ಪುತ್ತೂರಿನಲ್ಲಿ ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ

ಪ್ರತಿ ವರ್ಷದಂತೆ ಈ ವರ್ಷವೂ ಪುತ್ತಿಲ ಪರಿವಾರದಿಂದ ಹಿಂದೂ ಸಮಾಜದ ಏಕತೆ ಹಾಗೂ ಮಾತೆಯರ ಒಗ್ಗೂಡುವಿಕೆ ಆಶಯದೊಂದಿಗೆ ವರಮಹಾಲಕ್ಷ್ಮಿ ಪೂಜೆಯನ್ನು ಆಯೋಜಿಸಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮದ ಮೂಲಕ ಹಿಂದೂ ಸಮಾಜದ ಕೇಂದ್ರಬಿಂದುವಾಗಿರುವ ಮಾತೆಯರು ಮತ್ತು ಸಹೋದರಿಯರನ್ನು ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

Jul 7, 2026 - 19:12
ಪುತ್ತೂರಿನಲ್ಲಿ ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ
Invitation for the 3rd Annual Varamahalakshmi Pooja in Puttur released

ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ವರಮಹಾಲಕ್ಷ್ಮೀ ಪೂಜಾ ಸಮಿತಿ, ಪುತ್ತೂರು ಇದರ ವತಿಯಿಂದ ನಡೆಯಲಿರುವ ಮೂರನೇ ವರ್ಷದ ವರಮಹಾಲಕ್ಷ್ಮಿ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಮುಕ್ರಂಪಾಡಿಯ ಸುಭದ್ರಾ ಕಲಾ ಮಂದಿರದಲ್ಲಿ ನೆರವೇರಿತು.

ಪ್ರತಿ ವರ್ಷದಂತೆ ಈ ವರ್ಷವೂ ಪುತ್ತಿಲ ಪರಿವಾರದಿಂದ ಹಿಂದೂ ಸಮಾಜದ ಏಕತೆ ಹಾಗೂ ಮಾತೆಯರ ಒಗ್ಗೂಡುವಿಕೆ ಆಶಯದೊಂದಿಗೆ ವರಮಹಾಲಕ್ಷ್ಮಿ ಪೂಜೆಯನ್ನು ಆಯೋಜಿಸಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮದ ಮೂಲಕ ಹಿಂದೂ ಸಮಾಜದ ಕೇಂದ್ರಬಿಂದುವಾಗಿರುವ ಮಾತೆಯರು ಮತ್ತು ಸಹೋದರಿಯರನ್ನು ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಅವರು, “ಪ್ರಥಮ ವರ್ಷದ ಪೂಜೆಯಲ್ಲಿ ಸುಮಾರು 2,512 ಸೇವೆಗಳು ನಡೆದಿದ್ದವು. ದ್ವಿತೀಯ ವರ್ಷದಲ್ಲಿ ಅದು ಸುಮಾರು 5,471ಕ್ಕೆ ಏರಿಕೆಯಾಯಿತು. ಈ ಬಾರಿ ಮೂರನೇ ವರ್ಷದ ಪೂಜೆಯಲ್ಲಿ 10,000ಕ್ಕೂ ಅಧಿಕ ಸೇವೆಗಳನ್ನು ಭಕ್ತಾದಿಗಳು ನೀಡುವರೆಂಬ ವಿಶ್ವಾಸ ಮತ್ತು ಗುರಿ ನಮ್ಮಲ್ಲಿದೆ” ಎಂದು ಹೇಳಿದರು.

ಅಲ್ಲದೆ, ಈ ಸನಾತನ ಧಾರ್ಮಿಕ ಕಾರ್ಯಕ್ಕೆ ಪುತ್ತೂರಿನ ಸಮಸ್ತ ಹಿಂದೂ ಬಾಂಧವರು ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.ಈ ಸಂದರ್ಭ, ಟ್ರಸ್ಟಿನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ,ಅಧ್ಯಕ್ಷರಾದ ಶ್ರೀರಾಮ ಭಟ್ ಪಾತಾಳ,ಪ್ರ.ಕಾರ್ಯದರ್ಶಿ ಪ್ರೇಮ್ ರಾಜ್ ಆರ್ಲಪದವು,ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ವೀಣಾ ಬಲ್ಲಾಳ್,ಪ್ರ.ಕಾರ್ಯದರ್ಶಿಗಳಾದ ಸ್ವಯಂ ಪ್ರಭಾ ಭಟ್,ಪವಿತ್ರಾ ದೊಡ್ಡಡ್ಕ,ಪ್ರತಿಭಾ ಒಕುಣ್ಣಾಯ,ರಜತಾ ಭಟ್ ಹಾಗೂ ಟ್ರಸ್ಟಿನ ಸಂಘಟನಾ ಕಾರ್ಯದರ್ಶಿಗಳಾದ ಅನಿಲ್ ತೆಂಕಿಲ,ಉಮೇಶ್ ಕೋಡಿಬೈಲು,ಪ್ರಶಾಂತ್ ನೆಕ್ಕಿಲಾಡಿ,ಖಜಾಂಜಿ ರೂಪೇಶ್ ನೈಕ್,ನಿರ್ದೇಶಕರುಗಳಾದ ಚಂದಪ್ಪ ಮೂಲ್ಯ, ಶಶಾಂಕ್ ಕೊಟೇಚಾ,ನಾರಾಯಣ ಪ್ರಕಾಶ್ ನೆಲ್ಲೆತ್ತಿಮಾರು, ರವಿ ಕುಮಾರ್ ರೈ,ಪ್ರವೀಣ್ ಶೆಟ್ಟಿ, ಮಹೇಂದ್ರ ವರ್ಮ, ಗಣೇಶ್ ಚಂದ್ರ ಭಟ್, ರಾಜು ಶೆಟ್ಟಿ, ಅನಿಲ್ ಕಣ್ಣಾರ್ನೂಜಿ, ಪ್ರಕಾಶ್ ಚಿಕ್ಕಮಡ್ನೂರು, ಪ್ರಜ್ವಲ್ ಘಾಟೆ, ಸುಜಿತ್ ಕಜೆ, ಮನೀಶ್ ಕುಲಾಲ್, ಪ್ರಕಾಶ್ ಕೊಡಿಪ್ಪಾಡಿ, ಶ್ರೀಕಾಂತ್ ಆಚಾರ್, ರಿತೇಶ್ ಪಾತಳಿ, ರವಿಪ್ರಸಾದ್ ರೈ ಕಾವು, ಪ್ರದೀಪ್ ಶೆಗ್ರಿತ್ತಾಯ, ನವೀನ್ ಪಂಜಳ, ರಾಜೇಶ್ ಭಟ್ ಕುಳ, ತಿಲಕರಾಜ್ ಶೆಟ್ಟಿ, ಗಣೇಶ್ ಕುಲಾಲ್, ಯುವರಾಜ್ ಪೂಂಜಾ, ಪ್ರದೀಪ್ ಪಾಣಾಜೆ, ಹರೀಶ್ ಭಟ್ ಪುಣಚ, ಲಕ್ಷ್ಮಿ ಪ್ರಸಾದ್, ಮೋಕ್ಷಿತ್ ಕೊಳ್ತಿಗೆ, ವಿಶ್ವನಾಥ್ ಬಲ್ಯಾಯ, ಗೋಪಾಲಕೃಷ್ಣ, ಚರಣ್ ಭಟ್, ಮಹೇಶ್, ಜನಾರ್ಧನ ಕುರೆಮಜಲು, ಪದ್ಮನಾಭ ಮಡ್ಡ್ಯಂಗಳ, ರಾಜೇಶ್ ಮುಖಾರಿ, ರಘುರಾಮ್  ರೈ, ಹರೀಶ್ ಪುತ್ತಿಲ, ಕಿಶೋರ್ ನಗರ, ಹರ್ಷಿತ್, ಬಾಲಚಂದ್ರ ಸೊರಕೆ, ಗಿರೀಶ್ ಆನಡ್ಕ, ನವೀನ್ ಕೊಡಿಪ್ಪಾಡಿ, ಸಂದೀಪ್ ಕೆ., ರಾಕೇಶ್ ಓಜಾಲ, ಗಣೇಶ್ ಮುಕ್ರಂಪಾಡಿ, ಯಶವಂತ ಹಾಗೂ ವರಮಹಾಲಕ್ಷಿ ಪೂಜಾ ಸಮಿತಿಯ ಪದಾಧಿಕಾರಿಗಳಾದ ಅಮಿತಾ ಆರ್ ಶೆಟ್ಟಿ, ಸ್ಮಿತಾ ಸುಜಿತ್, ಅನ್ನಪೂರ್ಣ ಭಟ್, ಪೂಜಾ ರೈ,ಶ್ರೀಜನಿ, ಅಕ್ಷತ, ಪ್ರೇಮ ರೈ, ವಿಮಲಾ, ಗೌರಮ್ಮ, ಯಮುನಾ, ಅನ್ನಪೂರ್ಣ ಬಲ್ಲಾಳ್, ಚಂದ್ರಿಕಾ ಉಪಸ್ಥಿತರಿದ್ದರು.