ನವೋದ್ಯಮ ಇಂದಿನ ಯುಗದ ಯಶಸ್ಸಿನ ಅಡಿಗಲ್ಲು: ವಂ. ಡಾ.ಆ್ಯಂಟನಿ ಪ್ರಕಾಶ್‌ ಮೊಂತೇರೊ ಹೇಳಿಕೆ

Puttur: ಸಂತ ಸೇಂಟ್ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗ ಹಾಗೂ ಟೆಕ್‌ಫಿನಿಟಿ ಟೆಕ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ಧ 'ಪ್ರಾಜೆಕ್ಟ್‌ವರ್ಸ್‌2026' ಕಾರ್ಯಕ್ರಮವನ್ನು ಪ್ರಾಂಶುಪಾಲ ವಂ. ಡಾ.ಆ್ಯಂಟನಿ ಪ್ರಕಾಶ್‌ ಮೊಂತೇರೊ ಉದ್ಘಾಟಿಸಿದರು.

Jul 23, 2026 - 12:33
ನವೋದ್ಯಮ ಇಂದಿನ ಯುಗದ ಯಶಸ್ಸಿನ ಅಡಿಗಲ್ಲು: ವಂ. ಡಾ.ಆ್ಯಂಟನಿ ಪ್ರಕಾಶ್‌ ಮೊಂತೇರೊ ಹೇಳಿಕೆ

ಪುತ್ತೂರು: ಆವಿಷ್ಕಾರ ಹಾಗೂ ನವೋದ್ಯಮ ಇಂದಿನ ಯುಗದ ಯಶಸ್ಸಿನ ಪ್ರಮುಖ ಅಡಿಗಲ್ಲುಗಳು ಎಂದು ಪ್ರಾಂಶುಪಾಲ ವಂ. ಡಾ.ಆ್ಯಂಟನಿ ಪ್ರಕಾಶ್‌ ಮೊಂತೇರೊ ಹೇಳಿದರು. 

ಇಲ್ಲಿನ ಸಂತ ಸೇಂಟ್ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗ ಹಾಗೂ ಟೆಕ್‌ಫಿನಿಟಿ ಟೆಕ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ಧ 'ಪ್ರಾಜೆಕ್ಟ್‌ವರ್ಸ್‌2026' ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಪ್ರತಿದಿನ ತಂತ್ರಜ್ಞಾನವು ಹೊಸ ಆಯಾಮಗಳನ್ನು ತೆರೆದಿಡುತ್ತಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅದನ್ನು ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಜಗತ್ತು ವೇಗವಾಗಿ ಮುನ್ನಡೆಯುತ್ತಿದೆ. ಈ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಮಾತ್ರವಲ್ಲ, ನವೀನ ಆವಿಷ್ಕಾರದ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದರು 

ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ನಮ್ಮ ಬೇರುಗಳು, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಎಂದಿಗೂ ಮರೆಯಬಾರದು. ಜ್ಞಾನವು ಕೌಶಲ್ಯವನ್ನು ನೀಡುತ್ತದೆ. ಆದರೆ ಮೌಲ್ಯವು ವ್ಯಕ್ತಿತ್ವವನ್ನು ರೂಪಿಸುತ್ತದೆ. ಉತ್ತಮ ತಂತ್ರಜ್ಞಾನ ತಜ್ಞರಾಗುವುದರೊಂದಿಗೆ, ಒಳ್ಳೆಯ ಮನುಷ್ಯರಾಗುವುದು ಅಷ್ಟೇ ಮುಖ್ಯ ಎಂದರು.

ಪ್ರಥಮ ಎಂಸಿಎ ವಿದ್ಯಾರ್ಥಿನಿ ರಕ್ಷಿತಾ ಕೆ.ಆರ್‌ ಮತ್ತು ಬಳಗದಿಂದ ಪ್ರಾರ್ಥಿಸಲಾಗಿತು. ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ಡೀನ್‌ ಡಾ.ವಿನಯಚಂದ್ರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟೆಕ್‌ಫಿನಿಟಿ ಟೆಕ್ ಕ್ಲಬ್‌ನ ನಿರ್ದೇಶಕಿ ಅಕ್ಷತಾ ಬಿ ವಂದನಾರ್ಪಣೆ ಮಾಡಿದರು. ಸಹಾಯಕ ಪ್ರಾಧ್ಯಾಪಕಿ ನೀಲಂ ಕುಟ್ಟಪ್ಪ ಕಾರ್ಯಕ್ರಮ ನಿರ್ವಹಿಸಿದರು. ಸಹಾಯಕ ಪ್ರಾಧ್ಯಾಪಕ ಶೋಧನ್‌ ಪಿ ಜಿ ಹಾಗೂ ಪ್ರಥಮ ಎಂಸಿಎ ವಿದ್ಯಾರ್ಥಿ ವೇಣುಗೋಪಾಲ್‌ ಸಹಕಾರ ನೀಡಿದರು. 

ಆ ಬಳಿಕ ದ್ವಿತೀಯ ಎಂಸಿಎ ವಿದ್ಯಾರ್ಥಿಗಳು, ತಯಾರಿಸಿದ ವಿವಿಧ ಸಾಫ್ಟ್‌ವೇರ್ ಯೋಜನೆಗಳು, ವೆಬ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ನವೀನ ತಾಂತ್ರಿಕ ಪರಿಹಾರಗಳನ್ನು ಪ್ರಾಂಶುಪಾಲರು, ಉಪನ್ಯಾಸಕರು & ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರದರ್ಶಿಸಲಾಯಿತು. ಪ್ರಥಮ ಎಂಸಿಎ, ಅಂತಿಮ ವರ್ಷದ ಬಿಸಿಎ, ಪ್ರಥಮ ಮತ್ತು ದ್ವಿತೀಯ ವರ್ಷದ ಬಿಎಸ್ಸಿ ಡೇಟಾ ಸೈನ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.