Annapoorneshwari Sweets: ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ಸ್ವೀಟ್ಸ್ ಭರ್ಜರಿ ಸಿದ್ಧತೆ
Annapoorneshwari Sweets ಹಬ್ಬದ ಹಿನ್ನೆಲೆಯಲ್ಲಿ ಕರ್ಜಿಕಾಯಿ, ರವೆಯುಂಡೆ, ಪುರಿಯುಂಡೆ, ಬೇಸನ್ ಲಡ್ಡು, ಬೂಂದಿ ಲಡ್ಡು, ಕಜ್ಜಾಯ, ಚಂದ್ರಕಲಾ ಸೇರಿದಂತೆ ವಿವಿಧ ಬಗೆಯ ಸಾಂಪ್ರದಾಯಿಕ ಸಿಹಿ ಮತ್ತು ಖಾರದ ತಿನಿಸುಗಳನ್ನು ಗ್ರಾಹಕರಿಗಾಗಿ ಸಿದ್ಧಪಡಿಸಲಾಗುತ್ತಿದೆ.
ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ದಕ್ಷಿಣ ಬೆಂಗಳೂರಿನ ಬನಶಂಕರಿ ಮೊದಲ ಹಂತದ ಶ್ರೀನಿವಾಸನಗರದಲ್ಲಿರುವ ಪ್ರತಿಷ್ಠಿತ ಅನ್ನಪೂರ್ಣೇಶ್ವರಿ ಸ್ವೀಟ್ಸ್(Annapoorneshwari sweets) ಹಬ್ಬದ ವಿಶೇಷ ಸಿಹಿ-ತಿನಿಸುಗಳ ಸಿದ್ಧತೆಯಲ್ಲಿ ತೊಡಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಕರ್ಜಿಕಾಯಿ, ರವೆಯುಂಡೆ, ಪುರಿಯುಂಡೆ, ಬೇಸನ್ ಲಡ್ಡು, ಬೂಂದಿ ಲಡ್ಡು, ಕಜ್ಜಾಯ, ಚಂದ್ರಕಲಾ ಸೇರಿದಂತೆ ವಿವಿಧ ಬಗೆಯ ಸಾಂಪ್ರದಾಯಿಕ ಸಿಹಿ ಮತ್ತು ಖಾರದ ತಿನಿಸುಗಳನ್ನು ಗ್ರಾಹಕರಿಗಾಗಿ ಸಿದ್ಧಪಡಿಸಲಾಗುತ್ತಿದೆ.
ಮೂಲತಃ ಕುಂದಾಪುರದ ಉಪ್ಪುಂದದವರಾದ ಶ್ರೀ ಕೃಷ್ಣಮೂರ್ತಿ ಅವರು ಆರಂಭಿಸಿದ ಅನ್ನಪೂರ್ಣೇಶ್ವರಿ ಸ್ವೀಟ್ಸ್, ಇದೀಗ ಸಿಹಿ ತಿನಿಸುಗಳ ಉದ್ಯಮದಲ್ಲಿ ಮೂರು ದಶಕಗಳ ಸೇವೆಯನ್ನು ಪೂರ್ಣಗೊಳಿಸಿದೆ. ಮೂರು ದಶಕಗಳ ಪರಂಪರೆಯನ್ನು ಮುಂದುವರಿಸುತ್ತಿರುವ ಅವರ ಪುತ್ರ ನಾಗರಾಜ್. ಕೆ ಇದೀಗ ಮಳಿಗೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಈ ಬಾರಿ ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಕುರಿತು ಕೆಲವರಲ್ಲಿ ಗೊಂದಲವೂ ಕಂಡುಬಂದಿದೆ. ಒಂಟಿಕೋಪ್ಪಲು ಪಂಚಾಂಗದ ಪ್ರಕಾರ ಆಗಸ್ಟ್ 21ರಂದು ವರಮಹಾಲಕ್ಷ್ಮಿ ಪೂಜೆ ಹಾಗೂ ವ್ರತ ನಡೆಯಲಿದೆ ಎಂಬ ಉಲ್ಲೇಖವಿದ್ದರೆ, ಕೆಲವು ಪಂಚಾಂಗಗಳು ಮತ್ತು ದಿನದರ್ಶಿಕೆಗಳಲ್ಲಿ ಆಗಸ್ಟ್ 28ರಂದು ಹಬ್ಬ ಆಚರಿಸುವ ಬಗ್ಗೆ ಮಾಹಿತಿ ಇದೆ. ಈ ದಿನಾಂಕದ ಗೊಂದಲದ ಕುರಿತು ಗ್ರಾಹಕರಲ್ಲೂ ಪ್ರಶ್ನೆಗಳು ಮೂಡಿವೆ ಎಂದು ನಾಗರಾಜ್ ಅವರು ತಿಳಿಸಿದ್ದಾರೆ.

ದಿನಾಂಕದ ಗೊಂದಲ ಏನೇ ಇರಲಿ, ಬೆಂಗಳೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಕೊರತೆಯಿಲ್ಲ. ಹಬ್ಬದ ಸಡಗರಕ್ಕೆ ಸಿಹಿಯ ರುಚಿ ಮತ್ತಷ್ಟು ಮೆರುಗು ನೀಡಲಿದ್ದು, ಗ್ರಾಹಕರಿಗೆ ವಿವಿಧ ಬಗೆಯ ಸಾಂಪ್ರದಾಯಿಕ ತಿನಿಸುಗಳನ್ನು ಒದಗಿಸಲು ಅನ್ನಪೂರ್ಣೇಶ್ವರಿ ಸ್ವೀಟ್ಸ್ ಸಜ್ಜಾಗಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.