Ambika Vidyalaya: ಭಜನೆ & ಶ್ಲೋಕ ಹಿರಿಯರು ಕಲಿಸಿಕೊಟ್ಟ ಅದ್ಭುತ ಶಕ್ತಿ.. ಸುಬ್ರಮಣ್ಯ ನಟ್ಟೋಜ

Ambika Vidyalaya CBSE school: ಪುತ್ತೂರಿನ ಅಂಬಿಕಾ ವಿದ್ಯಾಲಯದ ಸಿಬಿಎಸ್ಇ ಸಂಸ್ಥೆಯಲ್ಲಿ ಧರ್ಮಾಭ್ಯುದಯ - ಧರ್ಮ ಶಿಕ್ಷಣ ಸಮಿತಿ ವತಿಯಿಂದ, ವಿವಿಧ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗಾಗಿ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

Sep 18, 2026 - 18:53
Ambika Vidyalaya: ಭಜನೆ & ಶ್ಲೋಕ ಹಿರಿಯರು ಕಲಿಸಿಕೊಟ್ಟ ಅದ್ಭುತ ಶಕ್ತಿ.. ಸುಬ್ರಮಣ್ಯ ನಟ್ಟೋಜ

ಪುತ್ತೂರು: ನಮ್ಮ ದೇಶವು ಆದಿ ಮತ್ತು ಅಂತ್ಯವಿಲ್ಲದ ಸನಾತನ ಧರ್ಮವನ್ನು ಹೊಂದಿದ್ದು, ಪ್ರಪಂಚಕ್ಕೆ ಯೋಗವಿದ್ಯೆಯನ್ನು ಪರಿಚಯಿಸಿದೆ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

ಇಲ್ಲಿನ ಅಂಬಿಕಾ ವಿದ್ಯಾಲಯದ ಸಿಬಿಎಸ್ಇ ಸಂಸ್ಥೆಯಲ್ಲಿ ಧರ್ಮಾಭ್ಯುದಯ - ಧರ್ಮ ಶಿಕ್ಷಣ ಸಮಿತಿ ವತಿಯಿಂದ, ವಿವಿಧ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗಾಗಿ ಗಣೇಶ ಚೌತಿ ಪ್ರಯುಕ್ತ ಏರ್ಪಡಿಸಲಾಗಿದ್ದ, ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

ಸನಾತನ ಧರ್ಮವನ್ನು ಉಳಿಸುವ ಸಲುವಾಗಿ ನಾವೆಲ್ಲರೂ ಜಾಗೃತಗೊಳ್ಳಬೇಕು, 'ಭಜನೆ ಇದ್ದಲ್ಲಿ ವಿಭಜನೆ ಇಲ್ಲ' ಭಜನೆಯಿಂದ ದೇವರನ್ನು ನಮ್ಮಲ್ಲಿ ನೆಲೆಯಾಗಿಸಬಹುದು. ಭಜನೆ ಹಾಗೂ ಶ್ಲೋಕಗಳು  ಹಿರಿಯರು ನಮಗೆ ಕಲಿಸಿಕೊಟ್ಟಂತಹ ಒಂದು ಅದ್ಭುತ ಶಕ್ತಿಯಾಗಿದೆ ಎಂದು ಹೇಳಿದರು. 

ಧರ್ಮ ಶಿಕ್ಷಣ ಪಡೆಯುತ್ತಿರುವ ಕಿರಿಯ, ಹಿರಿಯ ಮತ್ತುಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಭಜನೆ, ಭಾಷಣ, ಪ್ರಬಂಧ, ಚಿತ್ರಕಲೆ ಹಾಗೂ ಶ್ಲೋಕ ಕಂಠಪಾಠ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. 

ಇದರಲ್ಲಿ ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಕೇಂದ್ರ ಅಜ್ಜಿಕಲ್ಲು ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರ ಮತ್ತು ಈಶ್ವರಮಂಗಲ ಧರ್ಮಾಭ್ಯುದಯ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ ಉಪಸ್ಥಿತರಿದ್ದರು.

ಫಲಿತಾಂಶ: ಭಜನಾ ಸ್ಪರ್ಧೆಯಲ್ಲಿ ಧರ್ಮಾಭ್ಯುದಯ ಧರ್ಮ ಶಿಕ್ಷಣ ಕೇಂದ್ರ ಈಶ್ವರಮಂಗಲದ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಶ್ರೀ ಶಕ್ತಿ ಜಟಾಧರಿ ಭಜನಾ ಮಂದಿರ ಅಜ್ಜಿಕಲ್ಲು ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಾಗೂ ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದರು. 

ಹಿರಿಯ ವಿಭಾಗದ ಭಾಷಣ ಸ್ಪರ್ಧೆ: ಬೆಳ್ಳಿಪ್ಪಾಡಿ ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿ ಭುವನ್ ಎ ಪ್ರಥಮ ಸ್ಥಾನ ಮತ್ತು ಅಜ್ಜಿಕಲ್ಲು ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿ ಯಶ್ವಿನ್ ರೈ ದ್ವಿತೀಯ ಸ್ಥಾನವನ್ನು ಗಳಿಸಿದರು.

ಪ್ರೌಢಶಾಲಾ ವಿಭಾಗದ ಭಾಷಣ ಸ್ಪರ್ಧೆ: ಧರ್ಮಶಿಕ್ಷಣ ಕೇಂದ್ರ ಬೆಳ್ಳಿಪ್ಪಾಡಿಯ ವಿದ್ಯಾರ್ಥಿನಿ ಹೃತಿಕಾ ಕೆ ಪ್ರಥಮ ಸ್ಥಾನ ಹಾಗೂ ಶ್ರಾವ್ಯ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು. 

ಹಿರಿಯ ವಿಭಾಗದ ಪ್ರಬಂಧ ಸ್ಪರ್ಧೆ: ಅಜ್ಜಿಕಲ್ಲು ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಬಿಂದುಶ್ರೀ ಪ್ರಥಮ ಸ್ಥಾನ ಪಡೆದರು.

ಪ್ರೌಢಶಾಲಾ ವಿಭಾಗದ ಪ್ರಬಂಧ ಸ್ಪರ್ಧೆ: ಬೆಳ್ಳಿಪ್ಪಾಡಿ ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಖುಷಿ ಪ್ರಥಮ ಸ್ಥಾನ, ಧರ್ಮಾಭ್ಯುದಯ ಧರ್ಮ ಶಿಕ್ಷಣ ಕೇಂದ್ರ ಈಶ್ವರ ಮಂಗಲದ ವಿದ್ಯಾರ್ಥಿನಿ ಮಾನಸ ದ್ವಿತೀಯ ಸ್ಥಾನ ಮತ್ತು ಸೋಕ್ಷಾ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು. 

ಕಿರಿಯ ವಿಭಾಗದ ಚಿತ್ರಕಲಾ ಸ್ಪರ್ಧೆ: ಅಜ್ಜಿಕಲ್ಲು ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿ ರಿತ್ವಿನ್ ರೈ ಪ್ರಥಮ ಸ್ಥಾನ ಗಳಿಸಿದರು. 

ಹಿರಿಯ ವಿಭಾಗದ ಚಿತ್ರಕಲೆ ಸ್ಪರ್ಧೆ: ಬೆಳ್ಳಿಪ್ಪಾಡಿ ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಗ್ರೀಷ್ಮಾ ಪ್ರಥಮ ಸ್ಥಾನ, ಈಶ್ವರ ಮಂಗಲ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಪೂರ್ತಿ ಕೆ ದ್ವಿತೀಯ ಸ್ಥಾನ ಹಾಗೂ ಅಜ್ಜಿಕಲ್ಲು ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿ ಧನ್ವಿತ್ ತೃತೀಯ ಸ್ಥಾನವನ್ನು ಪಡೆದರು. 

ಪ್ರೌಢಶಾಲಾ ವಿಭಾಗದ ಚಿತ್ರಕಲೆ ಸ್ಪರ್ಧೆ: ಈಶ್ವರಮಂಗಲ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿ ಎನ್.ಕೆ.ಜೀವಜ್ ಪ್ರಥಮ ಸ್ಥಾನ, ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಸೋನಾಲಿ ಕೆ.ಎಸ್ ದ್ವಿತೀಯ ಸ್ಥಾನ ಮತ್ತು ಅಜ್ಜಿಕಲ್ಲು ಧರ್ಮ ಶಿಕ್ಷಣಕೇಂದ್ರದ ವಿದ್ಯಾರ್ಥಿ ಮನ್ವಿತ್ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಕಿರಿಯ ವಿಭಾಗದ ಶ್ಲೋಕ ಕಂಠಪಾಠ ಸ್ಪರ್ಧೆ: ಈಶ್ವರಮಂಗಲ ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿ ಸಮರ್ಥ್ ಪ್ರಥಮ ಸ್ಥಾನ, ಅಜ್ಜಿಕಲ್ಲು ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ನಿಶ್ವಿ ದ್ವಿತೀಯ ಸ್ಥಾನ ಗಳಿಸಿದರು.

ಹಿರಿಯ ವಿಭಾಗದ ಶ್ಲೋಕ ಕಂಠಪಾಠ ಸ್ಪರ್ಧೆ: ಈಶ್ವರಮಂಗಲ ಧರ್ಮಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಸಮೃದ್ಧಿ ಪ್ರಥಮ ಸ್ಥಾನ, ಅಜ್ಜಿಕಲ್ಲು ಧರ್ಮ ಶಿಕ್ಷಣ ಕೇಂದ್ರದ ವಿದ್ಯಾರ್ಥಿನಿ ಮಾನ್ವಿ ದ್ವಿತೀಯ ಸ್ಥಾನ ಹಾಗೂ ಬೆಳ್ಳಿಪ್ಪಾಡಿ ಧರ್ಮ ಶಿಕ್ಷಣ ಕೇಂದ್ರದ ತಾನ್ಯ ತೃತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಮಾಲತಿ ಡಿ, ಉಪಪ್ರಾಂಶುಪಾಲೆ ಸುಜನಿ ಬೋರ್ಕರ್, ಧರ್ಮಶಿಕ್ಷಣ ಸಂಸ್ಥೆಗಳ ಮಾತಾಜಿ ಹಾಗೂ ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕಿ ಶೈಲಾಶ್ರೀ ಸ್ವಾಗತಿಸಿ, ವಂದಿಸಿದರು., ಶಿಕ್ಷಕಿ ಪ್ರಿಯಾಶ್ರೀ ಕೆ.ಎಸ್ ಬಹುಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕ ಹೇಮಂತ್ ನಿರ್ವಹಿಸಿದರು.

ಸಂಜಯ್ ಅಂಬೇಕರ್ ಟಿಜಿ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.