Moto G Max: ಮೋಟೋ ಜಿ ಎಕ್ಸ್ ಫೋನ್ ಬಿಡುಗಡೆ.. ಬೆಲೆ ಎಷ್ಟು?

Moto G Max: ಬಹುನಿರೀಕ್ಷಿತ ಮೋಟೋ ಜಿ ಎಕ್ಸ್ ಸ್ಮಾರ್ಟ್‌ಫೋನ್ ಈಚೆಗೆ ಅದ್ದೂರಿಯಾಗಿ ಬಿಡುಗಡೆಗೊಂಡಿದೆ.

Aug 17, 2026 - 18:02
Moto G Max: ಮೋಟೋ ಜಿ ಎಕ್ಸ್ ಫೋನ್ ಬಿಡುಗಡೆ.. ಬೆಲೆ ಎಷ್ಟು?

ಬಹುನಿರೀಕ್ಷಿತ ಮೋಟೋ ಜಿ ಎಕ್ಸ್ (Moto G Max) ಸ್ಮಾರ್ಟ್‌ಫೋನ್ ಈಚೆಗೆ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಆ.20 ರಂದು ಮಾರಾಟಕ್ಕೆ ಬರಲಿದ್ದು, ಅಂದು ಗ್ರಾಹಕರು ಖರೀದಿಸಬಹುದು. 

ಇದು 6GB RAM + 128GB ಇಂಟರ್ನಲ್ ಸ್ಟೋರೇಜ್‌ನ್ನು ಪಡೆದಿದೆ. ರೂ.27,999 ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. 7000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. 33W ಫಾಸ್ಟ್ ಚಾರ್ಜಿಂಗ್ ಆಯ್ಕೆಯನ್ನು ಸಪೋರ್ಟ್ ಮಾಡುತ್ತದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6ಎಸ್ Gen 4 ಪ್ರೊಸೆಸರ್‌ನ್ನು ಹೊಂದಿದೆ. 

50MP ಸೋನಿ ಪ್ರೈಮರಿ ಕ್ಯಾಮೆರಾ ಹಾಗೂ 32MP ಸೆಲ್ಫಿ ಕ್ಯಾಮೆರಾವನ್ನು ಪಡೆದಿದ್ದು, ಉತ್ತಮವಾದ ಫೋಟೋಗಳನ್ನು ಸೆರೆ ಹಿಡಿಯಬಹುದು. ಡಾಲ್ಬಿ ಅಟ್ಮಾಸ್ ಸ್ಟೀರಿಯೋ ಸ್ಪೀಕರ್‌ಗಳನ್ನು ತನ್ನದಾಗಿಸಿಕೊಂಡಿದೆ. 

6.72-ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. 120Hz ರಿಫ್ರೆಶ್ ರೇಟ್ & ಗೊರಿಲ್ಲಾ ಗ್ಲಾಸ್ 7i ಪ್ರೊಟೆಕ್ಷನ್ ಸಹ ಇದೆ. ಪ್ಯಾಂಟೋನ್ ಅಲಾಸ್ಕನ್ ಬ್ಲೂ, ಪ್ಯಾಂಟೋನ್ ಮಲಗಾ ಮತ್ತು ಪ್ಯಾಂಟೋನ್ ಸ್ಟಾರ್‌ಗೇಜರ್ ಎಂಬ ಬಣ್ಣಗಳೊಂದಿಗೂ ಸಿಗುತ್ತದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.