ಪುತ್ತೂರು: 49 ದಿನಗಳ ಮಗುವಿನ ಚಿಕಿತ್ಸೆಗೆ ಆರ್ಥಿಕ ಸಹಾಯಕ್ಕೆ ಮನವಿ
Puttur: ನರಿಮೊಗರು ಗ್ರಾಮದ ಮುಕ್ವೆ ನಿವಾಸಿ ಜಗದೀಶ ವೈ ಹಾಗೂ ವಿನುತಾ ದಂಪತಿಯ 49 ದಿನಗಳ ಮಗು ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ತುರ್ತು ಚಿಕಿತ್ಸೆಗಾಗಿ ಆರ್ಥಿಕ ನೆರವನ್ನು ಕೋರಲಾಗಿದೆ.
ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ನಿವಾಸಿ ಜಗದೀಶ ವೈ ಹಾಗೂ ವಿನುತಾ ದಂಪತಿಯ 49 ದಿನಗಳ ಮಗು ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ತುರ್ತು ಚಿಕಿತ್ಸೆಗಾಗಿ ಆರ್ಥಿಕ ನೆರವನ್ನು ಕೋರಲಾಗಿದೆ.
ವೈದ್ಯಕೀಯ ಪರೀಕ್ಷೆಯಂತೆ ಮಗು ಇನ್‌ಬಾರ್ನ್ ಎರರ್ ಆಫ್ ಮೆಟಬಾಲಿಸಮ್ - ಹೈಪರ್‌ಅಮೋನೇಮಿಯಾ, ಮೆಟಬಾಲಿಕ್ ಆಸಿಡೋಸಿಸ್ ಹಾಗೂ ಬಲಬದಿಯ ಡಯಾಫ್ರಾಮ್ ಎವೆಂಟ್ರೇಶನ್ ಎಂಬ ಕಠಿಣ ಆರೋಗ್ಯ ಸಮಸ್ಯೆಗೆ ಒಳಗಾಗಿದೆ. ಮಗುವಿಗೆ ವಿಶೇಷವಾದ ಚಿಕಿತ್ಸೆ, ನಿಯಂತ್ರಿತ ಆಹಾರ ನೀಡಿಕೆ ಮತ್ತು ವಿವರವಾದ ಜೆನೆಟಿಕ್ ವಿಶ್ಲೇಷಣೆಯ ಅಗತ್ಯವಿದೆ.

ಸದ್ಯ ಮಗುವನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗಾಗಲೇ ಚಿಕಿತ್ಸೆಗೆ ರೂ.2 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದ್ದು, ಮುಂಬರುವ ಚಿಕಿತ್ಸೆಗೆ ಸುಮಾರು ರೂ.8 ರಿಂದ ರೂ.10 ಲಕ್ಷ ವೆಚ್ಚವಾಗಬಹುದೆಂದು ವೈದ್ಯರು ತಿಳಿಸಿದ್ದಾರೆ.
ಆರ್ಥಿಕವಾಗಿ ದುರ್ಬಲವಾಗಿರುವ ಮಗುವಿನ ಪೋಷಕರಿಗೆ, ಈ ಬೃಹತ್ ಮೊತ್ತವನ್ನು ಭರಿಸುವುದು ಅತ್ಯಂತ ಕಷ್ಟಕರವಾಗಿದ್ದು, ಮಗುವಿನ ಜೀವ ಉಳಿಸಲು ದಾನಿಗಳು ಹಾಗೂ ಸಾರ್ವಜನಿಕರಲ್ಲಿ ಆರ್ಥಿಕ ಸಹಾಯಕ್ಕಾಗಿ ವಿನಂತಿಸಿಕೊಂಡಿದ್ದಾರೆ.
ಆರ್ಥಿಕ ಸಹಾಯ ನೀಡಲು ವಿವರಗಳು:
* ಹೆಸರು:*ಜಗದೀಶ ವೈ.
* ಬ್ಯಾಂಕ್:* ಕೆನರಾ ಬ್ಯಾಂಕ್ (Canara Bank)
* ಶಾಖೆ: ಪುತ್ತೂರು
* ಖಾತೆ ಸಂಖ್ಯೆ (A/c No): 110323648519
* IFSC ಕೋಡ್: CNRB0010134
* UPI ID: 9632584267@cnrb
* ಮೊಬೈಲ್ ಸಂಖ್ಯೆ 96325 84267
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.