ಇಂದಿನಿಂದ ಪ್ರತಿಷ್ಠಿತ 'ಜಿಎಲ್ ಆಚಾರ್ಯ' ಜ್ಯುವೆಲ್ಲರ್ಸ್‌ನಲ್ಲಿ ಆಟಿ ಸೇಲ್ ಶುರು
GL Acharya, Aati Sales: ಕರಾವಳಿಯ ಪ್ರತಿಷ್ಠಿತ ಚಿನ್ನಾಭರಣ ಬ್ರಾಂಡ್ ಆಗಿರುವ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಇಂದಿನಿಂದ (ಜು.22) ವಿಶೇಷ ಆಟಿ ಸೇಲ್ ಆರಂಭವಾಗಿದೆ.
ಪುತ್ತೂರು: ಕರಾವಳಿಯ ಪ್ರತಿಷ್ಠಿತ ಚಿನ್ನಾಭರಣ ಬ್ರಾಂಡ್ ಆಗಿರುವ ಜಿಎಲ್ ಆಚಾರ್ಯ(GL Acharya) ಜ್ಯುವೆಲ್ಲರ್ಸ್‌ನಲ್ಲಿ ಇಂದಿನಿಂದ (ಜು.22) ವಿಶೇಷ ಆಟಿ ಸೇಲ್ (Aati Sales) ಆರಂಭವಾಗಿದೆ. ಪುತ್ತೂರು, ಸುಳ್ಯ, ಮೂಡುಬಿದಿರೆ, ಹಾಸನ ಹಾಗೂ ಕುಶಾಲನಗರದ ಜಿಎಲ್ ಆಚಾರ್ಯ ಶಾಖೆಗಳಲ್ಲಿ ಚಿನ್ನಾಭರಣ ಖರೀದಿದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಸೇಲ್ ನಡೆಯಲಿದೆ.
ವಿಶೇಷ ಮಾರಾಟದ ಪ್ರಯುಕ್ತ ಚಿನ್ನದ ಆಭರಣಗಳ (Jewellery) ವಿಎ ಶುಲ್ಕದ ಮೇಲೆ ಪ್ರತಿ ಗ್ರಾಂಗೆ ರೂ.500 ವರೆಗೆ ರಿಯಾಯಿತಿ, ಬೆಳ್ಳಿಯ ಆಭರಣಗಳ ಮೇಲೆ ಪ್ರತಿ ಕೆಜಿಗೆ ಫ್ಲಾಟ್ ರೂ.6000 ರಿಯಾಯಿತಿ ಹಾಗೂ ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್‌ಗೆ ರೂ.7000 ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಅಲ್ಲದೆ ಮೊದಲೇ ಖರೀದಿ ಮಾಡಿದ ಹಳೇಯ ಗ್ಲೋ ಡೈಮಂಡ್‌ಗಳಿಗೆ 90% ಬೈಬ್ಯಾಕ್ ಲಭ್ಯವಿದ್ದು, ಹೊಸ ಗ್ಲೋ ಡೈಮಂಡ್ಸ್‌ಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.

ಚಿನ್ನದ ದರವು ಈ ಹಿಂದೆ ಫೆಬ್ರವರಿ ತಿಂಗಳಿನಲ್ಲಿ ಸುಮಾರು ರೂ.16,500 ವರೆಗೆ ಇದ್ದು, ಸದ್ಯ ರೂ.13,000ಕ್ಕೆ ಬಂದಿದೆ. ಈ ಬೆಳೆ ಇಳಿಕೆಯಿಂದ ಗ್ರಾಹಕರಿಗೆ ಉತ್ತಮ ಉಳಿತಾಯದ ಅವಕಾಶ ದೊರೆತಿದ್ದು, ಆಭರಣಗಳ ಖರೀದಿಗೆ ಇದು ಅತ್ಯಂತ ಸೂಕ್ತ ಸಮಯವಾಗಿದೆ. ಆಕರ್ಷಕ 8% ವಿಎ ಶುಲ್ಕದಿಂದ ಆರಂಭವಾಗುವ ವಿಶೇಷ ಹಳದಿ ಟ್ಯಾಗ್ ಆಭರಣಗಳೊಂದಿಗೆ ಗ್ರಾಹಕರಿಗೆ ಅದ್ಭುತ ಖರೀದಿಗೆ ಅವಕಾಶವಿದೆ.
ಜಿಎಲ್ ಆಚಾರ್ಯ ಶೋರೂಂಗಳಲ್ಲಿ ನವೀನ ವಿನ್ಯಾಸಗಳ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳನ್ನು ವಿಶೇಷ ರಿಯಾಯಿತಿಯಲ್ಲಿ (Special Offer) ಖರೀದಿಸಬಹುದಾಗಿದೆ. ಎಲ್ಲ ವಯೋಮಾನದ ಗ್ರಾಹಕರ ಅಭಿರುಚಿಗೆ ತಕ್ಕಂತೆ ಚಿನ್ನ ಹಾಗೂ ವಜ್ರಾಭರಣಗಳ ಅದ್ಭುತ ಸಂಗ್ರಹ ಮಾರಾಟಕ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ & ಪುರುಷರಿಗಾಗಿ ಆಕರ್ಷಕ ವಿನ್ಯಾಸಗಳ ಆಭರಣಗಳ ಜೊತೆಗೆ 'ಪ್ರಾಚಿ' ವಿಭಾಗದಲ್ಲಿ ವಿನೂತನ ಆಂಟಿಕ್ ಚಿನ್ನಾಭರಣಗಳು ಮತ್ತು ಲೈಟ್ ವೈಟ್ ಆಂಟಿಕ್ ಆಭರಣಗಳ ವಿಶೇಷ ಸಂಗ್ರಹವಿದೆ. ಇದಲ್ಲದೆ 1300ಕ್ಕೂ ಹೆಚ್ಚು ಟ್ರೆಡಿಷನಲ್ ಹಾಗೂ ಮಾಡರ್ನ್ ಕರಿಮಣಿಗಳು, 2500ಕ್ಕೂ ಹೆಚ್ಚು ಸರಗಳ ಕಲೆಕ್ಷನ್, ಗ್ಲೋ ವಜ್ರಾಭರಣ ವಿಭಾಗದಲ್ಲಿ ಸುಮಾರು 3000ಕ್ಕೂ ಅಧಿಕ ಹೊಸ ವಿನ್ಯಾಸಗಳ ಸಂಗ್ರಹವು ಗ್ರಾಹಕರಿಗಾಗಿ ಲಭ್ಯವಿದೆ.

'ಪಾರ್ಥ' ಪುರುಷರ ಚಿನ್ನಾಭರಣಗಳ ವಿಭಾಗದಲ್ಲಿ ಕರ್ಟಿಯರ್ ಕಡ, ಲೇಸರ್ ಕಟ್ಟಿಂಗ್ ಕಡ, ಹೊಸ ವಿನ್ಯಾಸದ ಕ್ಯೂಬನ್ ಚೈನ್ಸ್, ಇಂಡೋ ಇಟಾಲಿಯನ್ ಚೈನ್ಸ್, ನವರತ್ನ ಉಂಗುರಗಳು, ವಿವಿಧ ವಿನ್ಯಾಸದ ಆಂಟಿಕ್ ಹಾಗೂ ಕಾಸ್ಟಿಂಗ್ ಪದಕಗಳು, ವಾಚ್ ಚೈನ್ಸ್ ಸೇರಿದಂತೆ ಹಲವು ಹೊಸ ಮಾದರಿಯ ಆಭರಣಗಳು ಲಭ್ಯವಿದೆ. ಹೊಸ ತಂತ್ರಜ್ಞಾನದ ಮೂಲಕ ತಯಾರಿಸಲಾದ ಹೆಚ್ಚು ಕಾಲ ಬಾಳಿಕೆ ಬರುವ ಲೈಟ್‌ವೈಟ್ ಚಿನ್ನಾಭರಣಗಳು, ಕಲ್ಲಿನ ಆಭರಣಗಳ ಲೈಟ್‌ವೈಟ್ ಕಲೆಕ್ಷನ್ ಪೇಪರ್ ಕಾಸ್ಟಿಂಗ್ ಆಭರಣಗಳು ಹಾಗೂ ವಿವಿಧ ಬಣ್ಣಗಳ ವಿನೂತನ ವಿನ್ಯಾಸದ ಆಭರಣಗಳ ಸಂಗ್ರಹವು ಗ್ರಾಹಕರಿಗಾಗಿ ಸಿದ್ಧವಾಗಿದೆ.

ಆಧುನಿಕ ಮತ್ತು ಪಾರಂಪರಿಕ ಚಿನ್ನಾಭರಣಗಳು, ವಜ್ರಾಭರಣಗಳು ಮತ್ತು ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿರುವ ಸಂಸ್ಥೆಯು ಪುತ್ತೂರು, ಸುಳ್ಯ, ಮೂಡುಬಿದಿರೆ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಶಾಖೆಗಳನ್ನು ಹೊಂದಿದೆ. ಸೀಮಿತ ಅವಧಿಗೆ ಮಾತ್ರ ಲಭ್ಯವಿರುವ ಈ ಆಟಿ ಅಥವಾ ಮಳೆಗಾಲದ ವಿಶೇಷ ಆಫರ್ ಮಾರಾಟದ ಲಾಭವನ್ನು ಗ್ರಾಹಕರು ಪಡೆದುಕೊಳ್ಳಬಹುದು ಎಂದು ಜಿಎಲ್ ಜ್ಯುವೆಲರ್ಸ್ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.