ಸಂತ ಫಿಲೋಮಿನಾ ಕಾಲೇಜು: ಅಣಬೆ ಕೃಷಿ ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ

St Philomena College: ಇಲ್ಲಿನ ಸ್ಪಂದನ ಸೆಮಿನಾರ್ ಹಾಲ್‌ನಲ್ಲಿ ಗುರುವಾರ ಸಸ್ಯಶಾಸ್ತ್ರ ವಿಭಾಗ & ಇಕೋ ಕ್ಲಬ್‌ ವತಿಯಿಂದ, ಅಣಬೆ ಕೃಷಿ ತಂತ್ರಜ್ಞಾನದ ಕುರಿತ ಪ್ರಾಯೋಗಿಕ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

Sep 26, 2026 - 15:26
ಸಂತ ಫಿಲೋಮಿನಾ ಕಾಲೇಜು: ಅಣಬೆ ಕೃಷಿ ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ಪಂದನ ಸೆಮಿನಾರ್ ಹಾಲ್‌ನಲ್ಲಿ ಗುರುವಾರ ಸಸ್ಯಶಾಸ್ತ್ರ ವಿಭಾಗ & ಇಕೋ ಕ್ಲಬ್‌ ವತಿಯಿಂದ, ಅಣಬೆ ಕೃಷಿ ತಂತ್ರಜ್ಞಾನದ ಕುರಿತ ಪ್ರಾಯೋಗಿಕ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು. 

ವಿದ್ಯಾರ್ಥಿಗಳಲ್ಲಿ ಅಣಬೆ ಕೃಷಿಯ ತಿಳುವಳಿಕೆ ಮೂಡಿಸುವುದು ಹಾಗೂ ಈ ಕ್ಷೇತ್ರದಲ್ಲಿನ ಉದ್ಯಮಶೀಲತೆ ಬಗ್ಗೆ ಆಸಕ್ತಿಯನ್ನು ಬೆಳೆಸುವುದು ಕಾರ್ಯಾಗಾರದ ಉದ್ದೇಶವಾಗಿತ್ತು.

ಕಾಲೇಜಿನ ಉಪಪ್ರಾಂಶುಪಾಲ ಡಾ.ವಿಜಯಕುಮಾರ್ ಮೊಳೆಯಾರ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 

ಸುಳ್ಯದ ನೆಹರು ಸ್ಮಾರಕ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕುಲದೀಪ್ ಪಿ.ಪಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಅಣಬೆ ಕೃಷಿ ತಂತ್ರಜ್ಞಾನದ ಮೂಲಭೂತ ಅಂಶಗಳ ಕುರಿತು ಉಪನ್ಯಾಸ ನೀಡಿದರು. 

ಅಣಬೆ ಉತ್ಪಾದನೆಯ ನಾನಾ ಹಂತಗಳಾದ ಸೂಕ್ತ ವಸ್ತುಗಳ ಆಯ್ಕೆ, ಬೆಳೆಯುವ ತಯಾರಿ ಮತ್ತು ಕ್ರಿಮಿನಾಶಕೀಕರಣ, ಸ್ಪಾನ್‌ ಅಳವಡಿಕೆ, ಸೂಕ್ತ ಪರಿಸರ ಪರಿಸ್ಥಿತಿಗಳ ನಿರ್ವಹಣೆ ಮತ್ತು ಅಣಬೆಗಳ ಕೊಯ್ಲು ಮೊದಲಾದ ವಿಷಯಗಳನ್ನು ಕುರಿತು ವಿವರಿಸಿದರು.

ಈ ಕಾರ್ಯಾಗಾರದ ಭಾಗವಾಗಿ ಸಸ್ಯಶಾಸ್ತ್ರ ಪ್ರಯೋಗಾಲಯದಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳು ಪ್ರಾಯೋಗಿಕ ಪ್ರದರ್ಶನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಅಣಬೆ ಕೃಷಿಯ ವಿವಿಧ ಹಂತಗಳಲ್ಲಿ ನೇರ ಅನುಭವ ಪಡೆದರು. 

ವಿದ್ಯಾರ್ಥಿನಿಯರಾದ ನಮ್ರತಾ ಮತ್ತು ಜಶ್ಮಿತಾ ಪ್ರಾರ್ಥಸಿದರು. ಸಂಭ್ರಮ್ ಸ್ವಾಗತಿಸಿದರು. ದಿಲ್ಶಾನಾ ನಿರೂಪಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಶಿಪ್ರಭಾ ಬಿ ಮತ್ತು ಇಕೋ ಕ್ಲಬ್‌ನ ಸಂಚಾಲಕ ಸ್ಮಿತಾ ವಿವೇಕ್ ಕಾರ್ಯಕ್ರಮದ ಸಂಯೋಜಕರಾಗಿ ಕಾರ್ಯನಿರ್ವಹಿಸಿದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.