Ashmita Chaliha: ಐತಿಹಾಸಿಕ ಸಾಧನೆ ಮಾಡಿದ ಅಶ್ಮಿತಾ ಚಲಿಹಾ

Ashmita Chaliha: ಭಾರತದ ಬ್ಯಾಡ್ಮಿಂಟನ್ ಯುವ ತಾರೆ ಅಶ್ಮಿತಾ ಚಲಿಹಾ ಐತಿಹಾಸಿಕ ಸಾಧನೆ ಮಾಡಿದ್ದಾರೆ.

Aug 10, 2026 - 18:01
Ashmita Chaliha: ಐತಿಹಾಸಿಕ ಸಾಧನೆ ಮಾಡಿದ ಅಶ್ಮಿತಾ ಚಲಿಹಾ

ಇಂಚಿಯಾನ್‌ (ದಕ್ಷಿಣ ಕೊರಿಯಾ): ಭಾರತದ ಬ್ಯಾಡ್ಮಿಂಟನ್ ಯುವ ತಾರೆ ಅಶ್ಮಿತಾ ಚಲಿಹಾ (Ashmita Chaliha) ಐತಿಹಾಸಿಕ ಸಾಧನೆ ಮಾಡಿದ್ದಾರೆ. 

ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 4ನೇ ಶ್ರೇಯಾಂಕಿತೆ ಚೀನಾದ ಹಾನ್ ಕಿಯಾನ್ ಕ್ಸಿ ವಿರುದ್ಧ ಗೆಲುವು ಸಾಧಿಸಿ, 'ಕೊರಿಯಾ ಮಾಸ್ಟರ್ಸ್-ಸೂಪರ್ -300' ಜಯಿಸಿದ ಮೊದಲ 'ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ' ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಗುವಾಹಟಿ ಮೂಲದ 26 ವರ್ಷದ ಅಶ್ಮಿತಾ  50ನೇ ಶ್ರೇಯಾಂಕಿತೆಯಾಗಿದ್ದು, ಮೊದಲ ಗೇಮ್ ಸೋತ ಬಳಿಕ ಕಂಬ್ಯಾಕ್ ಮಾಡಿದರು. 53 ನಿಮಿಷದಲ್ಲಿ 14-21, 21-14, 21-14 ಗೇಮ್‌ಗಳಿಂದ ಗೆದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ಹಿನಾ ಅಕೇಚಿ ಅವರನ್ನು ಸೋಲಿಸಿದ್ದರು. 

ಈ ಮೂಲಕ ಸೈನಾ ನೆಹ್ವಾಲ್, ಪಿವಿ ಸಿಂಧು, ದೇವಿಕಾ ಸಿಹಾಗ್ ಹಾಗೂ ತನ್ವಿ ಶರ್ಮಾ ನಂತರ ಮತ್ತೋರ್ವ ಆಟಗಾರ್ತಿ, ದೇಶವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.