Realme 16x 5G: ಇಂದಿನಿಂದ ರಿಯಲ್‌ಮಿ 16ಎಕ್ಸ್ 5ಜಿ ಫೋನ್ ಮಾರಾಟ ಶುರು

Realme 16x 5G: ಇಂದಿನಿಂದ ನೂತನ 'ರಿಯಲ್‌ಮಿ 16ಎಕ್ಸ್ 5ಜಿ' ಮಾರಾಟವು ಶುರುವಾಗಿದೆ.

Aug 13, 2026 - 18:18
Realme 16x 5G: ಇಂದಿನಿಂದ ರಿಯಲ್‌ಮಿ 16ಎಕ್ಸ್ 5ಜಿ ಫೋನ್ ಮಾರಾಟ ಶುರು

ನೂತನ ರಿಯಲ್‌ಮಿ 16ಎಕ್ಸ್ 5ಜಿ (Realme 16x 5G) ಸ್ಮಾರ್ಟ್‌ಫೋನ್ ಈಚೆಗೆ ಬಿಡುಗಡೆಗೊಂಡಿತ್ತು. ಇಂದಿನಿಂದ (ಗುರುವಾರ) ಈ ಫೋನ್ ಮಾರಾಟವು ಶುರುವಾಗಿದೆ. ರಿಯಲ್‌ಮಿ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ.

ಇದು 4GB RAM + 128GB, 6GB + 128GB ಹಾಗೂ 6GB + 256GB ಇಂಟರ್ನಲ್ ಸ್ಟೋರೇಜ್‌ನ್ನು ಪಡೆದಿದೆ. ಕ್ರಮವಾಗಿ ರೂ.25,999, 27,999 ಮತ್ತು 30,999 ಬೆಲೆಯನ್ನು ಹೊಂದಿದೆ. 

6.8-ಇಂಚಿನ HD+ ಎಲ್‌ಸಿಡಿ ಡಿಸ್‌ಪ್ಲೇ  ಹೊಂದಿದ್ದು, 144Hz ರಿಫ್ರೆಶ್ ರೇಟ್ ಹಾಗೂ 1200 nits ಬ್ರೈಟ್‌ನೆಸ್ ಅನ್ನು ಬೆಂಬಲಿಸುತ್ತದೆ. 

ಈ ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ ಪ್ರೊಸೆಸರ್‌ನ್ನು ಹೊಂದಿದೆ. ಆಂಡ್ರಾಯ್ಡ್-16 ಆಧಾರಿತ 'Realme UI 7.0' ಸಾಫ್ಟ್‌ವೇರ್‌ನ್ನು ಪಡೆದಿದೆ.  50MP AI ಪ್ರೈಮರಿ ಕ್ಯಾಮೆರಾ ಹಾಗೂ 8MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 

ಬೃಹದಾಕಾರದ 7000mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿದೆ. 45W ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಸಪೋರ್ಟ್ ಮಾಡುತ್ತದೆ. ಪಲ್ಸ್ ಲೈಟ್, ಗ್ಲೋರಿ ವೈಟ್ ಮತ್ತು ಎಂಡ್ಯೂರೆನ್ಸ್ ಬ್ರೌನ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.