ಪುತ‍್ತೂರು: ಜೀವನದ ಸಾಧನೆಗೆ ಈಗಿನಿಂದಲೇ ತಯಾರಾಗಿ.. ಮೋನಪ್ಪ ಪೂಜಾರಿ

Puttur Akshaya Pre-University College, Inauguration Student Council: ಪುತ್ತೂರಿನ ಅಕ್ಷಯ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನೆ ಮಾಡಲಾಯಿತು.

Jul 4, 2026 - 07:16
Jul 4, 2026 - 07:49
ಪುತ‍್ತೂರು: ಜೀವನದ ಸಾಧನೆಗೆ ಈಗಿನಿಂದಲೇ ತಯಾರಾಗಿ.. ಮೋನಪ್ಪ ಪೂಜಾರಿ

ಪುತ‍್ತೂರು: ವಿದ‍್ಯಾರ್ಥಿಗಳು ತಮ್ಮ ಬದುಕಿನಲ್ಲಿ ದೊಡ್ಡ ಸ‍್ಥಾನಕ‍್ಕೆ ಹೋಗುವ ಹಂತ ಪದವಿ ಪೂರ್ವ ಹಂತವಾಗಿದೆ. ಜೀವನದ ಸಾಧನೆಗೆ ಈಗಿನಿಂದ ತಯಾರಿ ನಡೆಸುವ ಗುರಿ ನಿಮ್ಮದಾಗಿರಲಿ ಎಂದು ಪ್ರಭಾರ ಕ‍್ಷೇತ್ರ ಶಿಕ್ಷಣಾಧಿಕಾರಿ ಮೋನಪ್ಪ ಪೂಜಾರಿ ಹೇಳಿದರು.

ಅಕ್ಷಯ ಪದವಿ ಪೂರ್ವ ಕಾಲೇಜಿನಲ‍್ಲಿ 2026 -27ನೇ ಸಾಲಿನ ವಿದ‍್ಯಾರ್ಥಿ ಪರಿಷತ‍್ತು ಹಾಗೂ ವಿವಿಧ ಸಂಘಗಳ ಉದ‍್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಈ ಸಂಸ‍್ಥೆಯು ಉನ್ನತ ಮಟ್ಟದ ಶಿಕ್ಷಣಕ್ಕೆ ಹೆಚ್ಚನ ಆದ್ಯತೆ ನೀಡಿದ್ದು, ವಿವಿಧ ಕ‍್ಷೇತ್ರಗಳಲ‍್ಲಿ ತಮ್ಮ ವಿದ‍್ಯಾರ್ಥಿಗಳು ಕಾರ್ಯನಿರ್ವಹಿಸುವಂತೆ ಮಾಡಿರುವುದು ಗಮನಾರ್ಹ ವಿಷಯವಾಗಿದೆ. ಇದೇ ರೀತಿ ಇನ‍್ನು ಮಂದೆಯೂ ಈ ಶಿಕ್ಷಣ ಸಂಸ‍್ಥೆ ಮತ್ತಷ್ಟು ಉನ್ನತ ಮಟ್ಟಕ‍್ಕೆ ತಲುಪಲಿ ಎಂದರು.

ಅಕ್ಷಯ ಸಮೂಹ ಶಿಕ್ಷಣ ಸಂಸ‍್ಥೆಯ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ವಿದ‍್ಯಾರ್ಥಿ ಜೀವನವು ಒಂದು ಪ್ರಮಖ ಘಟ್ಟವಾಗಿದೆ. ಈ ಹಂತದಲ್ಲೇ ನಾಯಕತ್ವ ಗುಣ ಬೆಳೆಸಿಕೊಳ‍್ಳುವುದು ಅಗತ್ಯ. ವಿದ‍್ಯಾರ್ಥಿ ಸಂಘದಿಂದ ಹಲವು ಜವಾಬ‍್ದಾರಿಯತ ಕೆಲಸಗಳು ನಡೆದು, ಸಂಸ‍್ಥೆಗೆ ಒಳ‍್ಳೆಯ ಹೆಸರು ಹಾಗೂ ಗೌರವವನ‍್ನು ತರಲಿ ಎಂದು ಹೇಳಿದರು.

ವಿದ‍್ಯಾರ್ಥಿಗಳು ಕಾಲೇಜಿನ ಸರ್ವತೋಮಖ ಬೆಳವಣಿಗೆಯಲ‍್ಲಿ ಸಹಕರಿಸಬೇಕು. ನಾಯಕತ್ವ ಎಂದರೆ ಕೇವಲ ಅಧಿಕಾರವಲ್ಲ, ಅದು ಇತರರಿಗೆ ಸಹಾಯ ಮಾಡುವುದು ಹಾಗೂ ಜವಾಬ‍್ದಾರಿಯನ‍್ನು ತೆಗೆದುಕೊಳ‍್ಳುವುದು. ವಿದ‍್ಯಾರ್ಥಿ ಸಂಘದ ಪದಾಧಿಕಾರಿಗಳು ಒಟ‍್ಟಾಗಿ ಸೇರಿ ಕಾರ್ಯನಿರ್ವಹಿಸಿದರೆ ಯಶಸ‍್ಸು ಸಾಧ್ಯ ಎಂದರು.

ಈ ಕಾರ್ಯಕ್ರಮದಲ‍್ಲಿ ಕಾಲೇಜಿನ ವಿದ‍್ಯಾರ್ಥಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಉಪಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಿಗೆ ಪ್ರಾಂಶುಪಾಲೆ ಗಂಗಾರತ್ನ ಅವರು ಪ್ರಮಾಣ ವಚನ ಬೋಧಿಸಿದರು.

ಅಕ್ಷಯ ಸಮೂಹ ಶಿಕ್ಷಣ ಸಂಸ‍್ಥೆಯ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಅಕ್ಷಯ ಪದವಿ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ ಪಕ್ಕಳ, ಶೈಕ್ಷಣಿಕ ನಿರ್ದೇಶಕ ಅಭಿಲಾಶ್ ಕ್ಷತ್ರಿಯ, ವಿದ‍್ಯಾರ್ಥಿ ಸಂಘದ ಅಧ್ಯಕ್ಷ ಹುವೈಸ್ ಮಿಸ್‍ಬಾ, ಕಾರ್ಯದರ್ಶಿ ಮಹಮ್ಮದ್ ಹಾಶಿಂ, ವಿವಿಧ ಸಂಘದ ಪದಾಧಿಕಾರಿಗಳು, ಬೋಧಕ -ಬೋಧಕೇತರ ಸಿಬ್ಬಂದಿ ಹಾಗೂ ವಿದ‍್ಯಾರ್ಥಿಗಳು ಭಾಗವಹಿಸಿದ್ದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.