ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Dec 3, 2024 - 05:25
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ


ಅದೃಷ್ಟ ಸಂಖ್ಯೆ 3         

1. ಮೇಷ:
 ಕೊನೆಯ ತಿಂಗಳ ಎರಡನೆಯ ದಿನ  ಶುಭದಾಯಕ.ಉದ್ಯೋಗಿಗಳಿಗೆ,ಉದ್ಯಮಿಗಳಿಗೆ ನೆಮ್ಮದಿ .ವಸ್ತ್ರ, ಸಿದ್ಧ ಉಡುಪು, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ಅದೃಷ್ಟ. ಮಹಿಳಾ ಉದ್ಯಮಿಗಳಿಗೆ ಯಶಸ್ಸು.ಗೃಹೋತ್ಪನ್ನಗಳಿಗೆ ಅಧಿಕ ಬೇಡಿಕೆ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ಆದಿತ್ಯ ಹೃದಯ ಓದಿ.


2.ವೃಷಭ:
ಹಳೆಯ ಕ್ಷೇತ್ರದ ಹೊಸ ವಿಭಾಗಕ್ಕೆ ಪ್ರವೇಶ. ಸಿದ್ಧ ಉಡುಪುಗಳು ಹಾಗೂ ಶೋಕಿ ವಸ್ತುಗಳಿಗೆ ಅಧಿಕ ಬೇಡಿಕೆ.  ಶಿಕ್ಷಿತ ವೃತ್ತಿಪರಿಣತರಿಗೆ  ಉದ್ಯೋಗಾವಕಾಶ. ಲೇವಾದೇವಿ ವ್ಯವಹಾರ ಪ್ರತಿಕೂಲ.ಯಂತ್ರೋಪಕರಣ ವ್ಯಾಪಾರಿಗಳಿಗೆ ಅನುಕೂಲ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

3.ಮಿಥುನ:
ನಿಧಾನ, ಕ್ರಮಬದ್ಧ ನಡೆಯಿಂದ ಯಶಸ್ಸು..ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ. ಅಪಾತ್ರರಿಗೆ ಸಲಹೆ ನೀಡಿ ಅವಮಾನ. ಕೆಲವು ವರ್ಗದ ವ್ಯಾಪಾರಿಗಳಿಗೆ ಹೇರಳ ಲಾಭ.ಗಣ್ಯ ವ್ಯಕ್ತಿಯ ಗೆಳೆತನದಿಂದ ಅನುಕೂಲ. ಸಂಕಷ್ಟನಾಶನ ಗಣೇಶ ಸ್ತೋತ್ರ, ರಾಮರಕ್ಷಾ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

4.ಕರ್ಕಾಟಕ:
ಉದ್ಯೋಗಸ್ಥರಿಗೆ ನೆಮ್ಮದಿಯ ವಾತಾವರಣ. ಉದ್ಯಮಗಳಿಗೆ ಸರಕಾರಿ ಸಬ್ಸಿಡಿ ಕೈಸೇರಲು ವಿಳಂಬ. ಸರಕಾರಿ   ಸೌಲಭ್ಯಗಳ ಸುಧಾರಣೆಗೆ ರಾಜಕಾರಣಿಗಳ ನಿರ್ಲಕ್ಷ್ಯ. ಚಾರಿತ್ರ್ಯವಂತರ  ಹೆಸರು ಕೆಡಿಸಲು ಸಂಚು.ಕುಟುಂಬದಲ್ಲಿ ಶಿಶುಜನನದ ವಾರ್ತ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಗುರುಸ್ತೋತ್ರ ಓದಿ.

5.ಸಿಂಹ:
ಉದ್ಯೋಗಸ್ಥರಿಗೆ ಘಟಕದ ನೇತೃತ್ವ ಲಭ್ಯ.ಉದ್ಯಮಕ್ಕೆ ಹೊಸ ರೂಪ ಪ್ರಾಪ್ತಿ. ಕುಟುಂಬಸ್ಥರ  ಮನೆಯಲ್ಲಿ ಶುಭಕಾರ್ಯ. ಹಿರಿಯರು, ಗೃಹಿಣಿಯರು, ಮಕ್ಕಳು ಎಲ್ಲರಿಗೂ ಉತ್ತಮ ಆರೋಗ್ಮ.ವ್ಯವಹಾರ ನಿಮಿತ್ತ  ಪ್ರಯಾಣ ಮುಂದೂಡಿಕೆ.ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಮಹಾಲಕ್ಷ್ಮಿ ಸ್ತೋತ್ರ ಓದಿ.


6.ಕನ್ಯಾ:
ಹೊಸ ವ್ಯವಹಾರದಲ್ಲಿ ಲಾಭದ ಅನುಭವ. ಹಿರಿಯರ ಆಸ್ತಿಯಲ್ಲಿ ಕೃಷಿಯ ಕಡೆಗೆ ಗಮನ.ಪಾಲುದಾರಿಕೆಯಲ್ಲಿ ಪಾರದರ್ಶಕತೆಯಿಂದ ಅಭಿವೃದ್ಧಿ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ  ಭರವಸೆ.ಕುಟುಂಬದ ಹಿರಿಯ ಹಿತೈಷಿ  ಆಗಮನ. ಗಣೇಶ ಅಷ್ಟಕ, ನರಸಿಂಹ ಕವಚ, ಆಂಜನೇಯ ಸ್ತೋತ್ರ ಓದಿ.


7.ತುಲಾ:
ಹಿತಶತ್ರುಗಳ ಕಾಟದಿಂದ ಮುಕ್ತಿ. ಪೈಪೋಟಿ ಎದುರಿಸಲು ಉದ್ಯಮಿಗಳ ಸಿದ್ಧತೆ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ  ಭರವಸೆಯ ಸೂಚನೆ.ಲೇವಾದೇವಿ ವ್ಯವಹಾರದಿಂದ ದೂರವಿರಿ.ಸಾರ್ವಜನಿಕ ವ್ಯಕ್ತಿಗಳಿಗೆ ಮುಖಭಂಗ. ಗಣೇಶ ಕವಚ, ರಾಮ ಭುಜಂಗಪ್ರಯಾತ ಸ್ತೋತ್ರ, ಶನಿಸ್ತೋತ್ರ ಓದಿ.

8.ವೃಶ್ಚಿಕ:
ಸರ್ವವಿಧದಲ್ಲೂ ಉತ್ತಮವಾಗಿರುವ ಪರಿಸ್ಥಿತಿ. ಉದ್ಯೋಗಸ್ಥರ ಸ್ಥಾನ ಗೌರವ ಅಬಾಧಿತ. ಸರಕಾರಿ ಅಧಿಕಾರಿಗಳಿಗೆ ಕೆಲಸದ ಹೊರೆಯ ಚಿಂತೆ. ರಾಜಕಾರಣಿಗಳಿಗೆ ಕೊಂಚ ಇಕ್ಕಟ್ಟಿನ ಪರಿಸ್ಥಿತಿ. ದುಶ್ಚಟಗಳನ್ನು ದೂರವಿಡಲು ಯುವಕರಿಗೆ ಸಹಾಯ..ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.  

9.ಧನು:
ಉದ್ಯೋಗ ಘಟಕದ ಕಾರ್ಯ  ಸುಧಾರಣೆಯ ಹೊಣೆಗಾರಿಕೆ. ಉದ್ಯಮದ ವೈವಿಧ್ಯೀಕರಣ ಕ್ರಮ ಮುನ್ನಡೆ. ಅಶಕ್ತರಿಗೆ ಸರಕಾರಿ ನೆರವು ಸಿಗದಂತೆ ಅಡ್ಡಗಾಲು. ಮಕ್ಕಳ ಅಧ್ಯಯನಾಸಕ್ತಿ ಬೆಳೆಸಲು ಪ್ರಯತ್ನ. ವ್ಯವಹಾರದ ಕುರಿತು ಆತ್ಮೀಯರೊಡನೆ ಸಮಾಲೋಚನೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


10.ಮಕರ:
 ಸಾಮರ್ಥ್ಯ ಪರೀಕ್ಷೆಯಲ್ಲಿ  ವಿಜಯ. ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಭೀತಿ. ವ್ಯಾಪಾರಿ ವರ್ಗಕ್ಕೆ ಸಾಮಾನ್ಯ ಲಾಭ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ.ಶಿಕ್ಷಕ ವೃಂದಕ್ಕೆ ಹೆಚ್ಚುವರಿ ಕೆಲಸದ. ಒತ್ತಡ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.

11.ಕುಂಭ:
ಕೆಲಸ, ಕಾರ್ಯಗಳು ಸುಗಮ. ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ.ಸರಕಾರಿ ನೌಕರರಿಗೆ ಅಧಿಕ ಕೆಲಸದ ಚಿಂತೆ.ಅಲ್ಪಾವಧಿ ಹೂಡಿಕೆಗಳಲ್ಲಿ ನಷ್ಟವಾಗುವ ಭೀತಿ. ಸಂಗೀತ, ನೃತ್ಯ ಕಲೆಗಳನ್ನು ಅಭ್ಯಾಸ ಮಾಡುವವರಿಗೆ ಸಂತಸ.ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

12.ಮೀನ:
ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಮೆಚ್ಚುಗೆ. ಪುನರಾರಂಭಗೊಂಡ ಉದ್ಯಮ ಮುನ್ನಡೆ.ಇಲಾಖೆಗಳ ಸಹಕಾರವಿದ್ದರೂ ಕಾರ್ಯ ವಿಳಂಬ.ಹೊಸ ವ್ಯವಹಾರ ಆರಂಭಿಸಿದ ಬಂಧುವಿಗೆ ಮಾರ್ಗದರ್ಶನ. ಹಿರಿಯ ಅಧಿಕಾರಿಯ ಪರಿಚಯ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ದೇವೀಸ್ತೋತ್ರ ಓದಿ.