Karnataka Cabinet: ಸಿಎಂ ಡಿ.ಕೆ.ಶಿವಕುಮಾರ್ ಸಂಪುಟದ ಹೊಸ ಸಚಿವರಿಗೆ ಖಾತೆ ಹಂಚಿಕೆ

Karnataka Cabinet: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಪುಟಕ್ಕೆ ಆ.3 ರಂದು ಎರಡನೇ ಹಂತದಲ್ಲಿ 19 ಹೊಸ ಸಚಿವರು ಸೇರ್ಪಡೆಗೊಂಡಿದ್ದರು. ಸದ್ಯ ಅಳೆದು-ತೂಗಿ ಬಹುತೇಕ ಎಲ್ಲ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

Aug 12, 2026 - 12:31
Karnataka Cabinet: ಸಿಎಂ ಡಿ.ಕೆ.ಶಿವಕುಮಾರ್ ಸಂಪುಟದ ಹೊಸ ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar), ಸಂಪುಟಕ್ಕೆ ಆ.3 ರಂದು ಎರಡನೇ ಹಂತದಲ್ಲಿ 19 ಹೊಸ ಸಚಿವರು ಸೇರ್ಪಡೆಗೊಂಡಿದ್ದರು. ಅಳೆದು-ತೂಗಿ ಬಹುತೇಕ ಎಲ್ಲ ಸಚಿವರಿಗೆ ಇಂದು (ಬುಧವಾರ) ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಕೆ.ಹೆಚ್.ಮುನಿಯಪ್ಪಅವರ  ಖಾತೆ ಬದಲಾವಣೆ ಮಾಡಲಾಗಿದೆ.

ಎನ್.ಚಲುವರಾಯಸ್ವಾಮಿ ಕೃಷಿ ಇಲಾಖೆ, ರಿಜ್ವಾನ್ ಅರ್ಷದ್ ಆಹಾರ & ನಾಗರಿಕ ಸರಬರಾಜು, ಕೆ.ಹೆಚ್.ಮುನಿಯಪ್ಪ ಸಮಾಜ ಕಲ್ಯಾಣ ಇಲಾಖೆ, ಸಂತೋಷ್ ಲಾಡ್ ಕಾರ್ಮಿಕ ಇಲಾಖೆ, ಬಸಂತಪ್ಪ ಮೀನುಗಾರಿಕೆ, ಬಂದರು & ಒಳನಾಡು ಇಲಾಖೆ, ಮಧು ಬಂಗಾರಪ್ಪ ಪ್ರಾಥಮಿಕ ಶಿಕ್ಷಣ - ಸಾಕ್ಷರತಾ ಇಲಾಖೆ, ಬಸವರಾಜ ರಾಯರೆಡ್ಡಿ ಉನ್ನತ ಶಿಕ್ಷಣ ಇಲಾಖೆ, ಜಮೀರ್ ಅಹ್ಮದ್ ಖಾನ್ ವಸತಿ ಇಲಾಖೆ, ಲಕ್ಷ್ಮಣ ಸವದಿ  ಸಹಕಾರ ಇಲಾಖೆ, ಡಾ. ಅಜಯ್ ಸಿಂಗ್ ಅರಣ್ಯ ಇಲಾಖೆ, ಎಸ್.ಎಸ್.ಮಲ್ಲಿಕಾರ್ಜುನ್ ಗಣಿ & ಭೂ ವಿಜ್ಞಾನ ಇಲಾಖೆ, ಹೆಚ್.ಸಿ.ಬಾಲಕೃಷ್ಣ ಸಣ್ಣ ನೀರಾವರಿ ಇಲಾಖೆ ಹಾಗೂ ಪುಟ್ಟರಂಗ ಶೆಟ್ಟಿ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಲಾಗಿದೆ.

ಸಚಿವ ಬಿ.ನಾಗೇಂದ್ರ, ರುದ್ರಪ್ಪ ಲಮಾಣಿ, ಶಿವರಾಜ್‌ ತಂಗಡಗಿ, ವಿಜಯಪ್ಪ ಕಾಶಪ್ಪನವರ್‌, ನರೇಂದ್ರ ಸ್ವಾಮಿ ಮತ್ತು ಟಿ.ರಘುಮೂರ್ತಿ ಅವರುಗಳಿಗೆ ಯಾವುದೇ ಖಾತೆಯನ್ನು ನೀಡಿಲ್ಲ. ಇಂದೇ ಹಂಚಿಕೆಯಾಗುವ ನಿರೀಕ್ಷೆಯಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.