ಹಿತ್ತಲ ಗಿಡ ಮದ್ದು: ಕಸ್ತೂರಿ ಮೆಂತ್ಯ.. ಉಪಯೋಗಗಳೇನು?
Medicine Plant Musk Fenugreek: ಹಿತ್ತಲ ಗಿಡವಾದ 'ಕಸ್ತೂರಿ ಮೆಂತ್ಯ' ಪರಿಮಳ ಭರಿತವಾದ ಒಂದು ಪ್ರಮುಖ ಮೂಲಿಕೆಯಾಗಿದ್ದು, ಆರೋಗ್ಯವನ್ನು ವೃದ್ಧಿಸುತ್ತದೆ.
ಹಿತ್ತಲ ಗಿಡವಾದ ಕಸ್ತೂರಿ ಮೆಂತ್ಯ (Musk Fenugreek) ಪರಿಮಳ ಭರಿತವಾದ ಒಂದು ಪ್ರಮುಖ ಮೂಲಿಕೆಯಾಗಿದೆ. ಇದರ ವೈಜ್ಞಾನಿಕ ಹೆಸರು ಟ್ರೈಗೊನೆಲ್ಲಾ ಕಾರ್ನಿಕ್ಯುಲಾಟಾ.. ಹಾಗೆಯೇ 'ಕಸೂರಿ ಮೇಥಿ' ಎಂದು ಕರೆಯುತ್ತಾರೆ.
'ಕಸ್ತೂರಿ ಮೆಂತ್ಯ' ಎಲೆಗಳನ್ನು ಒಣಗಿಸಿ ಆಹಾರದಲ್ಲಿ ಬಳಸಲಾಗುತ್ತದೆ. ಇದು ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್ ಹೇರಳವಾಗಿದೆ. ಆಯುರ್ವೇದದಲ್ಲಿ ಇದನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಹಸಿವನ್ನು ಹೆಚ್ಚಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.
ಇದರ ಸೇವನೆಯಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ, ಹೃದಯದ ಆರೋಗ್ಯ ವೃದ್ಧಿಸುತ್ತದೆ. ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೂ ಉತ್ತಮವಾಗಿದೆ. ಪರೋಟಾ, ದಾಲ್ ಹಾಗೂ ತರಕಾರಿ ಪಲ್ಯಗಳಲ್ಲಿ ಸುವಾಸನೆಗಾಗಿ ಹಾಕುತ್ತಾರೆ. ಮನೆಯಲ್ಲಿ ಸುಲಭವಾಗಿ ಬೆಳೆಸಬಹುದಾದ ಈ ಮೂಲಿಕೆ ಅಡುಗೆ ಮನೆಗೆ ಅತ್ಯಗತ್ಯ. ಇದು ಭಾರತದಲ್ಲಿ ವಿಶೇಷವಾಗಿ ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಹೆಚ್ಚು ಬೆಳೆಯಲಾಗುತ್ತದೆ.