Today Gold Price: ಇಂದು ಆಭರಣದ ಬೆಲೆ ಇಳಿಕೆ
Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಮಂಗಳವಾರ) ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ಬೆಲೆಗಳು ಇಳಿಕೆಯಾಗಿದ್ದು, ಗ್ರಾಹಕರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.
ಬೆಂಗಳೂರು: ಚಿನಿವಾರ ಪೇಟೆಯಲ್ಲಿ ಇಂದು (ಮಂಗಳವಾರ) ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನಂ ಬೆಲೆಗಳು ಇಳಿಕೆಯಾಗಿದ್ದು, ಗ್ರಾಹಕರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.
ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,720 ಕಡಿಮೆಯಾಗಿ ರೂ.1,44,170 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.1,550 ಇಳಿಕೆಯಾಗಿ ರೂ.1,32,150ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,260 ಕಡಿಮೆಯಾಗಿ ರೂ.1,08,130 ಆಗಿದೆ. 10 ಗ್ರಾಂ ಪ್ಲಾಟಿನಂ ಬೆಲೆ ರೂ.720 ಇಳಿಕೆಯಾಗಿ ರೂ.49,320ಕ್ಕೆ ಬಂದಿದೆ. 1 ಕೆಜಿ ಬೆಳ್ಳಿ ರೂ.5,000 ಕಡಿಮೆಯಾಗಿ ರೂ.2,35,000 ದರದಲ್ಲಿ ಮಾರಾಟವಾಗುತ್ತಿದೆ
ನವದೆಹಲಿಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.1,720 ಇಳಿಕೆಯಾಗಿ ರೂ.1,44,320 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,550 ಕಡಿಮೆಯಾಗಿ ರೂ.1,32,300ಕ್ಕೆ ಬಂದಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.1,260 ಇಳಿಕೆಯಾಗಿ ರೂ.1,08,280 ಆಗಿದೆ. 10 ಗ್ರಾಂ ಪ್ಲಾಟಿನಂ ದರ ರೂ.720 ಕಡಿಮೆಯಾಗಿ ರೂ.49,320ಕ್ಕೆ ಬಂದಿದೆ. 1 ಕೆಜಿ ಬೆಳ್ಳಿ ರೂ.5,000 ಇಳಿಕೆಯಾಗಿ ರೂ.2,35,000 ದರದಲ್ಲಿ ಮಾರಲಾಗುತ್ತಿದೆ.
ಮುಂಬೈನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,690 ಕಡಿಮೆಯಾಗಿ ರೂ.1,44,170 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.1,550 ಇಳಿಕೆಯಾಗಿ ರೂ.1,32,150ಕ್ಕೆ ತಲುಪಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.1,260 ಕಡಿಮೆಯಾಗಿ ರೂ.1,08,130 ಆಗಿದೆ. 10 ಗ್ರಾಂ ಪ್ಲಾಟಿನಂ ಬೆಲೆ ರೂ.720 ಇಳಿಕೆಯಾಗಿ ರೂ.49,320ಕ್ಕೆ ಬಂದಿದೆ. 1 ಕೆಜಿ ಬೆಳ್ಳಿ ರೂ.5,000 ಕಡಿಮೆಯಾಗಿ ರೂ.2,35,000 ದರದಲ್ಲಿ ಮಾರಾಟವಾಗುತ್ತಿದೆ
ಷೇರುಪೇಟೆ ವಹಿವಾಟು ಚೇತರಿಕೆ
ಭಾರತದ ಷೇರುಪೇಟೆ ವಹಿವಾಟು ಇಂದು ಸಕಾರಾತ್ಮಕವಾಗಿದೆ. ಸೆನ್ಸೆಕ್ಸ್ 24.25 ಅಂಕಗಳು ಅಥವಾ ಶೇಕಡ 0.03% ಏರಿಕೆಯಾಗಿ 76,860.03 ಅಂಕಗಳಿಗೆ ತಲುಪಿದೆ. ನಿಫ್ಟಿ 2.10 ಅಂಕಗಳು ಅಥವಾ ಶೇಕಡ 0.01% ಹೆಚ್ಚಳವಾಗಿ 23,998.05 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಇನ್ಫೋಸಿಸ್, ಟಿಸಿಎಸ್, ಟೆಕ್ ಮಹೀಂದ್ರಾ, ಹೆಚ್‌ಸಿಎಲ್ ಟೆಕ್ ಮತ್ತು ಸಿಪ್ಲಾ ಷೇರುಗಳು ಲಾಭದಲ್ಲಿವೆ. ಆದಾಗ್ಯೂ ಭಾರತ್ ಎಲೆಕ್ಟ್ರಾನಿಕ್ಸ್, ಕೋಲ್ ಇಂಡಿಯಾ, ಪವರ್ ಗ್ರಿಡ್ ಕಾರ್ಪ್, ಎನ್‌ಟಿಪಿಸಿ ಹಾಗೂ ರಿಲಯನ್ಸ್ ಷೇರುಗಳು ನಷ್ಟದಲ್ಲಿವೆ.