ದಿನ ಭವಿಷ್ಯ

07-08-2025

Aug 7, 2025 - 16:19
ದಿನ ಭವಿಷ್ಯ


               ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ 7

೧.ಮೇಷ:

 ಗುರುವಾರ ಮನಸ್ಸಿಗೆ ಸ್ವಲ್ಪ ಹಾಯೆನಿಸುವ ಅನುಭವ. ಉದ್ಯೋಗಸ್ಥರು ವ್ಯವಹಾರಸ್ಥರಿಗೆ ವಿಪುಲ‌ ಅವಕಾಶ. ಹಲವು ಕಾಲದಿಂದ ಕಾಡುತ್ತಿರುವ ಜಟಿಲ ಸಮಸ್ಯೆಗೆ ಪರಿಹಾರ. ಶಸ್ತ್ರವೈದ್ಯರಿಗೆ ಕೀರ್ತಿ ತರುವ ದಿನ. ಮಕ್ಕಳಿಗೆ ಅಧ್ಯಯನಕ್ಕೆ ಉತ್ತೇಜನ. ಗಣಪತಿ ಅಥರ್ವಶೀರ್ಷ, ವಿಷ್ಷು ಸಹಸ್ರನಾಮ, ಶನಿಮಹಾತ್ಮೆ ಓದಿ.

೨. ವೃಷಭ:

 ವೃತ್ತಿಪ್ರಾವೀಣ್ಯ ಪ್ರದರ್ಶನ.  ವೃತ್ತಿಪರ ವರ್ಗದವರಿಗೆ ಅಕಸ್ಮಾತ್ ಪದೋನ್ನತಿ. ಗುರುಸಮಾನರ ಸಲಹೆಯಿಂದ ಕಾರ್ಯ ಸುಲಭ.  ಸಂಗಾತಿಯ ಮನೋಗತವನ್ನು ಮನ್ನಿಸಿದರೆ ಒಳಿತು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ನರಸಿಂಹ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೩.ಮಿಥುನ:

 ಮಹಾವಿಷ್ಣು ಸನ್ನಿಧಿಗೆ ಭೇಟಿ. ಉದ್ಯೋಗ ಕ್ಷೇತ್ರದಲ್ಲಿ ಕಿರಿಯರಿಗೆ ಮಾರ್ಗದರ್ಶನ.  ಜೀವನದಲ್ಲಿಹಿರಿಯರ ಆರೋಗ್ಯದತ್ತ ಗಮನವಿರಲಿ. ಪಶ್ಚಿಮ ದಿಕ್ಕಿನಿಂದ  ಶುಭ  ಸಮಾಚಾರ ನಿರೀಕ್ಷೆ. ಗೃಹಿಣಿಯರಿಗೆ ಸಮಾಧಾನ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೪.ಕರ್ಕಾಟಕ:

 ಆಧ್ಯಾತ್ಮಿಕ ಮಾರ್ಗದಿಂದ ಮನಸ್ಥೈರ್ಯ ಪ್ರಾಪ್ತಿ. ಉದ್ಯೋಗ, ವ್ಯವಹಾರದಲ್ಲಿ ಯಶಸ್ಸಿನತ್ತ ದಾಪುಗಾಲು. ವೈವಾಹಿಕ  ಜೀವನದಲ್ಲಿ ಸಂತೃಪ್ತಿ. ಪಾಲುದಾರಿಕೆ  ವ್ಯವಹಾರದಲ್ಲಿ ಲಾಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆನಂದ. ಗಣೇಶ ಪಂಚರತ್ನ, ರಾಮ ಭುಜಂಗಪ್ರಯಾತ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.

೫. ಸಿಂಹ:

 ದಿನವಿಡೀ ಶ್ರಮಿಸಿದರೂ ಮುಗಿಯದಷ್ಟು ಕಾರ್ಯಗಳು. ಹೊಸ ಪಾಲುದಾರಿಕೆ ವ್ಯವಹಾರಕ್ಕೆ ಒಪ್ಪಿಗೆ. ವೈದ್ಯ ವೃತ್ತಿಯವರಿಗೆ ಕೀರ್ತಿ ತರುವ ದಿನ. ಅನಿರೀಕ್ಷಿತ ಧನಾಗಮ. ಆಪ್ತರ ಮಾರ್ಗದರ್ಶನದಿಂದ ಕಾರ್ಯ ಯಶಸ್ವಿ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

೬. ಕನ್ಯಾ:

 ಸಣ್ಣದಾದರೂ ನಿರ್ಣಾಯಕವಾದ ಕಾರ್ಯ. ದೂರದಿಂದ  ಶುಭವಾರ್ತೆ. ವಾಹನ  ವ್ಯವಹಾರದಲ್ಲಿ ಸಾಮಾನ್ಯ ಲಾಭ‌. ದ್ರವ ಪದಾರ್ಥ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಹಿರಿಯರ ಮತ್ತು ಗೃಹಿಣಿಯರ ಆರೋಗ್ಯ ಗಮನಿಸಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತಪಂಜರ ಸ್ತೋತ್ರ, ಲಕ್ಚ್ಮೀಸ್ತೋತ್ರ ಓದಿ.

೭.ತುಲಾ:

 ಚಿತ್ತ ಚಾಂಚಲ್ಯಕ್ಕೆ  ಎಡೆಗೊಡದಿರಿ. ಪತಿ- ಪತ್ನಿಯರೊಳಗೆ ಪರಸ್ಪರ ಸಹಾಯ. ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ. ಗುರುಹಿರಿಯರ ಮಾರ್ಗದರ್ಶನ ಲಭ್ಯ. ಮಕ್ಕಳಿಂದ ಮನೆಯಲ್ಲಿ ಸಂತಸ. ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಭುಜಂಗ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

೮.ವೃಶ್ಚಿಕ:
 ವ್ಯವಹಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಲಾಭ. ಹಿರಿಯರಿಗೆ ಆರೋಗ್ಯ ಉತ್ತಮ. ತಾಳ್ಮೆಯಿಂದ ಕಾರ್ಯದಲ್ಲಿ ಯಶಸ್ಸು ಆಯೋಜಿತ ಪ್ರಯಾಣ ಮುಂದಕ್ಕೆ. ಗೃಹಿಣಿಯರಿಗೆ, ಮಕ್ಕಳಿಗೆ  ಶುಭದಿನ. ಗಣೇಶ ಕವಚ, ದಾರಿದ್ರ್ಯ ದಹನ ಶಿವಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.

೯. ಧನು:
ಸಮಾಧಾನದ ವರ್ತನೆಯಿಂದ  ಸಕಲ‌ ಕಾರ್ಯಸಿದ್ಧಿ. ವಸ್ತ್ರೋದ್ಯಮಿಗಳಿಗೆ ಲಾಭ. ಉದ್ಯೋಗಸ್ಥರಿಗೆ ಮಂದ ಗತಿಯಲ್ಲಿ ಮುನ್ನಡೆ. ವಿವಾಹ ಮಾತುಕತೆ ಯಶಸ್ವಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಸ್ತೋತ್ರ, ರಾಮರಕ್ಷಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.


೧೦.ಮಕರ: 

ಅಭಿಪ್ರಾಯ ವ್ಯಕ್ತಪಡಿಸಲು  ಆತುರ ಬೇಡ.  ಉದ್ಯೋಗ, ವ್ಯವಹಾರ ಪ್ರಗತಿ. ಸಾಗರೋತ್ಪನ್ನ ವ್ಯಾಪಾರಿಗಳಿಗೆ ಹೇರಳ  ಲಾಭ. ದೇವತಾರ್ಚನೆಯಲ್ಲಿ  ಆಸಕ್ತಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಶುಭ. ಗಣೇಶ ಕವಚ, ದೇವೀಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧. ಕುಂಭ:
 
ಸೇವಾ ಕಾರ್ಯಗಳಲ್ಲಿ ಆಸಕ್ತಿ ಉದ್ಯೋಗಸ್ಥರಿಗೆ ಹುದ್ದೆಯಲ್ಲಿ ಪದೋನ್ನತಿ ಸಂಭವ. ಗೃಹಿಣಿಯರಿಗೆ ದ್ರವ್ಯಲಾಭ. ಉನ್ನತ ವ್ಯಾಸಂಗಾಸಕ್ತರಿಗೆ  ಅನುಕೂಲದ ವಾತಾವರಣ. ಹಿರಿಯರಿಗೆ, ಮಕ್ಕಳಿಗೆ ಸಂತಸದ ವಾತಾವರಣ. ಗಣೇಶ ಕವಚ, ಶಿವನಾಮಾವಲ್ಯಷ್ಡಕ, ಶನಿಮಹಾತ್ಮೆ ಓದಿ.


೧೨. ಮೀನ:

ದೂರದ ಸ್ಥಳಕ್ಕೆ ಭೇಟಿ ಸಂಭವ. ಹೊಸ ಕಾರ್ಯಾರಂಭಕ್ಕೆ ವಿಘ್ನ.ಹಳೆಯ ವಿವಾದ ಪರಿಹಾರ.ಕೃಷ್ಯುತ್ಪನ್ನಗಳಿಂದ  ಲಾಭ. ಹಿರಿಯರ, ಗೃಹಿಣಿಯರ,ಮಕ್ಕಳ ಆರೋಗ್ಯ ಸ್ಥಿರ. ವ್ಯವಹಾರಾರ್ಥ ಸಣ್ಣ ಪ್ರಯಾಣ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.