ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Dec 14, 2024 - 04:47
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ
                   ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ  5

1.ಮೇಷ:
ಯೋಚನೆಗಳು ಸ್ಪಷ್ಟವಾಗಿರಲು  ಮನೋನಿಯಂತ್ರಣ ಇರಲಿ.ಉದ್ಯೋಗ,ವ್ಯವಹಾರಗಳಲ್ಲಿ ಮಹತ್ವದ ದಿನ.ಆರ್ಥಿಕ ಸಂಸ್ಥೆ ನೌಕರರಿಗೆ ಅಧಿಕ ಹೊರೆ. ಅಪರೂಪದ ಬಂಧುಗಳ ಭೇಟಿ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ‌.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


2.ವೃಷಭ:
 ಮೊದಲಿಗಿಂತ ಹೆಚ್ಚು ಅನುಕೂಲದ ಪರಿಸ್ಥಿತಿ.ಹಣಕಾಸು ವ್ಯವಹಾರ ಸುಗಮ.ಸರಕಾರಿ  ನೌಕರರಿಗೆ  ಸಡಿಲಾದ  ಆತಂಕ.ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.ಗೃಹೋತ್ಪನ್ನ ಖಾದ್ಯ ಪದಾರ್ಥಗಳ ಮಾರಾಟ ಹೆಚ್ಚಳ.ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

3.ಮಿಥುನ:
ಪ್ರಾಪಂಚಿಕ  ದೃಷ್ಟಿಯಿಂದ ಶುಭಕಾಲ.ಶಾರೀರಿಕ ತೊಂದರೆಗಳಿಗೆ ವಿದಾಯ.ಕಾರ್ಯ ನಿರ್ವಹಣೆ ನಿರಾತಂಕವಾಗಿ ನೆಮ್ಮದಿ.ವ್ಯವಹಾರಸ್ಥರಿಗೆ ಅನುಕೂಲದ ದಿನ.ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ.ಗಣೇಶ ಅಷ್ಟಕ,ವಿಷ್ಣು ಸಹಸ್ರನಾಮ,ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


4.ಕರ್ಕಾಟಕ:
ಕಡಿಮೆಯಾದ ಅಶುಭಫಲಗಳು.ಉದ್ಯೋಗಸ್ಥರಿಗೆ  ನೆಮ್ಮದಿಯ ವಾತಾವರಣ. ಪಾಲುದಾರಿಕೆ ವ್ಯವಹಾರ ಸುಧಾರಣೆ. ಕಟ್ಟಡ,ನಿವೇಶನ ಖರೀದಿ-ಮಾರಾಟ  ವ್ಯವಹಾರಸ್ಥರಿಗೆ ಲಾಭ.ವ್ಯವಹಾರ ಸಂಬಂಧ ಪೂರ್ವಕ್ಕೆ ಪ್ರಯಾಣ.ಗಣೇಶ ಪಂಚರತ್ನ, ಶಿವಪಂಚಾಕ್ಷರ ಸ್ತೋತ್ರ, ಗುರುಸ್ತೋತ್ರ ಓದಿ.

5.ಸಿಂಹ:
ಹಂಚಿಕೊಂಡಷ್ಟೂ ವೃದ್ಧಿಯಾಗುವ ಆನಂದ.ಸ್ವಯಂ ಉದ್ಯೋಗಸ್ಥರಿಗೆ ಲಕ್ಷ್ಮೀ ಕಟಾಕ್ಷ.ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ ಯಶಸ್ಸು. ಊರಿನ ಪ್ರಮುಖ ದೇವಿ ಆಲಯಕ್ಕೆ ಭೇಟಿ.ಗಣಪತಿ ಅಥರ್ವಶೀರ್ಷ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

6.ಕನ್ಯಾ:
ಅನಿರೀಕ್ಷಿತ ಮೂಲದಿಂದ  ಧನಪ್ರಾಪ್ತಿ. ಉದ್ಯೋಗಸ್ಥರಿಗೆ,ಸಹೋದ್ಯೋಗಿಗಳ ಸಹಾಯ.ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ.ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.ಕೊಟ್ಟು ಮರೆತಿದ್ದ ಸಾಲ ಮರಳಿ ಕೈಗೆ. ಸಂಕಷ್ಟನಾಶನ ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

7.ತುಲಾ:
ಕಾದು ಸುಸ್ರಾಗಿ ಆಶೆ ಬಿಟ್ಟಿದ್ದ ಸಹಾಯ ಲಭ್ಯ. ಉದ್ಯೋಗ ಕ್ಷೇತ್ರದಲ್ಲಿ ಬದಲಾದ ಕಾರ್ಯಗಳು.ನಿವೇಶನ, ಮನೆ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಅನುಕೂಲ.ಕೃಷಿ ಉತ್ಪನ್ನ ಮಾರಾಟಗಾರರಿಗೆ  ತೃಪ್ತಿಕರ ಲಾಭ. ಹಿರಿಯರಿಗೆ ಉಲ್ಲಾಸದ  ವಾತಾವರಣ.ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.

8.ವೃಶ್ಚಿಕ:
ಕಾರ್ಯಗಳು ನಿರೀಕ್ಷೆಯಂತೆ ಕೈಗೂಡುವ ದಿನ. ಮಾಲಿಕ- ನೌಕರರ ಬಾಂಧವ್ಯ ವೃದ್ಧಿ.ಆಸ್ತಿ,ಮನೆ ದಳ್ಳಾಳಿಗಳಿಗೆ ಅನುಕೂಲ.ಲೇವಾದೇವಿ ವ್ಯವಹಾರಸ್ಥರಿಗೆ ಹೆಚ್ಚು ಲಾಭ ಇಲ್ಲ.ಗಿರವಿ ವ್ಯವಹಾರದ ವ್ಯಾಪಾರಿಗಳಿಗೆ, ಸಂಸ್ಥೆಗಳಿಗೆ ಉತ್ತಮ ಲಾಭ.ಗಣೇಶ ಪಂಚರತ್ನ, ಶಿವಕವಚ,  ನವಗ್ರಹ ಸ್ತೋತ್ರ ಓದಿ.

9.ಧನು:
ನಿಸ್ವಾರ್ಥ ಮನೋಭಾವದ  ದುಡಿಮೆಗೆ ಶುಭಫಲ.ಹೊಂದಾಣಿಕೆ,ಕಾರ್ಯನಿಷ್ಠೆಗಳಿಂದ ಯಶಸ್ಸು.ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ದೇವತಾರ್ಚನೆಯಲ್ಲಿ ಆಸಕ್ತಿ.ನಿವಾಸ ಬದಲಾವಣೆಗೆ ಪೂರ್ವಸಿದ್ಧತೆ.ಮಕ್ಕಳ ಪ್ರತಿಭೆ ವಿಕಾಸಕ್ಕೆ ವ್ಯವಸ್ಥೆ.ಗಣೇಶ ಅಷ್ಟಕ,  ವಿಷ್ಣುಸಹಸ್ರನಾಮ,  ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


10.ಮಕರ:
ತಾಳ್ಮೆಯಿಂದ ಯೋಚಿಸಿ ಕೆಲಸ ಮಾಡಿ.ಉದ್ಯೋಗ ಸ್ಥಾನದಲ್ಲಿ ಅನುಕೂಲ ವೃದ್ಧಿ.ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಲಾಭ.ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.


11.ಕುಂಭ:
ಸವಾಲುಗಳು ಹೆಚ್ಚಾದಷ್ಟೂ ನಿಭಾಯಿಸುವ ಸಾಮರ್ಥ್ಯ.ಸಾಮಾಜಿಕ ಚಟುವಟಿಕೆಗಳ ಒತ್ತಡ.ಉದ್ಯೋಗ ರಂಗದಲ್ಲಿ ಹೆಚ್ಚು ಯಶಸ್ಸು.ಅವಿಶ್ರಾಂತ  ಚಟುವಟಿಕೆಗಳಿಂದ ಆಯಾಸ.ಗೃಹೋದ್ಯಮಗಳ ಆದಾಯ ವೃದ್ಧಿ.ಗಣಪತಿ ಅಥರ್ವಶೀರ್ಷ,ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.

12.ಮೀನ:
ಇನ್ನಷ್ಟು ಹೊಣೆಗಾರಿಕೆಗಳನ್ನು ನಿರೀಕ್ಷಿಸಿರಿ.ಕಾರ್ಯಕ್ಷೇತ್ರದಲ್ಲಿ ಪ್ರಯತ್ನಕ್ಕೆ ತಕ್ಕ ಫಲ.ಸ್ವಂತದ ಆರೋಗ್ಯದ ಕಡೆ ಗಮನವಿರಲಿ.ಸಂಗಾತಿಯಿಂದ ವ್ಯವಹಾರದಲ್ಲಿ ಉತ್ತಮ ಸಹಕಾರ.ಹೊಸ ವ್ಯವಹಾರದಲ್ಲಿ ನಿಧಾನ, ಆದರೆ ಸ್ಥಿರವಾದ ಪ್ರಗತಿ.ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ,ಶನಿಸ್ತೋತ್ರ ಓದಿ.