ಫ್ರೀಡಂ ಹಬ್ಬ: ಪಂಚಮಿ ಮಾರೂರು ನೇತೃತ್ವದಲ್ಲಿ ಯಕ್ಷಗಾನ & ಭರತನಾಟ್ಯ ಪ್ರದರ್ಶನ

Freedom Festival: ಫ್ರೀಡಂ ಹಬ್ಬದ ಅಂಗವಾಗಿ ಜರುಗಿದ ಫ್ರೀಡಂ ಪರೇಡ್‌ನಲ್ಲಿ ಪಂಚಮಿ ಮಾರೂರು ನೇತೃತ್ವದಲ್ಲಿ ಯಕ್ಷಗಾನ & ಭರತನಾಟ್ಯ ಪ್ರದರ್ಶನ ನೀಡಿ, ತುಳುನಾಡಿನ ಶ್ರೀಮಂತ ಕಲಾ ಪರಂಪರೆಯನ್ನು ಅನಾವರಣಗೊಳಿಸಿತು.

Aug 18, 2026 - 12:40
ಫ್ರೀಡಂ ಹಬ್ಬ: ಪಂಚಮಿ ಮಾರೂರು ನೇತೃತ್ವದಲ್ಲಿ ಯಕ್ಷಗಾನ & ಭರತನಾಟ್ಯ ಪ್ರದರ್ಶನ

ಬೆಂಗಳೂರು: ಫ್ರೀಡಂ ಹಬ್ಬದ ಅಂಗವಾಗಿ ಜರುಗಿದ ಫ್ರೀಡಂ ಪರೇಡ್‌ನಲ್ಲಿ ಪಂಚಮಿ ಮಾರೂರು ನೇತೃತ್ವದಲ್ಲಿ 'ಯಕ್ಷ ತರಂಗ' ತಂಡವು ಯಕ್ಷಗಾನ ಪ್ರದರ್ಶನ ನೀಡಿ, ತುಳುನಾಡಿನ ಶ್ರೀಮಂತ ಕಲಾ ಪರಂಪರೆಯನ್ನು ಅನಾವರಣಗೊಳಿಸಿತು.

ವಿಶೇಷವಾಗಿ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ಭವ್ಯ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶಿಸಲಾಗಿದ್ದು, ತುಳುನಾಡಿನ ಜನತೆಗೆ ಹೆಮ್ಮೆಯ ಕ್ಷಣವಾಯಿತು. 

ಇದೇ ವೇದಿಕೆಯಲ್ಲಿ ಪಂಚಮಿ ಮಾರೂರು ಅವರ ಮತ್ತೊಂದು 'ಶ್ರೀಪರಂಪರಾ ಹೆಜ್ಜೆಗಜ್ಜೆ ವೈ.ಪಿ ಆರ್ಟ್ ಫೌಂಡೇಶನ್' ತಂಡವು ತುಳು ಹಾಡಿಗೆ ಮನಮೋಹಕ ಭರತನಾಟ್ಯ ಪ್ರದರ್ಶನ ನೀಡಿ, ಕಾರ್ಯಕ್ರಮದ ಸಾಂಸ್ಕೃತಿಕ ವೈಭವವನ್ನು ಮತ್ತಷ್ಟು ಹೆಚ್ಚಿಸಿತು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸೇರಿ ಹಲವು ಗಣ್ಯರು & ಅಪಾರ ಸಂಖ್ಯೆಯ ಪ್ರೇಕ್ಷಕರ ಸಮ್ಮುಖದಲ್ಲಿ ಈ ಕಲಾ ಪ್ರದರ್ಶನಗಳು ನಡೆದವು. 

ಈ ಪ್ರತಿಷ್ಠಿತ ಅವಕಾಶವನ್ನು ಕಲಾವಿದರಿಗೆ ಒದಗಿಸಿ, ತುಳುನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ರಾಜ್ಯಮಟ್ಟದ ಪರಿಚಯಿಸಲು ಸಹಕರಿಸಿದ ಬೆಂಗಳೂರಿನ 'ಜೈ ತುಳುನಾಡು ತಂಡ ಹಾಗೂ ನಿಧೀಶ್ ಶೆಟ್ಟಿ, ಯತೀಶ್ ಎಂ (ಡಿಜಿಟಲ್ ಪಿಆರ್‌ಓ)  ಅವರಿಗೆ ನೃತ್ಯ ತಂಡದಿಂದ ಧನ್ಯವಾದಗಳನ್ನು ಅರ್ಪಿಸಲಾಗಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.