ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ
ದಿನ ಭವಿಷ್ಯ
ಜ್ಯೋತಿರ್ಮಯ.
ಅದೃಷ್ಟ ಸಂಖ್ಯೆ 11
1.ಮೇಷ:
ಹೆಚ್ಚು ಪಾರದರ್ಶಕತೆಗೆ ಹೆಚ್ಚು ಮರ್ಯಾದೆ. ಉದ್ಯೋಗಸ್ಥರಿಗೆ ಪದೋನ್ನತಿ ಅಥವಾ ವೇತನ ಶ್ರೇಣಿ ಪರಿಷ್ಕರಣೆ. ಉದ್ಯಮಿಗಳಿಗೆ ಯಶಸ್ಸಿನ ಅನುಭವ. ಹಿರಿಯರ ಯೋಗಕ್ಷೇಮವನ್ನು ವಿಚಾರಿಸುತ್ತಿರಿ.ಮನೆಯಲ್ಲಿ ಪ್ರೀತಿ, ಸೌಹಾರ್ದದ ವಾತಾವರಣ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
2.ವೃಷಭ:
ಅವಕಾಶ ತಪ್ಪಿ ಹೋಗುವ ಭಯ ಬೇಡ. ಕೆಲಸದಲ್ಲಿ ಪರಿಪೂರ್ಣತೆಯಿಂದ ಜನರ ಮೆಚ್ಚುಗೆ ಪ್ರಾಪ್ತಿ. ಲೇವಾ ದೇವಿ ವ್ಯವಹಾರಸ್ಥರಿಗೆ ಹಿನ್ನಡೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ. ದಿನವಿಡೀ ಶುಭಫಲಗಳನ್ನೇ ಅನಭವಿಸುವಿರಿ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಆದಿತ್ಯ ಹೃದಯ ಓದಿ.
3.ಮಿಥುನ:
ನಿರೀಕ್ಷಿತ ಸಹಾಯ ಕೊನೆಗೂ ಕೈಸೇರಿ ಸಂತೃಪ್ತಿ. ಹೊಸ ಬಗೆಯ ಬದುಕಿಗೆ ಹೊಂದಿಕೊಳ್ಳುವ ಪ್ರಯತ್ನ. ಹೂಡಿಕೆ ವ್ಯವಹಾರದಲ್ಲಿ ಸಮಾಧಾನಕರ ಪ್ರಗತಿ. ದೇವತಾ ಕಾರ್ಯಕ್ಕೆ ಧನವಿನಿಯೋಗ. ಹಿರಿಯರಿಗೆ ,ಗೃಹಿಣಿಯರಿಗೆ ನೆಮ್ಮದಿಯ ಭಾವನೆ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ನವಗ್ರಹ ಕವಚ ಓದಿ.
4.ಕರ್ಕಾಟಕ:
ಮಂದಗತಿಯ, ಆದರೆ ಸ್ಥಿರವಾದ ಪ್ರಗತಿಯನ್ನು ಕಾಣುವಿರಿ. ಸಣ್ಣ ಕೈಗಾರಿಕೆಗಳ ಸಮಸ್ಯೆ ಪರಿಹಾರ. ಬಂಧುವರ್ಗದ ಸಹಾಯ ಲಭ್ಯ. ಅಲ್ಪಕಾಲದ ಹೂಡಿಕೆಯನ್ನು ಮಾಡುವ ಯೋಚನೆಯನ್ನು ಕೈಬಿಡಿ. ಮಕ್ಕಳ ಸ್ಮರಣ ಶಕ್ತಿ ವೃದ್ಧಿಗೆ ವಿಶೇಷ ಪ್ರಯತ್ನ. ಗಣೇಶ ದ್ವಾದಶನಾಮ ಸ್ತೋತ್ರ, ನರಸಿಂಹ ಕವಚ, ಗುರುಸ್ತೋತ್ರ ಓದಿ.
5.ಸಿಂಹ:
ಇದುವರೆಗಿನ ಪ್ರಗತಿಯನ್ನು ಅವಲೋಕಿಸಿ ಮುನ್ನಡೆಯಿರಿ. ಹೊಸ ಪ್ರಸ್ತಾವಗಳನ್ನು ಪರೀಕ್ಷಿಸಿ ನಿರ್ಧಾರಕ್ಕೆಬನ್ನಿ. ಉದ್ಯೋಗಸ್ಥರಿಗೆ ಯಶಸ್ಸು, ಪ್ರಶಂಸೆ ಸಂಭವ. ದೂರದಿಂದ ಶುಭವಾರ್ತೆ ಬಂದು ಹರ್ಷ. ಹಿರಿಯರ, ಗೃಹಿಣಿಯರ ಆರೋಗ್ಯದತ್ತ ಗಮನವಿರಲಿ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
6.ಕನ್ಯಾ:
ಉದ್ಯೋಗ ಕ್ಷೇತ್ರದಲ್ಲಿ ತಾಳ್ಮೆ, ಜಾಣತನದಿಂದ ಯಶಸ್ಸು. ಆಶ್ರಿತರ ಯೋಗಕ್ಷೇಮದ ಕಡೆಗೆ ಹೆಚ್ಚು ಗಮನ ಕೊಡಿ. ಹತ್ತಿರದ ದೇವತಾ ಸನ್ನಿಧಿಗೆ ಸಂದರ್ಶನ. ಹಿರಿಯರ , ಗೃಹಿಣಿಯರ ಆರೋಗ್ಯ ಉತ್ತಮ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೂರಕವಾದ ವಾತಾವರಣ. ಗಣಪತಿ ಅಥರ್ವಶೀರ್ಷ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
7.ತುಲಾ:
ಜಪ,ಧ್ಯಾನಗಳಿಂದ ಮನಸ್ಸಿನ ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಯತ್ನ. ಉದ್ಯೋಗಸ್ಥರಿಗೆ ದಿನದ ಕೊನೆಯಲ್ಲಿ ಶುಭವಾರ್ತೆ. ಅನ್ಯರ ಹಣಕಾಸು ವ್ಯವಹಾರ ನಿರ್ವಹಣೆಯಲ್ಲಿ ಎಚ್ವರ. ದಾನ-ಧರ್ಮ ಮಾಡುವಾಗ ವಿವೇಕಕ್ಕೆ ಅಗ್ರ ಪ್ರಾಶಸ್ತ್ಯನೀಡತಕ್ಕದ್ದು. ದಿನವಿಡೀ ಮಿಶ್ರಫಲಗಳನ್ನು ಅನುಭವಿಸುವಿರಿ. ಗಣೇಶ ಕವಚ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
8.ವೃಶ್ಚಿಕ:
ದೇವತಾರ್ಚನೆಯತ್ತ ಹೆಚ್ಚಾದ ಒಲವು. ಉದ್ಯೋಗ ರಂಗದಲ್ಲಿ ತೃಪ್ತಿಕರ ಸಾಧನೆ. ವ್ಯವಹಾರಸ್ಥರಿಗೆ ಹೆಚ್ಚಿನ ಯಶಶ್ಸು. ಕಿರಿಯರ ವಿವಾಹ ಮಾತುಕತೆ ಮುಂದುವರಿಕೆ. ಕೃಷ್ಯುತ್ಪನ್ನಗಳಿಂದ ಸಮಾಧಾನಕರ ಲಾಭ. ಗಣೇಶ ಪಂಚರತ್ನ, ವೇದಸಾರ ಶಿವಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
9.ಧನು:
ಕಾರ್ಯನಿಷ್ಠೆ, ಸಹನೆಗೆ ಮೇಲಧಿಕಾರಿಗಳ ಮೆಚ್ಚುಗೆ. ವ್ಯವಹಾರಸ್ಥರಿಗೆ ಹೊಸ ಸವಾಲುಗಳ ಅನುಭವ. ಕೃಷ್ಯುತ್ಪನ್ನ ಮಾರಾಟಗಾರರಿಗೆ ಲಾಭ ಮಧ್ಯಮ. ಕೋಳಿಸಾಕಣೆ, ಮತ್ಯೋದ್ಯಮಿಗಳಿಗೆ ಅನುಕೂಲದ ವಾತಾವರಣ. ಮಕ್ಕಳ ಯಶಸ್ಸಿನಿಂದ ಹಿರಿಯರಿಗೆ ಸಂತಸ. ಗಣೇಶ ಕವಚ, ದಕ್ಚಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
10.ಮಕರ:
ಯಶಸ್ವೀ ಕಾರ್ಯನಿರ್ವಹಣೆಯಿಂದ ಪರಿಸರದವರಿಗೆಲ್ಲ ಮೆಚ್ಚುಗೆ. ಮನೆಯಲ್ಲಿ ಮಂಗಲ ಕಾರ್ಯದ ಸಮಯ ಸನ್ನಿಹಿತ. ದೇವತಾ ಪ್ರಾರ್ಥನೆಯಿಂದ ಕಾರ್ಯಗಳು ಸುಗಮ. ಅರ್ಹರಿಗೆ ನೆರವಾಗುವ ಯೋಗದಿಂದ ಸಮಾಧಾನ. ಹಿರಿಯರಗೆ ತೀರ್ಥಯಾತ್ರೆ ಯೋಗ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.
11.ಕುಂಭ:
ಸೇವಾ ಕಾರ್ಯಗಳನ್ನು ಹೆಚ್ಚಿಸುವ ಕುರಿತು ಚಿಂತನೆ. ಉದ್ಯೋಗರಂಗದಲ್ಲಿ ನಿರೀಕ್ಷೆಗೆ ಮೀರಿದ ಯಶಸ್ಸು ಹಾಗೂ ಗೌರವ ಪ್ರಾಪ್ತಿ.ವ್ಯವಹಾರದಲ್ಲಿ ಹೊಂದಾಣಿಕೆಯಿಂದ ಲಾಭ. ಸಂಗಾತಿಯ ಆರೋಗ್ಯದತ್ತ ಗಮನವಿರಲಿ. ಮನೆಮಂದಿಯೆಲ್ಲರಿಂದ ಉತ್ತಮ ಸಹಕಾರ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಶನಿಸ್ತೋತ್ರ ಓದಿ.
12. ಮೀನ:
ಸ್ಥಿರವಾದ ಆರೋಗ್ಯದ ಅನುಭವ. ಮಾತೃಸಮಾನರ. ಹಿತ ನುಡಿಯಿಂದ ಮನಸ್ಸಿಗೆ ನೆಮ್ಮದಿ. ಬಂಧು ಬಾಂಧವರ ಭೇಟಿ ಸಂಭವ. ಉದ್ಯೋಗ, ವ್ಯವಹಾರದಲ್ಲಿ ಸ್ಥಿರವಾದ ಯಶಸ್ಸಿನ ಅನುಭವ. ವಾಹನ, ಆಸ್ತಿ ಖರೀದಿ, ಮಾರಾಟ ವ್ಯವಹಾರಸ್ಥರಿಗೆ ಅನುಕೂಲ ವಾತಾವರಣ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.
.