೆ. ಉದ್ಯೋಗಸ್ಥ ಮಹಿಳೆಯರಿಂದ ವಿರಾಮದ ಸದುಪಯೋಗ. ಆಪ್ತರಿಂದ ಅಯಾಚಿತ ನೆರವು ಲಭ್ಯ. ಹಿರಿಯರ  ಆರೋಗ್ಯದ ಕಡೆಗೆ ಗಮನ ಇರಲಿ. ಮನೆಗೆ ಅತಿಥಿಗಳ ಆಗಮನ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆಓದಿ.

೨.ವೃಷಭ:

ತಕ್ಕಮಟ್ಟಿಗೆ ನೆಮ್ಮದಿಯ ದಿನ. ಸಂಸಾರದ ಆವಶ್ಯಕತೆಗತ್ತ ಗಮನ. ಸರಕಾರಿ ಅಧಿಕಾರಿಗಳಿಗೆ ವಿರಾಮದಲ್ಲೂ ಒತ್ತಡ. ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ  ಭೇಟಿ. ಗಣಪತಿ ಅಥರ್ವಶೀರ್ಷ,  ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೩. ಮಿಥುನ:

  ಅಪವಾದಕ್ಕೆ ಗುರಿತಾಗದಂತೆ ಎಚ್ಚರ ವಹಿಸಿ. ಬಂಧುವರ್ಗದೊಳಗಿನ ಹಿತಶತ್ರುಗಳಿಂದ ತೊಂದರೆ. ಉದ್ಯಮದಲ್ಲಿ  ಪ್ರಗತಿ ತೃಪ್ತಿಕರ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ. ಸಂಗಾತಿಗೆ ಮನಸ್ಥೈರ್ಯ ತುಂಬಲು ಪ್ರಯತ್ನ. ಗಣೇಶ ಸ್ತೋತ್ರ, ಶಿವಸಹಸ್ರನಾಮ,ಆದಿತ್ಯ ಹೃದಯ ಓದಿ.


೪.ಕರ್ಕಾಟಕ:

  ವಿರಾಮವಾಗಿರುವುದರಿಂದ ಸ್ವಂತ ಕಾರ್ಯಗಳತ್ತ ಲಜ್ಷ್ಯ. ಉತ್ಪಾದನೆಗಳಲ್ಲಿ   ವೈವಿಧ್ಯ ಕಾಯ್ದುಕೊಳ್ಳುವ ಪ್ರಯತ್ನ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ಅಲ್ಪಾವಧಿ ಹೂಡಿಕೆ ಬೇಡ. ಎಲ್ಲ ಮನೆಮಂದಿಗೂ ಉಲ್ಲಾಸದ ವಾತಾವರಣ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಭುಜಂಗಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.


೫_ಸಿಂಹ:

  ವ್ಯವಹಾರಸ್ಥರಿಗೆ ಶುಭವಾರ್ತೆ. ಹೊಸ ಪರಿಚಯಸ್ಥರ ಸಹಾಯದಿಂದ  ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ. ಪಾಲುದಾರರೊಡನೆ ಕುಶಲವಾರ್ತೆ. ಮನೆಯಲ್ಲಿ ಮಂಗಲ ಕಾರ್ಯದ ಸಿದ್ಧತೆ.  ಗಣೇಶ ಪಂಚರತ್ನ, ನರಸಿಂಹ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೬.ಕನ್ಯಾ:

ಶಾಂತಿ,ಸಮಾಧಾನದ ಕ್ಷಣಗಳು. ಆತ್ಮೀಯರ ಭೇಟಿಯಿಂದ ಹರ್ಷ. ಸಾಂಸಾರಿಕ ಕ್ಷೇತ್ರದಲ್ಲಿ  ನೆಮ್ಮದಿ. ಉದ್ಯೋಗಾಸಕ್ತರಿಗೆ ಉತ್ತಮ ಅವಕಾಶಗಳು. ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫಲ.. 
ಗಣೇಶ ದ್ವಾದಶನಾಮ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ಗುರುಸ್ತೋತ್ರ ಓದಿ.

೭ತುಲಾ:

ಎಲ್ಲ ಸಮಸ್ಯೆಗಳಿಂದ ಮುಕ್ತಿ .ಸಮಾಜದಲ್ಲಿ ಗೌರವ.  ಅಕಸ್ಮಾತ್ ಧನಾಗಮ. ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ. ಸಂಗೀತ, ಕೀರ್ತನೆ, ಭಜನೆ ಶ್ರವಣದಿಂದ ಸಮಾಧಾನ‌. ಗಣೇಶ ಅಷ್ಟಕ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ದೇವೀಸ್ತೋತ್ರ ಓದಿ.


೮.ವೃಶ್ಚಿಕ:

 ಕುಟುಂಬದಲ್ಲಿ ಸಾಮರಸ್ಯ ಸ್ಥಾಪನೆ. ವಿದ್ವತ್ತು, ಪ್ರತಿಭೆಗೆ ಗೌರವ ಪ್ರಾಪ್ತಿ. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ. ಕುಶಲಕರ್ಮಿಗಳಿಗೆ, ಹೊಲಿಗೆ ಕೆಲಸ ಬಲ್ಲವರಿಗೆ ಉದ್ಯೋಗಾವಕಾಶ. ಗಣೇಶ ಪಂಚರತ್ನ. ದತ್ತಾತ್ರೇಯ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ.


೯. ಧನು:

  ಹಿತೈಷಿಗಳಿಂದ  ಆವಶ್ಯಕತೆಗೆ ತಕ್ಕಂತೆ ಸಹಾಯ. ಸಮಾಜದಲ್ಲಿ ಗೌರವ, ಸದಭಿಪ್ರಾಯಕ್ಕೆ ಪಾತ್ರರಾಗುವಿರಿ.  ಸಣ್ಣ ಪ್ರಮಾಣದ  ಉದ್ಯಮಗಳ ಅಭಿವೃದ್ಧಿ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ. ಬಾಳ ಸಂಗಾತಿಯ ಆರೋಗ್ಯ ಸುಧಾರಣೆ‌. ಗಣೇಶ  ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.


೧೦. ಮಕರ:
 ಮಹಿಳಾ ಉದ್ಯೋಗಿಗಳಿಗೆ ಅನುಕೂಲದ ದಿನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನಿವೇಶನ ಖರೀದಿ- ಮಾರಾಟ ವ್ಯವಹಾರಸ್ಥರಿಗೆ  ಅನುಕೂಲ. ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ಗಣೇಶ ಪಂಚರತ್ನ, ಶಿವಪಂಚಾಕ್ಷರ ಸ್ತೋತ್ರ,  ಹನುಮಾನ್ ಚಾಲೀಸಾ ಓದಿ.

೧೧.ಕುಂಭ:

 ಲಾಭದಾಯಕ ಯೋಜನೆಗಳಲ್ಲಿ ಹೂಡಿಕೆ. ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಊರಿನ ಬಂಧುಗಳ  ಆಗಮನ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಎಲ್ಲರ ಪೂರ್ಣ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

೧೨.ಮೀನ:

ಹಲವು ಶುಭಫಲಗಳ ದಿನ. ಹಳೆಯ ಪಾಲುದಾರರೊಂದಿಗೆ ಮಿಲನ. ಹಿರಿಯ ಉದ್ಯಮಿಯ ಪರಿಚಯಲಾಭ. ಅಪರಿಚಿತ  ವ್ಯಕ್ತಿಗಳಿಂದ  ಅನಿರೀಕ್ಷಿತ ಸಹಾಯ. ವ್ಯವಹಾರ ಸಂಬಂಧ ರಾಜಕಾರಣಿಯ ಭೇಟಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ದೇವೀಸ್ತೋತ್ರ. ಓದಿ.