Oppo Reno 16: ಹೊಸ 'ಒಪ್ಪೋ ರೆನೋ 16' ಸೀರೀಸ್ ಫೋನ್‌ಗಳು ಬಿಡುಗಡೆ.. ಬೆಲೆ ಎಷ್ಟು?

OPPO Reno 16 Series Launched In India: ಇಂದು 'ಒಪ್ಪೋ ರೆನೋ 16 ಸೀರೀಸ್' ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೊಂಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Jul 2, 2026 - 18:00
Jul 2, 2026 - 18:03
Oppo Reno 16: ಹೊಸ 'ಒಪ್ಪೋ ರೆನೋ 16' ಸೀರೀಸ್ ಫೋನ್‌ಗಳು ಬಿಡುಗಡೆ.. ಬೆಲೆ ಎಷ್ಟು?

ಬೆಂಗಳೂರು: ನೂತನ ಸ್ಮಾರ್ಟ್‌ಫೋನ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಇಂದು (ಗುರುವಾರ) ಒಪ್ಪೋ ರೆನೋ 16 ಸೀರೀಸ್ (OPPO Reno 16 Series) ಫೋನ್‌ಗಳು ಬಿಡುಗಡೆಗೊಂಡಿವೆ. ಇವು ಸ್ವಲ್ಪ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿವೆ. ಹತ್ತಾರು ಹೊಸತನಗಳಿಗೂ ಸಾಕ್ಷಿಯಾಗಿವೆ. ಜುಲೈ 9 ರಿಂದ ಮಾರಾಟವು ಶುರುವಾಗಲಿದೆ.

ಒಪ್ಪೋ ರೆನೋ 16 (Oppo Reno 16):
 
ಇದು 8GB RAM + 256GB ಹಾಗೂ 12GB RAM + 256GB ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಕ್ರಮವಾಗಿ ರೂ.61,999 ರಿಂದ ರೂ.67,999 ಬೆಲೆಯನ್ನು ಪಡೆದಿದೆ.

6.32-ಇಂಚಿನ AMOLED ಡಿಸ್‌ಪ್ಲೇಯನ್ನು ಒಳಗೊಂಡಿದೆ. 6,700mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 80ಡಬ್ಲ್ಯೂ ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸ್ಟಾರ್ರಿ ವೈಟ್, ಸ್ಟೆಲ್ಲರ್ ಪರ್ಪಲ್ ಮತ್ತು ಟ್ವಿಲೈಟ್ ವಯೋಲೆಟ್ ಎಂಬ ಬಣ್ಣಗಳೊಂದಿಗೂ ಗ್ರಾಹಕರ ಖರೀದಿಗೆ ದೊರೆಯುತ್ತದೆ.

ಒಪ್ಪೋ ರೆನೋ 16ಸಿ (Oppo Reno 16c)

ಈ ಸ್ಮಾರ್ಟ್‌ಫೋನ್‌ 8GB RAM + 128GB, 8GB RAM + 256GB, 12GB RAM + 256GB ಇಂಟರ್ನಲ್ ಸ್ಟೋರೇಜ್‌ನ್ನು ಹೊಂದಿದೆ. ಕ್ರಮವಾಗಿ ರೂ.46,999, ರೂ.49,999 ಮತ್ತು 55,999 ದರವನ್ನು ಒಳಗೊಂಡಿದೆ.

6.57-ಇಂಚಿನ Full HD+ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಬೃಹದಾಕಾರದ 7,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದೆ. ಸ್ಟಾರ್ರಿ ವೈಟ್, ಸ್ಟೆಲ್ಲಾರ್ ಪರ್ಪಲ್ ಹಾಗೂ ಟ್ವಿಲೈಟ್ ವಯೋಲೆಟ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.