ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Dec 20, 2024 - 05:02
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ
            
               ಜ್ಯೋತಿರ್ಮಯ.

ಅದೃಷ್ಟ ಸಂಖ್ಯೆ 2

1.ಮೇಷ:
ಉದ್ಯೋಗ ಸ್ಥಾನದಲ್ಲಿ  ಹೊಸ ವಿಭಾಗಕ್ಕೆ ಸ್ಥಳಾಂತರ. ಗೃಹೋತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಗಮನ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಗಣ್ಯ ವ್ಯಕ್ತಿಯೊದಿಗೆ ವ್ಯವಹಾರ ಆರಂಭ. ಗಣಪತಿ ಅಥರ್ವಶೀರ್ಷ, ದೇವೀಸ್ತೋತ್ರ, ಆದಿತ್ಯ ಹೃದಯ ಓದಿ.

  

2.ವೃಷಭ:
ಉದ್ಯೋಗದಲ್ಲಿ ಸ್ಥಿರವಾದ ಪ್ರಗತಿ. ಯುವಜನರಿಗೆ ಕೃಷಿಕ್ಷೇತ್ರದ ಆಕರ್ಷಣೆ. ಖಾದಿ, ಗ್ರಾಮೋದ್ಯೋಗ ಯೋಜನೆಗಳಿಗೆ ಶುಭಕಾಲ. ರಂಗೋಲಿ, ಕಸೂತಿ ಕಲೆಗಳಲ್ಲಿ ಪರಿಣತ ಮಹಿಳೆಯರಿಗೆ ಅನುಕೂಲ. ಮುಂದುವರಿದ ಕನ್ಯಾನ್ವೇಷಣೆ. ಗಣೇಶ ಕವಚ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
 


3.ಮಿಥುನ:
ಸಕಾರಾತ್ಮಕ ಚಿಂತನೆಯಿಂದ ಯಶಸ್ಸು. ಔದ್ಯೋಗಿಕ  ಪ್ರತಿಭೆ ವೃದ್ಧಿಗೆ ಅವಕಾಶ. ವಸ್ತ್ರ , ಸಿದ್ಧ ಉಡುಪು ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಮನೆಯಲ್ಲಿ ಆನಂದದ ವಾತಾವರಣ. ವ್ಯವಹಾರಾರ್ಥ ಸಣ್ಣ ಪ್ರಯಾಣದ ಸಾಧ್ಯತೆ. ಗಣೇಶ ಪಂಚರತ್ನ, ಮಹಾಲಕ್ಷ್ಮಿ ಅಷ್ಟಕ, ಆದಿತ್ಯ ಹೃದಯ ಓದಿ.

4.ಕರ್ಕಾಟಕ:
ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುವ ಸಾಮರ್ಥ್ಯ. ಉದ್ಯಮ ಉತ್ಪನ್ನಗಳ ಜನಪ್ರಿಯತೆ ವರ್ಧನೆ. ಗೃಹೋಪಯೋಗಿ ಸಾಧನಗಳ ಖರೀದಿಗೆ ಧನವ್ಯಯ. ಮಕ್ಕಳ ಪ್ರತಿಭಾ ಪ್ರದರ್ಶನದಿಂದ ಹರ್ಷ. ಹಿರಿಯರಿಗೆ, ಮಹಿಳೆಯರಿಗೆ  ಉತ್ತಮ‌ ಆರೋಗ್ಯ. ಗಣೇಶ ಅಷ್ಟಕ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


5.ಸಿಂಹ:
ನಿಮ್ಮ ಅಭಿಪ್ರಾಯಕ್ಕೆ ಸಹಚರರ ಮನ್ನಣೆ. ಉದ್ಯಮದಲ್ಲಿ  ನೌಕರರ ಹಿತ ಕಾಯುವ ಕ್ರಮಗಳು. ಸಮಾಜದಲ್ಲಿ ಗೌರವ ವೃದ್ಧಿ. ರಾಜಕಾರಣಿಗಳು ನಡೆನುಡಿಗಳಲ್ಲಿ ಎಚ್ಚರ. ಅಧ್ಯಾಪಕರಿಗೆ ಹರ್ಷದ ದಿನ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.

6.ಕನ್ಯಾ:
ನೆಮ್ಮದಿ, ಸೌಖ್ಯದ ದಿನ. ಉದ್ಯೋಗ ಸ್ಥಾನದಲ್ಲಿ ಎಲ್ಲರಿಂದ  ಗೌರವ.  ಕೃಷಿ ಆಸಕ್ತಿ ವೃದ್ಧಿಗೆ ಪೂರಕ ಸನ್ನಿವೇಶ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಉತ್ಸಾಹದ ದಿನ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.


7.ತುಲಾ:
ದೈಹಿಕ, ಮಾನಸಿಕ ಆರೋಗ್ಯ ಉತ್ತಮ. ಉದ್ಯೋಗ, ವ್ಯವಹಾರಗಳಲ್ಲಿ ಗೌರವ. ಗುರುದರ್ಶನದಿಂದ ಧೈರ್ಯವೃದ್ಧಿ. ಅಧ್ಯಾಪಕರಿಗೆ ಮಕ್ಕಳ ಏಳಿಗೆಯಿಂದ ಸಂತೋಷ. ಹತ್ತಿರದ ದೇವಾಲಯಕ್ಕೆ ಭೇಟಿ.ಗಣೇಶ ಕವಚ, ಶಿವಕವಚ, ಶನಿಸ್ತೋತ್ರ ಓದಿ.

8.ವೃಶ್ಚಿಕ:
ಕಾಲ್ಪನಿಕ ಸಮಸ್ಯೆಗಳಿಂದ ದುರ್ಬಲರಾಗದಿರಿ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಹಿರಿಯ ಅಧಿಕಾರಿಗಳಿಗೆ ಅವ್ಯಕ್ತ ಭಯ. ಸಹಕಾರಿ ಸಂಸ್ಥೆಗಳ ಆರ್ಥಿಕ ಚೇತರಿಕೆ. ತೋಟಗಾರಿಕೆ ಬೆಳೆಗಳಿಗೆ ಬೇಡಿಕೆ, ಆದಾಯ ವೃದ್ಧಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ದೇವೀಸ್ತೋತ್ರ ಓದಿ.

9.ಧನು:
ಅಚ್ಚುಕಟ್ಟಾದ ಯೋಜನೆಯೊಂದಿಗೆ ಮುಂದುವರಿಯಿರಿ. ಸಣ್ಣ ಉದ್ಯಮ ಘಟಕದ ಸ್ಥಾಪನೆ ಪ್ರಯತ್ನ ಯಶಸ್ವಿ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಲೇವಾದೇವಿ ವ್ಯವಹಾರದಲ್ಲಿ ಅಲ್ಪ ಲಾಭ. ಉತ್ತರದ ಕಡೆಗೆ ವ್ಯವಹಾರಾರ್ಥ ಪ್ರಯಾಣ. ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

10.ಮಕರ:
ಮನಸ್ಸಿನ ಸಮತೋಲನದಿಂದ ಕಾರ್ಯಸಿದ್ಧಿ. ಉದ್ಯೋಗ ಸ್ಥಾನದಲ್ಲಿ ನಿಗದಿತ ಕಾರ್ಯ ಮುಕ್ತಾಯ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ  ವರಮಾನ ವೃದ್ಧಿ. ಕೇಟರಿಂಗ್ ವೃತ್ತಿಯವರಿಗೆ ಅನುಕೂಲ. ವಾಹನ ಚಾಲನೆಯಲ್ಲಿ ಎಚ್ಚರ. ಗಣೇಶ ಕವಚ, ನರಸಿಂಹ ಸ್ತೋತ್ರ, ಶನಿಸ್ತೋತ್ರ ಓದಿ.

 
11.ಕುಂಭ:
ಹಲವು ಬಗೆಯ ಕಾರ್ಯಗಳ ಒತ್ತಡ. ಸಾಮಾಜಿಕ‌ ವಲಯದ  ಆಪ್ತರಿಂದ ಸಹಾಯದ ಕೊಡುಗೆ. ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು. ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ರಾಜಕೀಯ ನಾಯಕರಿಗೆ ದ್ವಂದ್ವ ನೀತಿಯಿಂದ ಸೋಲು. ಸಂಕಷ್ಟನಾಶನ ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ಶನಿಸ್ತೋತ್ರ ಓದಿ.


12. ಮೀನ:
ಅನೇಕ  ವಿಭಾಗಗಳತ್ತ ಲಕ್ಷ್ಯ ಹರಿಸುವ ಅನಿವಾರ್ಯತೆ. ಸರಕಾರಿ ಅಧಿಕಾರಿಗಳ ಸಕಾರಾತ್ಮಕ ಸ್ಪಂದನ.  ಕೃಷಿ ಆಧಾರಿತ ಉದ್ಯಮಗಳು ಪ್ರಗತಿಯಲ್ಲಿ. ವಿವಾಹ ಅಪೇಕ್ಷಿಗಳಿಗೆ  ಸಮರ್ಪಕ ಜೋಡಿ ಲಭ್ಯ.ಜ್ಯೋತಿಷಿ, ವೈದ್ಯರ ಭೇಟಿ ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.