ದಿನ ಭವಿಷ್ಯ
06-07-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 6.
೧. ಮೇಷ:
ಚಿಂತೆಗಳನ್ನು ಮರೆತು ಆನಂದವನ್ನು ಅನುಭವಿಸಿ. ಉದ್ಯೋಗ, ವ್ಯವಹಾರಗಳಲ್ಲಿ ನಿರ್ಣಾಯಕ ಹಂತ. ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ. ಅಪರೂಪದ ಬಂಧುಗಳ ಭೇಟಿ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರ ನಾಮ, ಶನಮಹಾತ್ಮೆ ಓದಿ.
೨. ವೃಷಭ:
ವ್ಯಾಪಾರ, ವ್ಯವಹಾರಗಳ ಚಿಂತೆ ಬದಿಗಿಡಿ. ದೀರ್ಘಾವಧಿ ಹೂಡಿಕೆಗಳಿಂದ ಲಾಭ. ಸರಕಾರಿ ನೌಕರರಿಗೆ ಕೊಂಚ ಆತಂಕ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಗೃಹೋತ್ಪನ್ನ ಖಾದ್ಯ ಪದಾರ್ಥಗಳ ಮಾರಾಟ ಹೆಚ್ಚಳ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ ಆದಿತ್ಯ ಹೃದಯ ಓದಿ.
೩ಮಿಥುನ:
ವ್ಯಾವಹಾರಿಕ ದೃಷ್ಟಿಯಿಂದ ಅನುಕೂಲ. ಶಾರೀರಿಕ ಆರೋಗ್ಯ ಸುಧಾರಣೆ. ಉದ್ಯೋಗಸ್ಥರಿಗೆ ರಜಾದಿನದ ನೆಮ್ಮದಿ. ವ್ಯವಹಾರಸ್ಥರಿಗೆ ಅನುಕೂಲದ ದಿನ. ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ. ಗಣೇಶ ಕವಚ, ರಾಮ ಭುಜಂಗಪ್ರಯಾತ ಸ್ತೋತ್ರ, ಆದಿತ್ಯ ಹೃದಯ ಓದಿ.
೪. ಕರ್ಕಾಟಕ:
ಮುಕ್ಕಾಲುಪಾಲು ಶುಭಫಲಗಳಿಂದ ಕೂಡಿದ ದಿನ. ಉದ್ಯೋಗಸ್ಥರಿಗೆ ರಜೆಯ ಆನಂದ. ಪಾಲುದಾರಿಕೆ ವ್ಯವಹಾರದ ದಾರಿ ಸುಗಮ. ಕಟ್ಟಡ ನಿರ್ಮಾಣ-ಮಾರಾಟ ವ್ಯವಹಾರಸ್ಥರಿಗೆ ಉತ್ತಮ ಲಾಭ. ವ್ಯವಹಾರ ಸಂಬಂಧ ಸಣ್ಣ ಪ್ರವಾಸ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೫.ಸಿಂಹ
ಸಂಭ್ರಮಾಚರಣೆಯಲ್ಲಿ ಸಂಯಮ ಇರಲಿ. ಸ್ವಯಂ ಉದ್ಯೋಗಸ್ಥರಿಗೆ ಲಕ್ಷ್ಮೀ ಕಟಾಕ್ಷ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ ಯಶಸ್ಸು. ಹತ್ತಿರದ ದೇವೀಕ್ಷೇತ್ರಕ್ಕೆ ಭೇಟಿ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೬. ಕನ್ಯಾ:
ಕೆಲವೊಮ್ಮೆ ಸರ್ವತ್ರ ಶುಭಫಲಗಳೇ ಕಾಣಿಸುತ್ತವೆ. ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ. ಸಮಾಜಬಂಧುಗಳಿಂದ ಉಪಯುಕ್ತ ಸಹಾಯ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ದಕ್ಷಿಣಾಮೂರ್ತಿ ಸ್ತೋತ್ರ,ನವಗ್ರಹ ಸ್ತೋತ್ರ ಓದಿ.
೭. ತುಲಾ:
ಆಪದ್ಬಾಂಧವನಂತಹ ವ್ಯಕ್ತಿಯ ಆಗಮನ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಬಗೆಯ ಕಾರ್ಯಗಳು. ಭೂ ವ್ಯವಹಾರ ಮಾಡುವವರಿಗೆ ಅನುಕೂಲ. ಕೃಷಿ ಉತ್ಪನ್ನ ಮಾರಾಟಗಾರರಿಗೆ ತೃಪ್ತಿಕರ ಲಾಭ. ಹಿರಿಯರಿಗೆ ಉಲ್ಲಾಸದ ಅನುಭವ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೮.ವೃಶ್ಚಿಕ:
ಎಲ್ಲವೂ ಅಂದುಕೊಂಡಂತೆ ನಡೆದಾಗ ಹೇಗಿರಬಹುದು? ಮಾಲಿಕ- ನೌಕರರ ಬಾಂಧವ್ಯ ವೃದ್ಧಿ. ಆಸ್ತಿ, ಮನೆ ದಳ್ಳಾಳಿಗಳಿಗೆ ಅನುಕೂಲ. ಲೇವಾದೇವಿ ವ್ಯವಹಾರಸ್ಥರಿಗೆ ಲಾಭ. ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಗಣೇಶ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ವೆಂಕಟೇಶ್ವರ ಸ್ತೋತ್ರ , ಮಹಾಲಕ್ಷ್ಮಿ ಅಷ್ಟಕಓದಿ.
೯.ಧನು:
ಸ್ವಂತ ಸಾಮರ್ಥ್ಯವನ್ನು ನಂಬಿ ಮುನ್ನಡೆಯಿರಿ. ಹೊಂದಾಣಿಕೆ, ನಿರಂತರ ಯತ್ನದಿಂದ ಯಶಸ್ಸು. ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ದೇವತಾರ್ಚನೆಯಲ್ಲಿ ಆಸಕ್ತಿ. ವ್ಯವಹಾರ ಸಂಬಂಧ ಪ್ರಯಾಣ ಸಂಭವ. ಮಕ್ಕಳ ಪ್ರತಿಭೆ ವಿಕಾಸಕ್ಕೆ ವ್ಯವಸ್ಥೆ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೧೦.ಮಕರ:
ದ್ವೇಷದಿಂದ ಇನ್ನಷ್ಟು ದುಃಖ ಎಂಬುದು ನೆನಪಿರಲಿ ಕಚೇರಿಗೆ ರಜೆಯಾಗಿ ನಿಶ್ಚಿಂತೆ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಲಾಭ. ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ದೇವೀಸ್ತೋತ್ರ ಓದಿ.
೧೧. ಕುಂಭ:
ಜವಾಬ್ದಾರಿಗಳನು ಸಮಾನವಾಗಿ ಹಂಚುವ ನಿರೀಕ್ಷೆ. ಸಾಮಾಜಿಕ ಚಟುವಟಿಕೆಗಳ ಒತ್ತಡ. ಉದ್ಯೋಗ ರಂಗದಲ್ಲಿ ಹೆಚ್ಚು ಯಶಸ್ಸು. ಅವಿಶ್ರಾಂತ ಚಟುವಟಿಕೆಗಳಿಂದ ಆಯಾಸ. ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ. ಗಣೇಶ ಕವಚ, ನರಸಿಂಹ ಸ್ತೋತ್ರ, ಆಂಜನೇಯ ಸ್ತೋತ್ರ , ಶನಿಮಹಾತ್ಮೆ ಓದಿ.
೧೨. ಮೀನ:
ಇನ್ನಷ್ಟು ಹೊಣೆಗಾರಿಕೆಗಳನ್ನು ನಿರೀಕ್ಷಿಸಿರಿ. ಕಾರ್ಯಕ್ಷೇತ್ರದಲ್ಲಿ ಪ್ರಯತ್ನಕ್ಕೆ ತಕ್ಕ ಫಲ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ವಸ್ತ್ರ, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ಅನುಕೂಲ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.