ಹೊಸ 100 ರೂ ಮತ್ತು 200 ರೂ ನೋಟುಗಳ ಬಿಡುಗಡೆ
ಹಳೆಯ 100 ರೂ ನೋಟು 73 x 157 ಎಂಎಂ ಅಳತೆಯದ್ದಿದೆ. ಹೊಸ ನೋಟು 66 x 142 ಎಂಎಂ ಅಳತೆಯದ್ದಾಗಿದೆ. ಅಂದರೆ ಹಳೆಯ ನೋಟಿಗಿಂತ ಹೊಸ 100 ರೂ ನೋಟು ಗಾತ್ರದಲ್ಲಿ ಚಿಕ್ಕದಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಮೊನ್ನೆಯಷ್ಟೇ ಹೊಸ 10 ರೂ ಮತ್ತು 500 ರೂ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಹಾಗೆಯೇ, ಹೊಸ 100 ರೂ ಮತ್ತು 200 ರೂ ನೋಟುಗಳನ್ನು ಅದು ಬಿಡುಗಡೆ ಮಾಡಿದೆ. ಆರ್ಬಿಐ (RBI new bank notes) ಹೊಸ ನೋಟುಗಳನ್ನು ಮುದ್ರಿಸಲು ಬೇರೆ ಬೇರೆ ಕಾರಣಗಳಿರುತ್ತವೆ. ಒಂದು ನೋಟು ಹಳೆಯದಾದಾಗ ಹಾಳಾಗುತ್ತವಾದ್ದರಿಂದ ನಿಗದಿತ ವರ್ಷಗಳವರೆಗೆ ಮಾತ್ರ ಅವುಗಳನ್ನು ಚಲಾವಣೆಯಲ್ಲಿ ಇರಿಸಲಾಗುತ್ತದೆ. ಆ ಬಳಿಕ ಹೊಸ ನೋಟುಗಳನ್ನು ಮುದ್ರಿಸಲಾಗುತ್ತದೆ. ಮತ್ತೂ ಕೆಲ ಬಾರಿ, ನಕಲಿ ನೋಟುಗಳು ಹೆಚ್ಚಾದಾಗ ಅಥವಾ ಹೊಸ ಸೆಕ್ಯೂರಿಟಿ ಫೀಚರ್ಗಳನ್ನು ಅಳವಡಿಸಬೇಕೆಂದಾಗ ಸಂಪೂರ್ಣ ಹೊಸ ವಿನ್ಯಾಸ ಇರುವ ನೋಟುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈಗ ಆರ್ಬಿಐ 100 ರೂ ಮತ್ತು 200 ರೂ ನೋಟುಗಳನ್ನು ಹೊಸ ವಿನ್ಯಾಸದೊಂದಿಗೆ ಮುದ್ರಿಸಿದೆ.
ಹಳೆಯ 100 ರೂ ನೋಟು 73 x 157 ಎಂಎಂ ಅಳತೆಯದ್ದಿದೆ. ಹೊಸ ನೋಟು 66 x 142 ಎಂಎಂ ಅಳತೆಯದ್ದಾಗಿದೆ. ಅಂದರೆ ಹಳೆಯ ನೋಟಿಗಿಂತ ಹೊಸ 100 ರೂ ನೋಟು ಗಾತ್ರದಲ್ಲಿ ಚಿಕ್ಕದಾಗಿದೆ.
ಮಹಾತ್ಮ ಗಾಂಧಿಯ ಹೊಸ ಚಿತ್ರವು ನೋಟಿನಲ್ಲಿದೆ. ಲೇಟೆಂಟ್ ಇಮೇಜ್, ಪುಟ್ಟ ಅಕ್ಷರ ಇತ್ಯಾದಿ ಸೆಕ್ಯೂರಿಟಿ ಫೀಚರ್ಗಳಿವೆ. ಸ್ಪರ್ಶಕ್ಕೆ ಗೊತ್ತಾಗುವ ಗೆರೆಗಳು ಇದ್ದು ಇದರಿಂದ ಅಂಧರು ನೋಟನ್ನು ಗುರುತಿಸಲು ಸಾಧ್ಯವಾಗುತ್ತದೆ. ಹಳೆಯ ನೋಟಿನಲ್ಲಿ ಈ ಫೀಚರ್ ಇರಲಿಲ್ಲ.
ಹಾಗೆಯೇ, ಹಳೆಯ 100 ರೂ ನೋಟಿನ ಬಣ್ಣವು ನೀಲಿ ಮತ್ತು ಹಸಿರು ಮಿಶ್ರಿತವಾಗಿದ್ದರೆ, ಹೊಸ ನೋಟಿನ ಬಣ್ಣ ಲ್ಯಾವೆಂಡರ್ (ದಟ್ಟ ನೀಲಿ) ಆಗಿದೆ.
200 ರೂ ಹೊಸ ನೋಟಿನ ಗಾತ್ರ 66 x 146 ಎಂಎಂ ಇದೆ. ಹಳೆಯ ನೋಟಿನ ಗಾತ್ರ 73 x 157 ಎಂಎಂನಷ್ಟಿದೆ. ಇದರ ಬಣ್ಣ ಹಳದಿ ಮತ್ತು ಕಿತ್ತಳೆ ಮಿಶ್ರಿತವಾಗಿದೆ. ಆದರೆ, ಹೊಸ ನೋಟಿನ ಬಣ್ಣ ದಟ್ಟ ಹಳದಿಯದ್ದಾಗಿದೆ.
ಹೊಸ 200 ರೂ ನೋಟು
ಹೊಸ 200 ರೂ ನೋಟಿನಲ್ಲಿ ಬಣ್ಣ ಬದಲಾಗುವ ಥ್ರೆಡ್ ಹಾಗೂ ಹೊಸ ರೀತಿಯ ವಾಟರ್ಮಾರ್ಕ್ ಇದೆ. ಅಂಧರಿಗೆ ಸ್ಪರ್ಶದಿಂದ ಹೊತ್ತಾಗುವ ಗೆರೆಗಳಿರುತ್ತವೆ.