ದಿನ ಭವಿಷ್ಯ
01-08-2025

ಜ್ಯೋತಿರ್ಮಯ.
ಅದೃಷ್ಟ ಸಂಖ್ಯೆ 4
೧.ಮೇಷ:
ಅಲ್ಪ ಪ್ರಯತ್ನದಲ್ಲೇ ಕಾರ್ಯಸಿದ್ಧಿ. ಪರಿಚಿತರಿಗೆ ಸಹಾಯ ಮಾಡಿಕೊಟ್ಟ ತೃಪ್ತಿ. ವಿವಾಹ ಸಂಬಂಧ ಮಾತುಕತೆ ಯಶಸ್ವಿ. ಹಿರಿಯರಿಗೆ,ಗೃಹಿಣಿಯರಿಗೆ, ಮಕ್ಕಳಿಗೆ ಸಂತಸ. ಒಟ್ಟಿನಲ್ಲಿ ಎಲ್ಲ ಶುಭಫಲಗಳನ್ನು ಕಾಣಬಹುದು. ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.
೨. ವೃಷಭ:
ಎಲ್ಲ ಹಂತಗಳಲ್ಲೂ ಪರಿಶ್ರಮದಿಂದ ವಿಜಯ ಪ್ರಾಪ್ತಿ. ಅಧ್ಯಾಪಕರ ಜ್ಞಾನಸಾಧನೆಗೆ ಗೌರವ. ಹಿರಿಯರ ಆರೋಗ್ಯ ಗಮನಿಸಿ. ಹೊಸ ಸಂಪಾದನೆ ಅವಕಾಶಗಳ ಅನ್ವೇಷಣೆ. ಮಕ್ಕಳಿಗೆ ಯೋಗ್ಯ ಮಾರ್ಗದರ್ಶನದ ವ್ಯವಸ್ಥೆ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೩.ಮಿಥುನ:
ಎಲ್ಲ ಮಗ್ಗುಲುಗಳಲ್ಲಿ ಪ್ರಯತ್ನದಿಂದ ಕಾರ್ಯಸಿದ್ಧಿ. ಆದಾಯ ಗಳಿಕೆಗೆ ತಾವಾಗಿ ಒಲಿದು ಬರುವ ಅವಕಾಶಗಳು. ಹಿರಿಯರಿಗೆ ನೆಮ್ಮದಿ, ಮಕ್ಕಳಿಗೆ ಸಂಭ್ರಮ. ಸತ್ಕಾರ್ಯಕ್ಕೆ ದಾನ ಮಾಡಿ ಸಾರ್ಥಕ ಭಾವ ಹೊಂದುವಿರಿ. ವಾಹನ ದುರಸ್ತಿಗೆ ಧನವ್ಯಯ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೪.ಕರ್ಕಾಟಕ:
ತಾನಾಗಿ ಬಂದ ಅವಕಾಶದ ಸದುಪಯೋಗ. ನೊಂದವರಿಗೆ ಸಾಂತ್ವನ ಹೇಳಿ ಧನ್ಯರಾಗುವ ಯೋಗ. ಹಳೆಯ ಆತ್ಮೀಯ ಗೆಳೆಯರ ಭೇಟಿ. ಕೃಷಿಕರಿಗೆ ಸಂತೋಷ, ಸಮಾಧಾನದ ಸನ್ನಿವೇಶ. ನೆಂಟಸ್ತಿಕೆ, ಉದ್ಯೋಗ ಅನ್ವೇಷಣೆಗೆ ಸಹಾಯ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ತೋತ್ರ, ಗುರುಸ್ತೋತ್ರ ಓದಿ
೫.ಸಿಂಹ:
ಅಪಾತ್ರದಾನ ಮಾಡದಿದ್ದರೆ ಪಾಪವಿಲ್ಲ. ಉದ್ಯೋಗ, ವ್ಯವಹಾರ ರಂಗಗಳಲ್ಲಿ ಅಡಚಣೆ ನಿವಾರಣೆ. ಆಪ್ತಮಿತ್ರನಿಂದ ಸಕಾಲಿಕ ಸಹಾಯ. ಹಿರಿಯರ ಆರೋಗ್ಯ ತೃಪ್ತಿಕರ. ಇತ್ತಂಡಗಳ ವ್ಯವಹಾರಗಳು ಪಾರದರ್ಶಕವಾಗಿರಲಿ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೬. ಕನ್ಯಾ:
ಸಂಪೂರ್ಣ ಆರೋಗ್ಯ ಪ್ರಾಪ್ತಿಯಿಂದ ಸಮಾಧಾನ. ವೃತ್ತಿಪರ ಉದ್ಯೋಗಸ್ಥರಿಗೆ ಸರ್ವತ್ರ ಅನುಕೂಲ. ಬಂಧುವರ್ಗದವರಿಗೆ ಸಹಾಯ ಮಾಡುವ ಸಂದರ್ಭ. ದಂಪತಿಗಳ ನಡುವೆ ಹೊಂದಾಣಿಕೆ, ಅನುರಾಗ ವೃದ್ಧಿ. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೭.ತುಲಾ
ದೇಹ, ಮನಸ್ಸಿನ ಆರೋಗ್ಯ ವೃದ್ಧಿ. ವೃತ್ತಿರಂಗದಲ್ಲಿ ಸ್ಪರ್ಧೆ ಎದುರಿಸಲು ಸಿದ್ಧತೆ. ಗೃಹೋದ್ಯಮಗಳಲ್ಲಿ ತೊಡಗಿರುವವರಿಗೆ ಅನುಕೂಲದ ವಾತಾವರಣ. ಆತ್ಮಬಲ ವೃದ್ಧಿಗಾಗಿ ಯೋಗ, ಧ್ಯಾನ, ಜಪಾದಿಗಳಿಗೆ ಸಮಯ ನೀಡಿಕೆ. ಒಟ್ಟಿನಲ್ಲಿ ಮಿಶ್ರಫಲಗಳ ದಿನ. ಗಣೇಶ ಪಂಚರತ್ನ, ರಾಮಭುಜಂಗ ಪ್ರಯಾತ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.
೮.ವೃಶ್ಚಿಕ:
ಉದ್ಯೋಗ ರಂಗದ ಸಾಧನೆಯಿಂದ ಮೇಲಿನವರಿಗೆ ಹರ್ಷ. ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಸ್ಥಿರ. ಗೃಹಿಣಿಯರಿಗೆ ಆಯ್ದ ಕಸುಬುಗಳಲ್ಲಿ ಆಸಕ್ತಿ. ಮಕ್ಕಳ ಸಾಧನೆಯಿಂದ ಹರ್ಷ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.
೯. ಧನು:
ಆವಶ್ಯಕತೆಗೆ ಸರಿಯಾಗಿ ಒದಗಿಬಂದ ಸಹಾಯ. ದೇವತಾರಾಧನೆಯತ್ತ ವಿಶೇಷ ಒಲವು. ವ್ಯವಹಾರಸ್ಥರಿಂದ ಹೊಸ ಸಾಧ್ಯತೆಗಳ ಹುಡುಕಾಟ. ಶೀಘ್ರ ಕಾರ್ಯ ಸಿದ್ಧಿಯಿಂದ ಹರ್ಷಾಚರಣೆ. ಹಿರಿಯರ ಆವಶ್ಯಕತೆಗಳ ಕಡೆಗೆ ಗಮನ ಇರಲಿ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೧೦.ಮಕರ:
ಸ್ವಲ್ಪ ಪ್ರಯತ್ನದಿಂದ ಮಹತ್ಕಾರ್ಯ ಸಿದ್ಧಿ. ವಿಳಂಬಿತ ಕಾರ್ಯ ಪೂರ್ಣವಾಗಿ ಸಮಾಧಾನ. ಹೊಸ ಜವಾಬ್ದಾರಿಗಳು ಬರುವ ಸಂಭವ. ಮಕ್ಕಳ ಯೋಗಕ್ಷೇಮದ ಬಗ್ಗೆ ಚಿಂತನೆ. ಮನೆಯ ಎಲ್ಲ ಸದಸ್ಯರ ನಡುವೆ ಸೌಹಾರ್ದದ ವರ್ತನೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.
೧೧. ಕುಂಭ:
ಜನೋಪಯೋಗಿ ಯೋಜನೆಗಳಿಗೆ ನೆರವು ನೀಡಿದ ಸಮಾಧಾನ. ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹ ಲಭ್ಯ. ಅನಿರೀಕ್ಷಿತ ಧನಾಗಮ ಯೋಗವಿದೆ. ಕ್ರೀಡಾಳುಗಳಿಗೆ ಹುಮ್ಮಸ್ಸಿನ ವಾತಾವರಣ. ಎಳೆಯರ ಮಹತ್ವಾಕಾಂಕ್ಷೆ ಈಡೇರುವ ಸೂಚನೆ. ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೧೨.ಮೀನ:
ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು ತೃಪ್ತಿಕರ. ಭೂ ವ್ಯವಹಾರ, ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ ಅಡಚಣೆ. ಕಾರ್ಮಿಕ ವರ್ಗದವರ ಅಡಚಣೆಗೆ ಪರಿಹಾರ. ಉದ್ಯೋಗ ಬದಲಾವಣೆಯ ಪ್ರಯತ್ನ ಬೇಡ. ಸಂಸಾರದಲ್ಲಿ ಸಹಕಾರ, ಸಂತೃಪ್ತಿಯ ವಾತಾವರಣ. ಗಣೇಶ ಕವಚ, ದೇವೀಸ್ತೋತ್ರ, ಶನಿಮಹಾತ್ಮೆ ಓದಿ.