ಈ ದಿನದ ರಾಶಿ ಭವಿಷ್ಯ

07-06-2025

Jun 7, 2025 - 03:30
ಈ ದಿನದ ರಾಶಿ ಭವಿಷ್ಯ

ಅದೃಷ್ಟ ಸಂಖ್ಯೆ  6

೧.ಮೇಷ:

ಇಷ್ಟವಿಲ್ಲದಿದ್ದರೂ ಮಾಡಲೇಬೇಕಾದ  ತಿರುಗಾಟ! ಉದ್ಯೋಗ, ಉದ್ಯಮ ಎರಡರಲ್ಲೂ ನೆಮ್ಮದಿಯ ದಿನ. ಆಪ್ತರಿಂದ ಅಯಾಚಿತ ನೆರವು ಲಭ್ಯ. ಗೃಹಿಣಿಯರ  ಆರೋಗ್ಯದ ಕಡೆಗೆ ಗಮನ ಇರಲಿ. ದಕ್ಷಿಣ ದಿಕ್ಕಿನಿಂದ ಶುಭವಾರ್ತೆ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

೨.ವೃಷಭ:


ಮನಸ್ಸನ್ನು ಹಗುರಗೊಳಿಸಲು ಬರವಣಿಗೆ. ಉದ್ಯೋಗದಲ್ಲಿ ಪದೋನ್ನತಿ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಕೆಲಸದ ಒತ್ತಡ. ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ಸಾರಿಗೆ ವ್ಯವಹಾರಸ್ಥರಿಗೆ ಶುಭದಿನ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.
  
   

೩. ಮಿಥುನ:

 ಪಿತ್ತ ನೆತ್ತಿಗೇರಿದವರೊಡನೆ ವಾದ ಅಪಾಯಕರ! ಎಲ್ಲ ಕ್ಷೇತ್ರಗಳಲ್ಲಿ  ಹಿತಶತ್ರುಗಳಿಂದ ತೊಂದರೆ. ಉದ್ಯಮದಲ್ಲಿ  ಸಾಮಾನ್ಯ ಪ್ರಗತಿ.  ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ. ಸಂಗಾತಿಗೆ ಮನಸ್ಥೈರ್ಯ ತುಂಬಲು ಪ್ರಯತ್ನ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೪.ಕರ್ಕಾಟಕ:

 ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ.  ಉದ್ಯಮದ ಉತ್ಪಾದನೆಗಳಲ್ಲಿ   ವೈವಿಧ್ಯ ಕಾಯ್ದುಕೊಳ್ಳುವ ಪ್ರಯತ್ನ. ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ಅಲ್ಪಾವಧಿ ಹೂಡಿಕೆ ಬೇಡ. ಎಲ್ಲ ಮನೆಮಂದಿಗೂ ಉಲ್ಲಾಸದ ವಾತಾವರಣ. ಸಂಕಷ್ಟನಾಶನ ಗಣೇಶ ಸ್ತೋತ್ರ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ.


೫_ಸಿಂಹ:

 ಉದ್ಯೋಗದ ಬಂಧನದಿಂದ ಮುಕ್ತರಾಗುವ ಪ್ರಯತ್ನ.  ಹೊಸ ಪರಿಚಯಸ್ಥರ ಸಹಾಯದಿಂದ  ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ. ಸ್ಥಿರಾಸ್ತಿ ವ್ಯವಹಾರ ನಡೆಸುವವರಿಗೆ  ಎದುರಾಳಿಗಳಿಂದ ತೊಂದರೆ. ಹಿರಿಯರ ಸಕಾಲಿಕ ಸಲಹೆಯಿಂದ ಉಪಕಾರ. ಗಣೇಶ ಅಷ್ಟಕ, ಶಿವಕವಚ, ದುರ್ಗಾ ಸ್ತೋತ್ರ ಓದಿ.


೬.ಕನ್ಯಾ:

ಶಾಂತಿ,ಸಮಾಧಾನದ ಕ್ಷಣಗಳು. ಆತ್ಮೀಯರ ಭೇಟಿಯಿಂದ ಹರ್ಷ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಉದ್ಯೋಗಾಸಕ್ತರಿಗೆ ಉತ್ತಮ ಅವಕಾಶಗಳು. ಹಣದ ಬೆಳೆಗಳಿಂದ ಸಾಮಾನ್ಯ ಲಾಭ. ಗಣೇಶ ಅಷ್ಟಕ, ವೇದಸಾರ ಶಿವಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.


೭ತುಲಾ:

ಎಲ್ಲ ಸಮಸ್ಯೆಗಳಿಗೂ ಯೋಗ್ಯ ಪರಿಹಾರ.  ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ . ಅಕಸ್ಮಾತ್ ಧನಾಗಮ.  ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.


೮.ವೃಶ್ಚಿಕ:

 ಪಿತ್ರಾರ್ಜಿತ ಕೃಷಿಭೂಮಿಗೆ ಸಂದರ್ಶನ. ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ. ಪಾಲುದಾರರ ಸಹಕಾರದಿಂದ ಉದ್ಯಮ ವೃದ್ಧಿ.  ಗೃಹಿಣಿಯರ ಸ್ವಾವಲಂಬನೆ ಯೋಜನೆ  ಉನ್ನತ ಸ್ಥಿತಿಯಲ್ಲಿ.ತರಕಾರಿ, ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಲಾಭ. ಗಣೇಶ ಕವಚ ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಗುರುಸ್ತೋತ್ರ ಓದಿ.

೯. ಧನು:

 ಸುಲಭವಾಗಿ ಸಂಸಾರ ನಿರ್ವಹಣೆ. ಉದ್ಯೋಗ ಸ್ಥಾನದಲ್ಲಿ ಸಹಚರರಿಂದ ಗೌರವ.  ಸಣ್ಣ ಪ್ರಮಾಣದ  ಉದ್ಯಮಗಳ ಅಭಿವೃದ್ಧಿ. ಬಾಳ ಸಂಗಾತಿಯ ಆರೋಗ್ಯ ಸುಧಾರಣೆ‌. ಕುಟುಂಬದ ಮನೆಯಲ್ಲಿ ದೇವೀ ಆರಾಧನೆ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.


೧೦. ಮಕರ:
 ಉದ್ಯೋಗ, ವ್ಯವಹಾರಗಳಲ್ಲಿ ನೆಮ್ಮದಿ.  ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನಿವೇಶನ ಖರೀದಿ- ಮಾರಾಟಗಾರರಿಗೆ  ಅನುಕೂಲ. ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ. ಪೂಜಾಸಾಮಗ್ರಿ ವ್ಯಾಪಾರಿಗಳ ಆದಾಯ ವೃದ್ಧಿ. ಗಣೇಶ ಕವಚ ದತ್ತಾತ್ರೇಯ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧.ಕುಂಭ:

 ಹೂಡಿಕೆಗಳಿಂದ ಉತ್ತಮ ಲಾಭ. ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ದೂರದಲ್ಲಿರುವ ಬಂಧುಗಳ  ಭೇಟಿ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಎಲ್ಲರ ಪೂರ್ಣ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ಗಣಪತಿ ಅಥರ್ವಶೀರ್ಷ, ರಾಮ ಭುಜಂಗಪ್ರಯಾತ ಸ್ತೋತ್ರ, ಶನಿಸ್ತೋತ್ರ ಓದಿ.

೧೨.ಮೀನ:

ಅಗಣಿತ  ಶುಭಫಲಗಳ ದಿನ. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ಅಪರಿಚಿತ  ವ್ಯಕ್ತಿಗಳಿಂದ  ಅನಿರೀಕ್ಷಿತ ಸಹಾಯ.  ರಾಜಕಾರಣಿಯ ಭೇಟಿಯಿಂದ ವ್ಯವಹಾರಕ್ಕೆ ಸಹಾಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.