ಪುತ್ತೂರಿನ ಅಂಬಿಕಾ ಅಕಾಡೆಮಿ: ನೀಟ್ ರಿಪೀಟರ್ಸ್ ಬ್ಯಾಚ್ಗೆ ದಾಖಲಾತಿ ಶುರು
Ambika Academy: Admission Start For NEET Repeaters Batch: 'ಅಂಬಿಕಾ ಅಕಾಡೆಮಿ' ಭರ್ಜರಿ ಸಿಹಿಸುದ್ದಿ ನೀಡಿದೆ. 2026-27ನೇ ಸಾಲಿನ ನೀಟ್ ರಿಪೀಟರ್ಸ್ ಬ್ಯಾಚ್ಗೆ ದಾಖಲಾತಿ ಪಾರಂಭಿಸಿದೆ. ಆಸಕ್ತರು 94828280/9483548/974148160 ಸಂಖ್ಯೆಗೆ ಕರೆ ಮಾಡಬಹುದು.
ಪುತ‍್ತೂರು: ವೈದ್ಯರಾಗಬೇಕೆಂಬುದು ಅನೇಕ ವಿದ್ಯಾರ್ಥಿಗಳ ಕನಸು. ಬಹುಮಂದಿ ಹೆತ್ತವರೂ ತಮ್ಮ ಮಕ್ಕಳು ವೈದ್ಯಕೀಯ ಶಿಕ್ಷಣವನ್ನು ಹೊಂದಿ ಸಮಾಜದಲ್ಲಿ ಪ್ರತಿಷ್ಠಿತ ವೈದ್ಯರೆನಿಸಬೇಕೆಂಬ ಕನಸನ್ನು ಹೊಂದಿರುತ್ತಾರೆ. ಈ ನೆಲೆಯಲ್ಲಿ ಪಿಯ ಹಂತದ ಶಿಕ್ಷಣದ ಜತೆಜತೆಗೆ ನೀಟ್ ಪರೀಕ್ಷಾ ತರಬೇತಿಗೂ ಹಲವಾರು ಮಂದಿ ವಿದ್ಯಾರ್ಥಿಗಳು ದಾಖಲಾತಿ ಮಾಡಿಸಿಕೊಳ್ಳುವುದಿದೆ. ಒಟ್ಟಿನಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸುವಲ್ಲಿ ಅವರು ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ಗಳಿಸುವ ಅಂಕವೇ ಪ್ರಧಾನ.
ಈತನ್ಮಧ್ಯೆ, ನೀಟ್ ಪರೀಕ್ಷೆಯಲ್ಲಿ ಅತ್ತುತ್ತಮ ಅಂಕ ಗಳಿಸುವಲ್ಲಿ ಸಫಲರಾಗದ ಹಲವು ವಿದ್ಯಾರ್ಥಿಗಳು ನೀಟ್ ರಿಪೀಟರ್ಸ್ ಬ್ಯಾಚ್ಗೆ ದಾಖಲಾತಿ ಹೊಂದಿ ಮಂದಿನ ಒಂದು ವರ್ಷ ಪೂರ್ತಿ ನೀಟ್ ತರಬೇತಿಯನ್ನಷ್ಟೇ ಪಡೆದು ಮತ್ತೊಮ್ಮೆ ಪರೀಕ್ಷೆ ಎದುರಿಸಿ ತಮ್ಮ ವೈದ್ಯಕೀಯ ಶಿಕ್ಷಣದ ಕನಸನ್ನು ನನಸಾಗಿಸಿಕೊಳ್ಳುವುದಿದೆ. ಅತ್ಯುತ್ತಮ ತರಬೇತಿ ದೊರಕಿ, ಸಾಕಷ್ಟು ಪ್ರಯತ್ನ ನಡೆಸಿದರೆ ರಿಪೀಟರ್ಸ್ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣವನ್ನು ಕೈಗೆಟಕುವಂತೆ ಮಾಡುವುದು ಕಷ್ಟಸಾಧ್ಯವೇನಲ್ಲ. ಹೀಗೆ ದ್ವಿತೀಯ ಪಿಯ ಪೂರೈಸಿ ತಕ್ಷಣ ನೀಟ್ ಪರೀಕ್ಷೆಯನ್ನು ಎದುರಿಸಿ ಉತ್ತಮ ಅಂಕ ಗಳಿಸುವಲ್ಲಿ ಎಡವಿದ ವಿದ್ಯಾರ್ಥಿಗಳಿಗಾಗಿಯೇ ದಕ್ಷಿಣ ಕನ್ನಡದ ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮನ್ನಡೆಸುತ್ತಿರುವ ಅಂಬಿಕಾ ನೀಟ್ ಅಕಾಡೆಮಿಯ ಕಳೆದ ಮೂರು ವರ್ಷಗಳಿಂದ ‘ನೀಟ್ ರಿಪೀಟರ್ಸ್ ಬ್ಯಾಚ್’ ತರಗತಿಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.


