ಇಂದಿನ ನಿಮ್ಮ ರಾಶಿ ಭವಿಷ್ಯ
ದಿನ ಭವಿಷ್ಯ

ದಿನ ಭವಿಷ್ಯ
ಜ್ಯೋತಿರ್ಮಯ.
ಅದೃಷ್ಟ ಸಂಖ್ಯೆ 8
೧. ಮೇಷ:
ಮನಸ್ಸಂತೋಷಗೊಳಿಸುವ ಘಟನೆಗಳು. ಸಹವರ್ತಿಗಳಿಂದ ಸಕಾಲಿಕ ನೆರವು. ದೇವತೋಪಾಸನೆಯಿಂದ ವ್ವವಹಾರಸ್ಥರಿಗೆ ಕ್ಷಿಪ್ರಾನುಗ್ರಹ.ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಮುದ ನೀಡುವ ಸನ್ನಿವೇಶ ಸೃಷ್ಟಿ.ಪಾಲುದಾರಿಕೆಯಲ್ಲಿ ಹೊಸ ವ್ಯವಹಾರದ ಪ್ರಸ್ತಾವ.ಗಣೇಶ ಕವಚ, ಕೃಷ್ಣಾಷ್ಟೋತ್ತರ ಸ್ತೋತ್ರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೨. ವೃಷಭ:
ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಚಾಲನೆ.. ದೀರ್ಘಾವಧಿ ಹೂಡಿಕೆಗಳಲ್ಲಿ ವಿಶೇಷ ಆಸಕ್ತಿ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ.ಉಳಿತಾಯ ಯೋಜನೆಗಳ ಏಜೆಂಟರಿಗೆ ಒಳ್ಳೆಯ ದಿನ.ಕಲೋಪಾಸನೆಯಲ್ಲಿ ತೊಡಗಿರುವವರಿಗೆ ಶುಭ..ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.
೩ಮಿಥುನ
ಅಸಾಧ್ಯವೆನ್ನಲಾದ ಸಂಗತಿಗಳು ನಿಜವಾದ ಕ್ಷಣ.. ಉದ್ಯೋಗ ರಂಗದಲ್ಲಿ ಹೆಚ್ಚಿನ ಜವಾಬ್ದಾರಿ . ಕರಕುಶಲ ಸಾಮಗ್ರಿಗಳ ನಿರ್ಮಾಪಕರಿಗೆ ಅಭಿವೃದ್ಧಿ..ಗೃಹಿಣಿಯರ ಸ್ವಾವಲಂಬನೆ ಕನಸು ಸಾಕಾರ.. ಮಕ್ಕಳಿಗೆ ಅಧ್ಯಯನದಲ್ಲಿ ಆಸಕ್ತಿ ವೃದ್ಧಿ.ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೪. ಕರ್ಕಾಟಕ:
ದೀರ್ಘಾವಧಿ ಉಳಿತಾಯದಲ್ಲಿ ಆಸಕ್ತಿ. ಕಟ್ಟಡ ನಿರ್ಮಾಣ, ಆಸ್ತಿ ಖರೀದಿ- ಮಾರಾಟ ವ್ಯವಹಾರದಲ್ಲಿ ಮಂದಗತಿಯ ಪ್ರಗತಿ
ವೈದ್ಯರ ಕೀರ್ತಿ ವರ್ಧನೆ.ಉದ್ಯೋಗ ಅರಸುತ್ತಿರುವವರಿಗೆ ಸದವಕಾಶ. ಉತ್ತರ ದಿಕ್ಕಿನಿಂದ ಶುಭಸಮಾಚಾರ..ಗೃಹಿಣಿಯರಿಗೆ ಮನೋರಂಜನೆ.ಗಣಪತಿ ಅಥರ್ವಶೀರ್ಷ,ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
೫ಧನು ರಾಶಿ:
ಇದು ರಾಶಿ ಚಕ್ರದ ಒಂಭತ್ತನೆಯ ರಾಶಿಯಾಗಿದ್ದು, ಈ ತಿಂಗಳ ಮೊದಲ ವಾರದಲ್ಲಿ ಮಿಶ್ರಫಲ. ಶುಕ್ರನು ನಿಮ್ಮ ರಾಶಿಗೆ ಬರಲಿದ್ದಾನೆ. ಪ್ರೇಮವು ಆರಂಭವಾಗಬಹುದು. ಕುಜನು ನೀಚನಾದ ಕಾರಣ ಗುರುಬಲವೂ ಇಲ್ಲದೇ ಇರುವುದರಿಂದ ಪೂರ್ವಾಪರ ಯೋಚನೆ ಇಲ್ಲದೇ ಹೊಂಡಕ್ಕೆ ಬೀಳಬೇಕಾಗಬಹುದು. ಮನೆಯವರೂ ಎಚ್ಚರಿಕೆಯಿಂದ ಇರುವುದು ಸೂಕ್ತ.
೬.ಸಿಂಹ:
ಉದ್ಯೋಗ, ವ್ಯವಹಾರಗಳ ಅಡಚಣೆ ನಿವಾರಣೆ. ನಡೆಗಳಲ್ಲಿ ಪಾರದರ್ಶಕತೆಯುಂದ ವಿಶ್ವಾಸ ವೃದ್ಧಿ. .ದೂರದ ಬಂಧುಗಳ ಆಗಮನದಿಂದ ಸಂತಸ.ವ್ಯವಹಾರ ಕ್ಷೇತ್ರ ವಿಸ್ತರಣೆಯ ಕುರಿತು ವಿಮರ್ಶೆ. ಮಕ್ಕಳಿಗೆ ವ್ಯಾಸಂಗ, ಮನೋರಂಜನೆ ಎರಡರಲ್ಲೂ ಆಸಕ್ತಿ.ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಮಂಗಲಾಷ್ಟಕ ಓದಿ.
೭. ಕನ್ಯಾ:
ತೀರ್ಥಕ್ಷೇತ್ರ ದರ್ಶನದಿಂದ ಲೌಕಿಕ ದುಃಖ ದೂರ. ಮನೋರಂಜನೆ ಕೇಂದ್ರಿತ ಉದ್ಯಮಗಳಿಗೆ ಪ್ರಗತಿ.ಕ್ರೀಡಾ ಸಾಮಗ್ರಿ ಉತ್ಪಾದಕರಿಗೆ ಪ್ರಗತಿಯ ಸೂಚನೆ..ಮಕ್ಕಳ ವಿವಾಹ ಮ್ಗಾತುಕತೆಯಲ್ಲಿ ಮುನ್ನಡೆ. ಗೃಹೋಪಕರಣಗಳ ಖರೀದಿಗೆ ಧನವ್ಯಯ. .ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕವಚ, ಲಕ್ಷ್ಮೀಸ್ತೋತ್ರ ಓದಿ.
೮. ತುಲಾ:
ಉದ್ಯೋಗ ಸ್ಥಾನದಲ್ಲಿ ಹಿತಾನುಭವ..ಬಂಧುವರ್ಗದವರ ಜೊತೆಯಲ್ಲಿ ಸ್ನೇಹಕೂಟ. ಲೇವಾದೇವಿ ವ್ಯವಹಾರಸ್ಥರಿಗೆ ಹಿನ್ನಡೆ. ವೈದ್ಯರೊಂದಿಗೆ ಸಮಾಲೋಚನೆಯಿಂದ ಸಂಶಯ ನಿವಾರಣೆ.ಮಗಳಿಗೆ ನೆಂಟಸ್ತಿಕೆ ಕುದುರಿಸಲು ಸಣ್ಣ ಪ್ರಯಾಣ.ಗಣಪತಿ ಅಥರ್ವಶೀರ್ಷ, ಶ್ರೀಕೃಷ್ಣ ಕರ್ಣಾಮೃತ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೯.ವೃಶ್ಚಿಕ:
ಪರರ ಸುಖವನ್ನು ನೋಡಿ ಸಂತೋಷಪಡುವ ಸ್ವಭಾವ.ಮಕ್ಕಳ ಹೊಸ ಉದ್ಯಮ ಯೋಜನೆ ಸಾಕಾರ.ವಸ್ರ್ರ, ಆಭರಣ, ಶೋಕಿ ಸಾಮಗ್ರಿ ವ್ಯಾಪಾರಿಗಳ ಆದಾಯ ವೃದ್ಧಿ. ಕರಕುಶಲ ಸಾಮಗ್ರಿ ತಯಾರಕರಿಗೆ ಉದ್ಯೋಗಾವಕಾಶ. ದಕ್ಷಿಣದಲ್ಲಿರುವ ಬಂಧುಗಳ ಕಡೆಯಿಂದ ಶುಭ ಸಮಾಚಾರ.ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೧೦.ಮಕರ:
ನಿಗದಿತ ಸಮಯದಲ್ಲಿ ಕೆಲಸ ಮುಗಿಸುವ ಸವಾಲು.ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಚಿಂತೆ.ಸಿವಿಲ್ ಎಂಜಿನಿಯರರು, ಕಂಟ್ರಾಕ್ಟರುಗಳಿಗೆ ಹೊಸ ಕೆಲಸಕ್ಕೆ ಆಹ್ವಾನ.ಲೇವಾದೇವಿ ವ್ಯವಹಾರದಲ್ಲಿ ಕಿಂಚಿತ್ ಲಾಭ.ಬ್ಯೂಟಿ ಪಾರ್ಲರ್ ನಿರ್ವಾಹಕರಿಗೆ ಲಾಭ ..ಗಣೇಶ ಕವಚ, ಕೃಷ್ಣಾಷ್ಣೋತ್ತರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೧೧. ಕುಂಭ:
.ನಿತ್ಯದ ವ್ಯವಹಾರಗಳಲ್ಲಿ ಮಂದಗತಿ.ಉದ್ಯೋಗಸ್ಥರಿಗೆ ಹಿತಶತ್ರುಗಳಿಂದ ತೊಂದರೆ.ಸಾಮಾಜಿಕ ಕ್ಷೇತ್ರದಲ್ಲಿ ಶುಭಸೂಚನೆಯ ವಿದ್ಯಮಾನಗಳು. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಬೇಡಿಕೆ ಹೆಚ್ಚಳ.ಬಂಧುಗಳ ಮನೆಯಲ್ಲಿ ದೇವತಾಕಾರ್ಯ.ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕವಚ, ಶನಿಸ್ತೋತ್ರ ಓದಿ.
೧೨. ಮೀನ:
ದಿನನಿತ್ಯದ ವ್ಯವಹಾರಗಳಲ್ಲಿ ಯಶಸ್ಸು.ಸರಕಾರಿ ಕಾರ್ಯಾಲಯಗಳಲ್ಲಿ ಸಹಕಾರ.ಹಣಕಾಸು ವ್ಯವಹಾರ ನಡೆಸುವವರಿಗೆ ಕೊಂಚ ಹಿನ್ನಡೆ. ಕೃಷ್ಯುತ್ಪನ್ನ ಮಾರಾಟದಿಂದ ಮಧ್ಯಮ ಲಾಭ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿಯಿಂದ ನೆಮ್ಮದಿ. ಗಣೇಶ ಕವಚ, ಆಂಜನೇಯ ಸ್ತೋತ್ರ, ಶನಿಸ್ತೋತ್ರ ಓದಿ.