CM D.K.Shivakumar Cabinet Expansion: ಇಂದು 20 ಸಚಿವರ ಪ್ರಮಾಣ ವಚನ

Cm D.K.Shivakumar Cabinet Expansion: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಪುಟ ಸೇರುವ ನೂತನ 20 ಸಚಿವರ ಹೆಸರನ್ನು ಇಂದು (ಸೋಮವಾರ) ಹೈಕಮಾಂಡ್ ಪ್ರಕಟಿಸಿದೆ. ಸಂಜೆ 4.5ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ.

Aug 3, 2026 - 13:14
Aug 3, 2026 - 13:56
CM D.K.Shivakumar Cabinet Expansion: ಇಂದು 20 ಸಚಿವರ ಪ್ರಮಾಣ ವಚನ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar), ಸಂಪುಟ ಸೇರುವ ನೂತನ 20 ಸಚಿವರ ಹೆಸರನ್ನು ಇಂದು (ಸೋಮವಾರ) ಹೈಕಮಾಂಡ್ ಪ್ರಕಟಿಸಿದೆ. ಸಂಜೆ 4.05ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ. 
 
ಯಾರಿಗೆ ಸ್ಥಾನ: ಪಿ.ಎಂ ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ, ರುದ್ರಪ್ಪ ಲಮಾಣಿ, ಕೆ.ಎಸ್.ಬಸವಂತಪ್ಪ, ಬಿ.ನಾಗೇಂದ್ರ, ಟಿ.ರಘುಮೂರ್ತಿ, ಬಿ.ಜಡ್ ಜಮೀರ್  ಖಾನ್, ರಿಜ್ವಾನ್ ಅರ್ಷದ್, ಸಂತೋಷ್ ಲಾಡ್, ಮಧು ಬಂಗಾರಪ್ಪ, ಪುಟ್ಟುರಂಗಶೆಟ್ಟಿ, ಮಂಕಾಳ ವೈದ್ಯ, ಡಾ.ಅಜಯ್ ಸಿಂಗ್, ಎನ್.ಚಲುವರಾಯ ಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಎಚ್.ಸಿ.ಬಾಲಕೃಷ್ಣ, ಗಾಯತ್ರಿ ಶಾಂತೇಗೌಡ, ಬಸವರಾಜ ರಾಯರೆಡ್ಡಿ, ವಿಜಯಾನಂದ ಕಾಶಪ್ಪನವರ್, ಲಕ್ಷ್ಮಣ ಸವದಿ.
 
ಸ್ವೀಕರ್‌ಗಳ ಹೆಸರು ಅಂತಿಮ: ವಿಧಾನಸಭೆ ಸಭಾಪತಿಯಾಗಿ ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್ ಹಾಗೂ ಉಪ ಸಭಾಪತಿಯಾಗಿ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಹೆಸರನ್ನು ಅಂತಿಮಗೊಳಿಸಲಾಗಿದೆ. ಪರಿಷತ್ ಸಭಾಪತಿಯಾಗಿ ಸ್ಥಾನಕ್ಕೆ ಸಲೀಂ ಅಹಮದ್ ಮತ್ತು ಉಪ ಸಭಾಪತಿಯಾಗಿ ಉಮಾಶ್ರೀ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. 
 
ಕೊನೆ ಕ್ಷಣದಲ್ಲಿ ಸಚಿವರ ಪಟ್ಟಿಯಿಂದ ಮಂಕಾಳ ವೈದ್ಯ ಹೆಸರನ್ನು ಕೈಬಿಡಲಾಗಿದ್ದು, ದಾವಣಗೆರೆಯ ಹಿರಿಯ ನಾಯಕ  ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂಬ ವಿವರಗಳು ಲಭ್ಯವಾಗಿವೆ. ಸದ್ಯ, ಮಂಕಾಳ ವೈದ್ಯ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ತೆರಳುತ್ತಿದ್ದಾರೆ ಎನ್ನಲಾಗಿದೆ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.