Honda QC3: ನೂತನ 'ಹೋಂಡಾ ಕ್ಯೂಸಿ3' ಎಲೆಕ್ಟ್ರಿಕ್ ಸ್ಕೂಟರ್ ಮಂಗಳವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದು ರೂ.1.35 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದ್ದು, ರೂ.5,000 ಮುಂಗಡ ಹಣವನ್ನು ಪಾವತಿಸಿ ಬುಕ್ಕಿಂಗ್ ಮಾಡಬಹುದು. ಮೊದಲಿಗೆ ದೆಹಲಿ, ಆಗ್ರಾ, ಕಟಕ್, ಸೂರತ್ ಮತ್ತು ಕೊಲ್ಲಂನಲ್ಲಿರುವ ಆಯ್ದ 'ರೆಡ್‌ವಿಂಗ್' ಡೀಲರ್‌ಶಿಪ್‌ಗಳ ಮೂಲಕ ಗ್ರಾಹಕರ ಖರೀದಿಗೆ ಲಭ್ಯವಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದ್ದು, ನೋಡುಗರ ಕಣ್ಣುಕುಕ್ಕುವಂತಿದೆ. ಹಳೆಯ 'ಹೋಂಡಾ ಕ್ಯೂಸಿ1' ಇ-ಸ್ಕೂಟರ್ ಮಾಡೆಲ್‌ಗೆ ಹೋಲಿಕೆಯಾಗುತ್ತದೆ. ಆದರೂ, ಹೆಚ್ಚು ಪ್ರೀಮಿಯಂ ಆಗಿದೆ.
ಇದು ಎಲ್‌ಇಡಿ ಹೆಡ್‌ಲೈಟ್, ಎಲ್‌ಇಡಿ ಡಿಆರ್‌ಎಲ್, ಎಲ್‌ಇಡಿ ಇಂಡಿಕೇಟರ್ ಹಾಗೂ ಎಲ್‌ಇಡಿ ಟೇಲ್‌ಲೈಟ್‌ನ್ನು ಪಡೆದಿದೆ. ಉತ್ತಮವಾದ ಹ್ಯಾಂಡಲ್‌ಬಾರ್ ಕೂಡ ಇದೆ. ಮ್ಯಾಟ್ ಫೋಟಾನ್ ಗ್ರೇ ಮೆಟಾಲಿಕ್, ಪರ್ಲ್ ಪ್ರೆಶಿಯಸ್ ವೈಟ್, ಪರ್ಲ್ ಶಾಲೋ ಬ್ಲೂ ಹಾಗೂ ಪರ್ಲ್ ಸೈರನ್ ಬ್ಲೂ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.
ದೊಡ್ಡದಾದ ಸೀಟ್ ಇದ್ದು, ಇಬ್ಬರು ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ಹೆಚ್ಚಿನ ಲಗೇಜ್ ಸಾಗಿಸಲು ವಿಶಾಲವಾದ ಫ್ಲೋರ್‌ಬೋರ್ಡ್ ಇದ್ದು, 32 ಲೀಟರ್‌ನಷ್ಟು ಅಂಡರ್-ಸೀಟ್ ಸ್ಟೋರೇಜ್‌ನ್ನು ತನ್ನದಾಗಿಸಿಕೊಂಡಿದೆ.
ನೂತನ 'ಹೋಂಡಾ ಕ್ಯೂಸಿ3' ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಪಡೆದಿದೆ. 3.0 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 145 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಈ ಬ್ಯಾಟರಿಯು 2 ಗಂಟೆ 40 ನಿಮಿಷಗಳಲ್ಲಿ 0 ರಿಂದ 80 ಚಾರ್ಜ್ ಆಗಿ ಬಿಡುತ್ತದೆ. ಅದೇ ರೀತಿಯಲ್ಲಿ ಫುಲ್ ಚಾರ್ಜ್ ಆಗಲು 4 ಗಂಟೆ ತೆಗೆದುಕೊಳ್ಳುತ್ತದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 5-ಇಂಚಿನ ಟಿಎಫ್‌ಟಿ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಹೊಂಡಾ ರೋಡ್‌ಸಿಂಕ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್' ನ್ಯಾವಿಗೇಷನ್ ಹಾಗೂ ಸ್ಮಾರ್ಟ್ ಕೀಯನ್ನು ಹೊಂದಿದೆ.
ಇದು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಸವಾರರ ರಕ್ಷಣೆಗಾಗಿ, ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್'ನ್ನು ಒಳಗೊಂಡಿದೆ. ಡ್ರಮ್/ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.