Mangaluru: ಇಷ್ಮಾ ಗ್ಲೋಬಲ್ ಸೊಲ್ಯೂಷನ್ಸ್ & ಲರ್ನಿಂಗ್ ಸೆಂಟರ್ ಉದ್ಘಾಟನೆ
Mangaluru: 'ಇಷ್ಮಾ ಗ್ಲೋಬಲ್ ಸೊಲ್ಯೂಷನ್ಸ್' ಹಾಗೂ ಅದರ ನೂತನ ಲರ್ನಿಂಗ್ ಸೆಂಟರ್ ಶುಕ್ರವಾರ ಕದ್ರಿ ಮಲ್ಲಿಕಟ್ಟೆ ರಸ್ತೆ ಸಿವಿ ನಾಯಕ್ ಹಾಲ್ ಮುಂಭಾಗದ ಲೋಟಸ್ ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಂಡಿತು.
ಮಂಗಳೂರು: ಕರಾವಳಿ ಕರ್ನಾಟಕದ ಶೈಕ್ಷಣಿಕ & ತಾಂತ್ರಿಕ ಕ್ಷೇತ್ರಕ್ಕೆ ಮತ್ತೊಂದು ಹೊಸ ಸೇರ್ಪಡೆಯಾಗಿ, 'ಇಷ್ಮಾ ಗ್ಲೋಬಲ್ ಸೊಲ್ಯೂಷನ್ಸ್' ಹಾಗೂ ಅದರ ನೂತನ ಲರ್ನಿಂಗ್ ಸೆಂಟರ್ ಶುಕ್ರವಾರ ಕದ್ರಿ ಮಲ್ಲಿಕಟ್ಟೆ ರಸ್ತೆಯ ಸಿವಿ ನಾಯಕ್ ಹಾಲ್ ಮುಂಭಾಗದ ಲೋಟಸ್ ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಂಡಿತು.
ತಂತ್ರಜ್ಞಾನ, ಶಿಕ್ಷಣ, ಸಂವಹನ ಮತ್ತು ಏವಿಯೇಷನ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಯುವಜನರಿಗೆ ಗುಣಮಟ್ಟದ ತರಬೇತಿ, ವೃತ್ತಿಪರ ಕೌಶಲ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. 'ಅಪ್ಟೆಕ್ ಲರ್ನಿಂಗ್' ಹಾಗೂ 'ಅವಾಲಾನ್ ಅಕಾಡೆಮಿ' ಸಹಯೋಗದೊಂದಿಗೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.
ಶಾರದಾ ಸಮೂಹ ಸಂಸ್ಥೆಗಳ ಸಹ-ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ 'ಇಷ್ಮಾ ಗ್ಲೋಬಲ್ ಸೊಲ್ಯೂಷನ್ಸ್' ಮತ್ತು ಲರ್ನಿಂಗ್ ಸೆಂಟರ್ ಉದ್ಘಾಟಿಸಿ, ಸಂಸ್ಥೆಗೆ ಶುಭ ಹಾರೈಸಿದರು.
ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆ ಬಳಿಕ ಮಾತನಾಡಿ, ಇಷ್ಮಾ ಗ್ಲೋಬಲ್ ಸೊಲ್ಯೂಷನ್ಸ್‌ನ ಶುಭಾರಂಭವು ಜಗದೀಶ್ ಪಾಂಚಾಲ್, ಡಾ.ಮಮತಾ ಪಾಂಚಾಲ್, ಡಾ.ನಾಗಶ್ರೀ ಪಾಂಚಾಲ್, ಡಾ.ಗಿರೀಶ್ ಪಾಂಚಾಲ್ ಮತ್ತು ಅವರ ಕುಟುಂಬದ ಉದ್ಯಮಶೀಲ ಪ್ರಯತ್ನಕ್ಕೆ ಸಾಕ್ಷಿಯಾಗಿದೆ ಎಂದರು.
ಯುವಜನರಿಗೆ ಕೇವಲ ಶಿಕ್ಷಣ ನೀಡುವುದಷ್ಟೇ ಅಲ್ಲದೆ, ಪ್ರಾಯೋಗಿಕ ಜ್ಞಾನ ಮತ್ತು ವೃತ್ತಿಪರ ಕೌಶಲ್ಯಗಳನ್ನು ಒದಗಿಸುವುದರೊಂದಿಗೆ, ಜಾಗತಿಕ ಮಟ್ಟದ ಅವಕಾಶಗಳನ್ನು ಪಡೆಯಲು ಈ ಸಂಸ್ಥೆ ದಾರಿ ದೀಪವಾಗಲಿ ಎಂದು ಆಶಿಸಿದರು.
ಈ ತರಬೇತಿ ಕೇಂದ್ರವು ಏವಿಯೇಷನ್ ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಹೊಸ ಅವಕಾಶಗಳನ್ನು ಒದಗಿಸಲಿದೆ. ಪಾಂಚಾಲ್ ಕುಟುಂಬದ ಶ್ರಮ ಮತ್ತು ಕನಸುಗಳು ಯಶಸ್ವಿಯಾಗಿ, ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಅವರು ಹೇಳಿದರು.
ಚಾರ್ಟರ್ಡ್ ಅಕೌಂಟೆಂಟ್ & ಉಪನ್ಯಾಸಕ ಸಿಎ. ಎಸ್.ಎಸ್.ನಾಯಕ್, ನೂತನ 'ಏವಿಯೇಷನ್ ಟ್ರೈನಿಂಗ್ ಮಾಕ್ ಲ್ಯಾಬ್' ಲೋಕಾರ್ಪಣೆಗೊಳಿಸಿದರು. ವಿದ್ಯಾರ್ಥಿಗಳನ್ನು ಪ್ರಾಯೋಗಿಕ ತರಬೇತಿ ಮೂಲಕ ಉದ್ಯೋಗ ಕ್ಷೇತ್ರದ ಅಗತ್ಯಗಳಿಗೆ, ಸಜ್ಜುಗೊಳಿಸುವ ಪ್ರಯತ್ನ ಶ್ಲಾಘನೀಯವಾಗಿದ್ದು, ಸಂಸ್ಥೆ ಉನ್ನತ ಮಟ್ಟಕ್ಕೆ ಏರಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಅರುಣ್ ಶ್ಯಾಮ್, ಹೆಚ್.ಆರ್.ಜೋಶಿ, ಸಾಫ್ಟ್‌ವೇರ್ ಡೆವಲಪರ್ ಸುಶಾಂತ್ ರೈ, ಡಾ.ಜಗದೀಶ್ ಪಾಂಚಾಲ್, ಡಾ.ಮಮತಾ ಪಾಂಚಾಲ್, ಡಾ.ಗಿರೀಶ್ ಪಾಂಚಾಲ್, ಡಾ.ನಾಗಶ್ರೀ ಪಾಂಚಾಲ್ ಸೇರಿದಂತೆ ಹಲವು ಗಣ್ಯರು, ಶಿಕ್ಷಣ ಹಾಗೂ ತಾಂತ್ರಿಕ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.
ಈ ಸಂಸ್ಥೆಯ ಮೂಲಕ ತಂತ್ರಜ್ಞಾನ, ಶಿಕ್ಷಣ, ಸಂವಹನ ಮತ್ತು ಏವಿಯೇಷನ್ ಕ್ಷೇತ್ರಗಳಲ್ಲಿ ಅಗತ್ಯ ಕೌಶಲ್ಯಗಳನ್ನು ಬೆಳೆಸುವ ತರಬೇತಿಯು ಲಭಿಸಲಿದೆ. ಯುವಜನರು ತಮ್ಮ ವೃತ್ತಿಜೀವನದಲ್ಲಿ ಹೊಸ ಅವಕಾಶಗಳತ್ತ ಹೆಜ್ಜೆ ಇಡಲು ಇದು ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದರು.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.