ದಿನ ಭವಿಷ್ಯ

05-08-2025

Aug 5, 2025 - 03:00
ದಿನ ಭವಿಷ್ಯ


             
                  ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ  5

೧. ಮೇಷ:

 ಆರೋಗ್ಯದ ಮೇಲೆ ಹವಾಮಾನ ಏರಿಳಿತದ ಪರಿಣಾಮ. ಉದ್ಯೋಗಸ್ಥರಿಗೆ ಸಹವರ್ತಿಗಳಿಂದ ಸಕಾಲಿಕ ನೆರವು. ಮನಃಪೂರ್ವಕ  ಪ್ರಾರ್ಥನೆಗೆ ಕ್ಷಿಪ್ರಾನುಗ್ರಹ.  ವಾಹನ ಚಾಲನೆಯಲ್ಲಿ ಎಚ್ಚರ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಆನಂದದ ಸಂದರ್ಭ. ಗಣೇಶ ಕವಚ, ಶಿವ ಸಹಸ್ರನಾಮ, ಶನಿಮಹಾತ್ಮೆ ಓದಿ.


  

೨. ವೃಷಭ:

  ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ. ವಿವಿಧ  ಜನೋಪಯೋಗಿ ಕಾರ್ಯಗಳಲ್ಲಿ ಭಾಗಿ. ಉಳಿತಾಯ ಯೋಜನೆಗಳ  ಏಜೆಂಟರಿಗೆ ಒಳ್ಳೆಯ ದಿನ. ಮಕ್ಕಳ ಕಣ್ಣಿನ ಅರೋಗ್ಯ ರಕ್ಷಣೆಗೆ ಗಮನ. ಕೆಲವು ವರ್ಗದ ವ್ಯಾಪಾರಿಗಳಿಗೆ ಅದೃಷ್ಟ.
ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಗುರುಸ್ತೋತ್ರ ಓದಿ.

೩ಮಿಥುನ:

 ಉದ್ಯೋಗ ರಂಗದಲ್ಲಿ ಹೆಚ್ಚಿನ ಜವಾಬ್ದಾರಿ. ಕರಕುಶಲ ಸಾಮಗ್ರಿ ನಿರ್ಮಾಪಕರಿಗೆ  ಆದಾಯ ವೃದ್ಧಿ. ಹಿರಿಯರಿಗೆ ನಿಶ್ಚಿಂತೆಯ ಬದುಕು. ಗೃಹಿಣಿಯರ  ಪ್ರಯತ್ನದ ಫಲವಾಗಿ ಗೃಹೋದ್ಯಮ ಯಶಸ್ವಿ. ಆಸ್ತಿ ಸಂಬಂಧ ವ್ಯಾಜ್ಯ ಮಾತುಕತೆಯಲ್ಲಿ ಪರಿಹಾರ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.

೪.ಕರ್ಕಾಟಕ:

 ಭವಿಷ್ಯವನ್ನು ಭದ್ರಗೊಳಿಸುವ ಸಿದ್ಧತೆಗಳು.  ಕಟ್ಟಡ ನಿರ್ಮಾಣ, ಆಸ್ತಿ ಖರೀದಿ- ಮಾರಾಟ ನಿಧಾನ. ಕನ್ಯಾನ್ವೇಷಿಗಳಿಗೆ ಶುಭ ಸೂಚನೆ. ವ್ಯವಹಾರಾರ್ಥ ಉತ್ತರ ದಿಕ್ಕಿಗೆ ಪ್ರಯಾಣ.ಮಕ್ಕಳ. ಅಧ್ಯಯನಾಸಕ್ತಿ ವೃದ್ಧಿ. ಗಣೇಶ ಪಂಚರತ್ನ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
 


೫.ಸಿಂಹ:

  ಉದ್ಯೋಗ, ವ್ಯವಹಾರಕ್ಕೆ‌ ಬಂದ ವಿಘ್ನ ನಿವಾರಣೆ. ಪಾಲುದಾರರ ವಿಶ್ವಾಸ ಉಳಿಸಿಕೊಳ್ಳುವ ಪ್ರಯತ್ನ. ದೂರದ ಬಂಧುಗಳ ಆಗಮನ. ಕ್ಷೇತ್ರ ವಿಸ್ತರಣೆಯ ಕುರಿತು ವಿಮರ್ಶೆ. ಮಕ್ಕಳಿಗೆ ವ್ಯಾಸಂಗ, ಮನೋರಂಜನೆ ಎರಡರಲ್ಲೂ  ಆಸಕ್ತಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಕವಚ, ಹನುಮಾನ್ ಚಾಲೀಸಾ ಓದಿ.

೬. ಕನ್ಯಾ:
 ಲೌಕಿಕ ದುಃಖ ಉಪಶಮನಕ್ಕೆ ಸಣ್ಣ ಯಾತ್ರೆ. ಮನೋರಂಜನೆ ಕೇಂದ್ರಿತ  ಉದ್ಯಮಗಳ ಪ್ರಗತಿ. ಕ್ರೀಡಾ ಸಾಮಗ್ರಿ ಉತ್ಪಾದಕರಿಗೆ ಉತ್ತಮ ಅವಕಾಶ. ಗೃಹೋಪಕರಣಗಳ‌ ಖರೀದಿಗೆ ಧನವ್ಯಯ. ಹತ್ತಿರದ ದೇವತಾ ಸನ್ನಿಧಿಗೆ ಸಂದರ್ಶನ. ಗಣಪತಿ ಅಥರ್ವಶೀರ್ಷ, ರಾಮರಕ್ಷಾ ಸ್ರೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

೭. ತುಲಾ:

 ಸರಳ ಚಿಕಿತ್ಸೆಯಿಂದ  ಅನಾರೋಗ್ಯ ನಿವಾರಣೆ. ಉದ್ಯೋಗಸ್ಥರಿಗೆ ಕೆಲಸಗಳ ಒತ್ತಡ. ತಾಯಂದಿರಿಗೆ ಮಕ್ಕಳ ಆರೋಗ್ಯದ ಚಿಂತೆ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅಧಿಕ‌ ಲಾಭ. ಬಂಧುಗಳ ಮನೆಗೆ ಭೇಟಿ ಸಂಭವ. ಗಣೇಶ ತ್ರಿಶತಿ ಸ್ತೋತ್ರ, ಕಾರ್ತಿಕೇಯ ಸ್ತೋತ್ರ, ಆದಿತ್ಯ ಹೃದಯ ಓದಿ.

೮.ವೃಶ್ಚಿಕ:

 ಸಂಸಾರ ಸುಖ ಉತ್ತಮ.  ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಸಂದರ್ಭ. ಲೇವಾದೇವಿ ವ್ಯವಹಾರಸ್ಥರಿಗೆ ವಸೂಲಿಯ ಚಿಂತೆ. ಅವಿವಾಹಿತ ಪುತ್ರನಿಗೆ ಯೋಗ್ಯ ಕನ್ಯೆ ಸಿಗುವ ಸೂಚನೆ. ಆಪ್ತ ವಲಯದ ಸಂತೋಷ ಕೂಟದಲ್ಲಿ ಭಾಗಿ. ಗಣಪತಿ ಅಥರ್ವಶೀರ್ಷ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೯.ಧನು:

 ಬಿತ್ತಿದ ಬೀಜ  ಹೆಮ್ಮರವಾಗಿರುವುದನ್ನು ನೋಡಿ ಆನಂದ ವೇದಾಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ. ಉದ್ಯೋಗಸ್ಥರಿಗೆ ಸಾಮಾನ್ಯ ನೆಮ್ಮದಿ. ವಸ್ತ್ರ, ಆಭರಣ, ಸಿದ್ಧ ಉಡುಪು ವ್ಯಾಪಾರಿಗಳಿಗೆ ವ್ಯಾಪಾರದ ಭರಾಟೆ. ಗೃಹಿಣಿಯರ ಆರೋಗ್ಯ ಕುರಿತು ಎಚ್ಚರ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.


೧೦.ಮಕರ:
  ಹೊಸ ಸ್ಥಾನದಲ್ಲಿ ಕಾರ್ಯಕ್ಕೆ ನಿಯೋಜನೆ. ವಾಹನ ಚಾಲನೆಯಲ್ಲಿ ಎಚ್ಚರ. ಸೌಂದರ್ಯ ವರ್ಧಕಗಳ ಮಾರಾಟಗಾರರಿಗೆ ಸದವಕಾಶ. ಕನ್ಯಾನ್ವೇಷಣೆಗಾಗಿ  ದೂರ ಪ್ರಯಾಣ. ವಸ್ತ್ರ, ಆಭರಣ, ಶೋಕಿ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಳ. ಗಣೇಶ ಅಷ್ಟಕ, ಶಿವಕವಚ, ಹನುಮಾನ್ ಚಾಲೀಸಾ ಓದಿ.


೧೧. ಕುಂಭ:

  ಏಳೂವರೆ ಶನಿಯ ಮಹಿಮೆಯಿಂದ ನೆಮ್ಮದಿ ಭಂಗ. ಬಂಧುಗಳೊಡನೆ ಮನಸ್ತಾಪವಾಗದಂತೆ ಎಚ್ಚರ. ಸಮಾಜಸೇವಾ ಅವಕಾಶಗಳಿಗಾಗಿ ಹುಡುಕಾಟ. ಮುದ್ರಣ ಸಾಮಗ್ರಿ ವಿತರಕರಿಗೆ ವ್ಯಾಪಾರ ವೃದ್ಧಿ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. ಗಣಪತಿ ಅಥರ್ವಶೀರ್ಷ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ.

೧೨. ಮೀನ:

ಒಂದಾದ ಮೇಲೊಂದರಂತೆ ಬರುವ ಹೊಣೆಗಾರಿಕೆಗಳು. ಬಂಧುಗಳ ಸಾಂಸಾರಿಕ ಸಮಸ್ಯೆ ನಿವಾರಿಸಲು ಸಹಾಯ. ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ. ಗುರುದರ್ಶನದಿಂದ  ಆತ್ಮಸ್ಥೈರ್ಯ ವೃದ್ಧಿ. ಕಿರಿಯ ಬಂಧುವಿಗೆ ಅವಶ್ಯ ಮಾರ್ಗದರ್ಶನ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.